Thursday, 12 December 2019

ತುಳು ಯಕ್ಷಗಾನ

ತುಳು ಯಕ್ಷಗಾನ




ಯಕ್ಷಗಾನದಲ್ಲಿ ಭಾಷೆ,ಪ್ರಸಂಗ ಮತ್ತು ವೇಷಭೂಷಣಗಳಲ್ಲಿ ವೈಶಿಷ್ಟ್ಯತೆಗಳನ್ನು ಮೈಗೂಡಿಸಿಕೊಂಡಿರುವ ತುಳು ಯಕ್ಷಗಾನ ಪರಂಪರೆಯನ್ನು ವಿದ್ವಾಂಸರು "ತುಳುತಿಟ್ಟು" ಎಂದು ಗುರುತಿಸಿಕೊಂಡಿದ್ದಾರೆ. ಇದು ತೆಂಕುತಿಟ್ಟು ಯಕ್ಷಗಾನದ ಪ್ರಭೇದವಾಗಿ ವ್ಯವಸಾಯಿ ಮೇಳವಾಗಿ ಬೆಳೆದು ಬಂತು.ತುಳು ಯಕ್ಷಗಾನವು ತುಳುನಾಡಿನಲ್ಲಿ ಉಗಮವಾದರೂ,ಅದರ ಮಾಧ್ಯಮ ಕನ್ನಡವೇ ಆಗಿದ್ದಿತು. ಹಿಂದಿನ ದಿನಗಳಲ್ಲಿ ಕನ್ನಡ ಭಾಷೆಯೇ ಪ್ರಧಾನವಾಗಿದ್ದರಿಂದ ತುಳು ಭಾಷೆಯ ಪ್ರಸಂಗಗಳು-ಪ್ರದಶ‌‌ನಗಳು ವಿಫುಲವಾಗಿ ಕಂಡು ಬರುತ್ತದೆ.

ತುಳು ಯಕ್ಷಗಾನ ಬೆಳೆದು ಬಂದ ರೀತಿ
೧೮೮೭ರಲ್ಲಿ ಬಾಯಾರು ಪೆರುವಡಿ ಸಂಕಯ್ಯ ಭಾಗವತರು ರಚಿಸಿದ "ಪಂಚವಟಿ-ವಾಲಿಸುಗ್ರೀವೆರೆ ಕಾಳಗೊ" ಎಂಬುದು ತುಳು ಭಾಷೆಯಲ್ಲಿ ದೊರಕಿದ ಮೊದಲ ಉಪಲಬ್ದ ಪ್ರಸಂಗ ಕೃತಿ. ಅನಂತರ ಮೂವತ್ತರ ದಶಕದಲ್ಲಿ "ಕೃಷ್ಣ ಸಂಧಾನ","ಅಂಗದ ಸಂಧಾನ"ಮೊದಲಾದ ಪ್ರಸಂಗ ಕೃತಿಗಳು ರಚನೆಯಾದವು. ೧೯೨೯ರಲ್ಲಿ ಪಂದಬೆಟ್ಟು ವೆಂಕಟರಾಯರು ಕೋಟಿ-ಚೆನ್ನಯ ಎಂಬ ಅವಳಿ ಪುಣ್ಯಪುರುಷರ ಸಾಹಸಗಾಧೆಯನ್ನು ತುಳು ಯಕ್ಷಗಾನ ಪ್ರಸಂಗಕ್ಕೆ ಅಳವಡಿಸಿದ ಮೊದಲ ಪ್ರಯತ್ನವಾಗಿದೆ. ಪ್ರಾರಂಭದ ದಿನಗಳಲ್ಲಿ ಕನ್ನಡ ಯಕ್ಷಗಾನಗಳು ಜನಪ್ರೀಯಗೊಂಡರೂ ತುಳುನಾಡಿನ ಜನತೆ ತುಳು ಭಾಷೆಯ ಯಕ್ಷಗಾನಕ್ಕೆ ಒಲವು ತೋರಿಸಿದ್ದರ ಪರಿಣಾಮವಾಗಿ ಜಾನಪದ,ಐತಿಹಾಸಿಕ,ಕಾಲ್ಪನಿಕ ಪ್ರಸಂಗಗಳ ಟೆಂಟ್ ಮೇಳಗಳು ಹುಟ್ಟಿಕೊಂಡವು.

ತುಳು ಯಕ್ಷಗಾನ ಪ್ರಸಂಗಗಳು



  1. ತುಳುನಾಡಸಿರಿ
  2. ಕಾಡಮಲ್ಲಿಗೆ
  3. ತುಳುನಾಡ ಬಲಿಯೇಂದ್ರ
  4. ಕೋಟಿ-ಚೆನ್ನಯ
  5. ನಾಗಸಂಪಿಗೆ
  6. ಬಹ್ಮಮೊಗೆರರು[೭]
  7. ಕೋಡ್ದಬ್ಬು
  8. ಕಲ್ಕುಡ-ಕಲ್ಲುಟಿ‍
  9. ಗೆಜ್ಜೆದ-ಪೂಜೆ [೮]
  10. ಅಮರ್ ಬೊಳ್ಳಿಲು [೯]
  11. ಬಾರಗ
  12. ಕಾಂತಬಾರೆ-ಬೂದಾಬಾರೆ
  13. ದೇವುಪೂಂಜ ಪ್ರತಾಪ
  14. ಬ್ರಹ್ಮ-ಬಲಾಂಡಿ
  15. ಸತ್ಯದಪ್ಪೆ ಚೆನ್ನಮ್ಮ
  16. ಬನತ್ತ ಬಂಗಾರ್
  17. ಬನತ್ತ ಬೊಬ್ಬರ್ಯೆ
  18. ಕಚ್ಚೂರ ಮಡಿ
  19. ಬಾಲೆ ಭಾಗ್ಯವಂತೆ

ತುಳು ಯಕ್ಷಗಾನ ಮೇಳಗಳು
  1. ಶ್ರೀ ಸೋಮನಾಥೇಶ್ವರ ಮೇಳ ಇರಾ ಸುರತ್ಕಲ್
  2. ಕನಾ‍ಟಕ ನಾಟಕ ಸಭಾ ಮಂಡಳಿ ಮಂಗಳೂರು
  3. ಶ್ರೀ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ ಕದ್ರಿ
  4. ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮಂಡಳಿ ಕುಂಬಳೆ
  5. ಬಪ್ಪನಾಡು ಮೇಳ
  6. ಸುಬ್ರಹ್ಮಣ್ಯ ಮೇಳ
  7. ಮಂಗಳಾದೇವಿ ಮೇಳ
  8. ಕುಂಟಾರು ಮೇಳ
  9. ಮಧೂರು ಮೇಳ
  10. ಪುತ್ತೂರು ಮೇಳ

✓ ಸಂಗ್ರಹ -- Wikipedia

Tuesday, 22 January 2019

ಕಂಬಳದ ಹಿನ್ನಲೆ

ಕಂಬಳದ ಹಿನ್ನಲೆ


ತುಳುನಾಡಿನಲ್ಲಿ ಕಂಬಳದ ಆಚರಣೆ ಸುಮಾರು 800-900 ವರುಶಗಳ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. #ಉಡುಪಿ ತಾಲೂಕಿನ ಕೆಂಜೂರಿನ ಸಮೀಪದ ಕರ‍್ಜೆ ಎಂಬಲ್ಲಿ ದೊರಕಿದ ಆಳುಪ ರಾಣಿ ಬಲ್ಲಮಹಾದೇವಿಗೆ ಸಂಬಂದಿಸಿದ ಕಲ್ಬರಹದಲ್ಲಿ ಕಂಬಳದ ಬಗ್ಗೆ ಹೇಳಲಾಗಿದೆ. “ಸುಗ್ಗಡಿಯ ಕಂಬಳಕ್ಕೆ ಎರಡು ಎತ್ತು ಕರೆತರಬಹುದು” ಎಂದು ಇದರಲ್ಲಿ ಹೇಳಲಾಗಿದೆ.

1) ಇದರ ಕಾಲ ಕ್ರಿ. ಶ.1200 (ಶಕ ವರುಶ 1281). ಕಂಬಳ ಆಚರಣೆಯು ಸುಗ್ಗಿ ಬೆಳೆಯ ಬಿತ್ತನೆಯ ಸಮಯದಲ್ಲಿ ನಡೆಯುತ್ತದೆ. ಕುಂದಾಪುರ ಕನ್ನಡದಲ್ಲಿ ಸುಗ್ಗಿ ಅಗೇಡಿ ಎಂದರೆ ಸುಗ್ಗಿಯ ನೇಜಿ ಬಿತ್ತುವ ಜಾಗ. ಸುಗ್ಗಿ ಅಗೇಡಿ > ಸುಗ್ಗೇಡಿ > ಸುಗ್ಗಾಡಿ ಎಂದು ಪ್ರಯೋಗವಾಗಿರಬಹುದು ಎಂದು ತಿಳಿವಿಗರು ಅಬಿಪ್ರಾಯಪಟ್ಟಿದ್ದಾರೆ. ಕ್ರಿ. ಶ. ಹನ್ನೆರಡನೆಯ ನೂರೇಡಿನಲ್ಲಿಯೇ ಸುಗ್ಗಿಯ ಕಾಲದಲ್ಲಿ ಕಂಬಳ ನಡೆಯುತ್ತಿದ್ದದನ್ನು ಕಲ್ಬರಹದ ಹೇಳಿಕೆ ತಿಳಿಸುತ್ತದೆ. ಇದರಿಂದ ಕಂಬಳ ಕನಿಶ್ಟ ಎಂಟುನೂರು ವರುಶಗಳಿಂದ ಆಚರಿಸಲ್ಪಡುತ್ತಾ ಬಂದಿದೆ ಎಂದು ಸ್ಪಶ್ಟವಾಗುತ್ತದೆ. ಕ್ರಿ. ಶ.1402ರ ಬಾರಕೂರು ಕಲ್ಬರಹದಲ್ಲಿ ‘ಆ ಗದ್ದೆಯ ಕೆಳಗಿನ ಕಂಬಳ ಬಗ್ಗೆ’ ಎಂದು ಹೇಳಲಾಗಿದೆ.

2) ಕ್ರಿ. ಶ. 1421ರ ಬಾರಕೂರು ಕಲ್ಬರಹದಲ್ಲಿ “ದೇವರು ಸಾವಂತನ ಕಂಬಳ ಗದ್ದೆಯ ಮೇಲೆ” ಎಂದು ಕಂಬಳಗದ್ದೆಯನ್ನು ಹೇಳಲಾಗಿದೆ.

3) ಕ್ರಿ. ಶ. 1424ರ ಬಾರಕೂರು ಕಲ್ಬರಹದಲ್ಲಿ “ಹೊತ್ತಾಗಿ ಮಾಡಿದ ಕಂಬಳ ಗದ್ದೆ” ಎಂದಿದೆ.

4) ಕ್ರಿ. ಶ. 1437ರ ಉಡುಪಿ ಕಲ್ಬರಹವು “ಮೂಲವಾಗಿ ಕೊಡಬಾಳು ಕಂಬಳ ಗದ್ದೆ ಕೊಯಿಲ್ ಹದಿನಾರು” ಎಂದಿದೆ.

5) ಕ್ರಿ. ಶ. 1482ರ ಕೊಲ್ಲೂರು ಕಲ್ಬರಹದಲ್ಲಿ “ಅವರಿಗೆ ಒಬ್ಬ ಬಾಳು ಕಂಬಳ ಗದ್ದೆ” ಎಂದು ಹೇಳಲಾಗಿದೆ.

6) ಕ್ರಿ. ಶ. 1521ರ ಬಾರಕೂರು ಕಲ್ಬರಹದಲ್ಲಿ ಕಂಬಳ ಗದ್ದೆಯಲಿ ನಡುಹುಣಿ” ಎಂದು ಹೇಳಲಾಗಿದೆ.

7) ಕ್ರಿ. ಶ. 1676ರ ಸುಬ್ರಹ್ಮಣ್ಯದ ಕಲ್ಲುಮಾಣೆರು ಶಂಕರದೇವಿ ಬಲ್ಲಾಳ್ತಿಯ ಹೆಸರಿನಲ್ಲಿರುವ ಕಲ್ಬರಹದಲ್ಲಿ “ನನ್ನ ಕಂಬಲ ಗದ್ದೆಯಿಂದ ನಡೆಸಬಹುದು” ಎಂಬಲ್ಲಿ ಕಂಬಳಗದ್ದೆಯ ಬಗ್ಗೆ ಹೇಳಲಾಗಿದೆ.
Credit: Tulunad State- Facebook Page.

Sunday, 20 January 2019

ಅಳುಪ ಉತ್ಸವ :- ಬಾರಕೂರು

ಅಳುಪ ಉತ್ಸವ :- ಬಾರಕೂರು
ನೋಡ ಬನ್ನಿ ನಮ್ಮ ಬಾರಕೂರು ಐತಿಹಾಸಿಕ ನಗರಕ್ಕೆ
Credit: Beauty of Tulunad - Page .

ಇತಿಹಾಸದಲ್ಲಿ ತುಳುನಾಡ ಅರಸರ ರಾಜಧಾನಿಯಾಗಿದ್ದ ಬಾರಕೂರಿನಲ್ಲಿ ಅಳುಪ ಉತ್ಸವಕ್ಕೆ (ಜನವರಿ. 25, 26, 27) ಸರ್ವರಿಗೂ ಆತ್ಮೀಯ ಸ್ವಾಗತ






ಪ್ರತಿಯೋಂದು ಊರಿಗೂ ತನ್ನದೇ ಆದ ಹಿನ್ನಲೆಯಿರುತ್ತದೆ. ಈ ಹಿನ್ನಲೆಯಿಂದ ಆ ಗ್ರಾಮದ ಹೆಸರು ಪ್ರಸಿದದ್ವಾಗಲು ಸಾದ್ಯ ಅದೇ ರೀತಿ ಉಡುಪಿಯಿಂದು ಸುಮಾರು 16 ಕಿ.ಮೀ ಅದೇ ರೀತಿ ಕುಂದಾಪುರದಿಂದ 23 ಕಿ.ಮೀ ದೂರವಿರುವ ಇತಿಹಾಸ ಪುಟದಲ್ಲಿ ತನ್ನ ಹೆಸರನ್ನು ಹೊಂದಿರುವ ಊರು ಬಾಕರ್ೂರು.ತುಳುನಾಡಿನ ರಾಜಧಾನಿಯಾಗಿ ಮೆರೆದಿದ್ರೂ ಇಲ್ಲಿ ತುಳು ಭಾಷೆ ಮಾತನಾಡುವ ಜನಯಿಲ್ಲ ಎಂಬುದು ನಿಜಕ್ಕೂ ಅಚ್ಚರಿಯ ಸಂಗತಿ ಅಲ್ಲವೇ?

ಹಿಂದಿನ ಕಾಲದಲ್ಲಿ ಪಟ್ಟಣಗಳು, ರಾಜದಾನಿಗಳು ರಾಜಾಶ್ರಯದಿಂದ ಪ್ರವರ್ಧಮಾನಕ್ಕೆ ಬಂದುನಂತರ ಕ್ರಮೇಣ ಕಾದ ರಾಜಕೀಯ ಬದಲಾವಣೆಯೊಂದಿಗೆ ನಶಿಸಲ್ಪಡುತ್ತಿದ್ದವು. ಆದರೆಕರಾವಳಿಯ ಈ ಪಟ್ಟಣಬಾರಕೂರುಕಾಲಕ್ಕೆ ಸವಲಾಗಿ ನಿಂತಿದೆ.

ಬಾ ಯಾತ್ರಿಕನೇ ಕೈ ಮುಗಿದು ಒಳಗೆ ಬಾ ಇದು ಬರಿಯ ಶಿಲೆಯಲ್ಲ,ಶಿಲ್ಪಕಲೆಯತವರೂರು ಎಂಬತೆಇಲ್ಲಗೆ ಬರುವವರನ್ನು ಸ್ವಾಗತಿಸಲು ನಿಂತಿದೆಯೋ ಎಂಬಂತಿದೆ ಬಾರಕೂರಿನ ಪ್ರವೇಶ ದ್ವಾರದಲ್ಲಿ ಇರುವಕಲ್ಲಿನ ಚಪ್ಪರ ಕಲ್ಲು ಚಪ್ಪರಇಲ್ಲಿ ಕಲ್ಲೂ ಕಲ್ಲುಗಳು ಕೂಡ ಇತಿಹಾಸ ಹೇಳುತ್ತದೆ. ಪ್ರತಿ ಕಲ್ಲಿನಲ್ಲಿ ಶಿಲ್ಪ ಅರಳಿ ನಿಂತಿದೆ.ಪ್ರತಿ ಶಿಲ್ಲಕ್ಕೂ ಒಂದೊಂದು ಕಥೆಯಿದೆ. ಇವೆಲ್ಲವೂ ಶ್ರೀಮಂತ ಬಾರಕೂರಿನ ಗತವೈಭವವನ್ನು ಸಾರುತಾ ನಿಂತಿದೆ.

ಬಾರಕೂರು ದೇವಾಲಯಗಳ ಬೀಡು ಇಲ್ಲಿ 365 ದೇವಾಲಗಳಿದ್ದು ಪ್ರತಿದಿನವೂ ಒಂದೊಂದು ದೇವಾಲಯದಲ್ಲಿ ಉತ್ಸವ ನಡೆಯುತ್ತಿತ್ತು ದೊರೆಯು ಪ್ರತಿ ದಿನ ಒಂದೊಂದು ದೇವಾಲಯಕ್ಕೆ ಭೇಟಿ ನೀಡಿ ದೇವರ ಸೇವೆ ಮಾಡುತ್ತಿದ್ದನು ಎಂದು ಸ್ಥಳ ಪುರಾಣ ಹೇಳುತ್ತದೆ.ಇಂದು ಕೂಡ ನಮ್ಮ ಸಮುದಾಯದ ಕುಲ ದೇವಸ್ಥಾನಗಳು ಇರುವುದು (ಹೆಚ್ಚಿನ) ಇದೇಬಾರಕೂರಿನಲ್ಲಿ. ಇದರ ಇತಿಹಾಸವನ್ನು ಅವಲೋಕಿಸಿದೆರೆಇದು ಹಿಂದೆ ವ್ಯಾಪಾರ ಕೇಂದ್ರವಾಗಿದ್ದು,ವಿಜಯನಗರ ಅರಸರು ಇಲ್ಲಿ ಕೋಟೆಯನ್ನು ನಿಮರ್ಾಣ ಮಾಡಿದ್ದರು ಇದರ ಸಮೀಪ ಹೊಸನಾಳದಲ್ಲಿ ದೊರೆತಿರುವ ಸುಮಾರು 9 ನೇ ಶತಮಾನದ ವೀರಗಲ್ಲಿನಲ್ಲಿಬರಕನೂರು ಎಂಬ ಹೆಸರಿದೆ.ಮುಂದೆ ಇದು ಬಾರಕೂರು ಆಗಿರಬಹುದು. ಬಾರಕೂರಿನ ಘನತೆ ಎಷ್ಟೊಂದು ಪಸರಿಸಿತ್ತು ಎಂದರೆ ಹೊಯ್ಸಳರ 12ನೇ ಶತಮಾನದ ಶಾಸನದಲ್ಲಿ ಪಶ್ಚಿಮ ಘಟ್ಟವನ್ನು ಬಾಕರ್ೂರು ಘಟ್ಟ ಎಮದು ಕರೆಯಲಾಗಿದೆ.

ವಿಜಯನಗರದ ಅರಸರು ಇಲ್ಲಿ 80 ಕ್ಕೂ ಹೆಚ್ಚಿನ ರಾಜ್ಯಪಾಲರನ್ನು ನೇಮಕ ಮಾಡಿದ್ದರೆಂದು ಇತಿಹಾಸ ಹೇಳುತ್ತದೆ. ವಿಜಯನಗರದ ನಂತರ ಕಳದಿಯ ಅರಸರು ರಾಜ್ಯಭಾರ ಮಾಡುತ್ತಿದ್ದು,ಬಿಜಾಪುರದ ಆದಿಲ್ಸಾಹಿ ದಾಳಿಯಿಂದ ಬಾಕರ್ೂರು ಸುಟ್ಟು ಹೋಯಿತು ಎಂಬುದಾಗಿ ತೆಳಿಸುತ್ತದೆ. ಇಲ್ಲಿ ಸುವ್ಯವಸ್ಥಿತವಾದ ಸಾಮಾಜಿ ವ್ಯವಸ್ಥೆಯಿದ್ದು,ವ್ಯಾಪಾರ ವ್ಯವಹಾರಗಳು ಪರಸ್ಪರ ಪೂರಕವಾಗಿದ್ದು ಇದು ಸಮೃದ್ದವಾಗಿ ಬೆಳೆಯಲು ಕಾರಣವಾಯಿತು.ಆಡಳಿತದ ಹಿತದೃಷ್ಟಿಯಿಂದ ರಾಜರು ಇದನ್ನು ಕೇರಿಗಳಾಗಿ ವಿಂಗಡಿಸಿದ್ದರು ಅದು ಈಗಲೂ ಅದೇ ಹೆಸರಿನಿಂದ ಕರೆಯಲ್ಪಡುತ್ತದೆ.

ಕೋಟೆಕೇರಿ, ಮೂಡುಕೇರಿ, ಚೌಳಿಕೆರಿ, ಹೊಸಕೇರಿ ಇತ್ಯಾದಿ.1440 ಶಾಸನವು ಪೌರಾಡಳಿತದ ಬಗ್ಗೆ ತಿಳಿಸುತ್ತದೆ.ಜನತೆಗೆ ಹಕ್ಕುಬಶಾದ್ಯತೆಯ ಬಗ್ಗೆ ತಿಳಿಸುವ ಶಾಸನವು1407 ರ ಶಾಸನ ನೀಡುತ್ತದೆ.ಅಳುಪರ ಹಾಗೂ ವಿಜಯನಗರದ ಶಾಸನದಲ್ಲಿ ಕೋಟೆ ಬಳಿ ವೀರ ಪರಿವಾರ ದೇವರ ಬಳಿ ಬಿಲ್ಲು,ಬಾಣ,ಗುರಾಣಿ ಮುಂತಾದ ಬಗ್ಗೆ ಉಲ್ಲೇಖವಿದೆ. ಅಲ್ಲದೆ ಅಲ್ಲಿನ ಗೋಡೆಗಳ ಮೇಲೆಯಿರುವ ಉಬ್ಬುಶಿಲ್ಪಗಳು ಅಂದಿನ ಕಲಾ ಪ್ರಕಾರ ಮತ್ತು ಯುದ್ದದ ಸ್ಥಿತಿಗತಿಗೆ ಹಿಡಿದ ಕನ್ನಡಿಯಾಗಿದೆ.ಶತ್ರಗಳ ಅನಿರೀಕ್ಷಿತ ದಾಳಿಯಿಂದ ಸೈನಿಕರನ್ನು ರಕ್ಷಿಸಲು ಕೋಟೆಗಳ ಬಳಿ ಸುರಂಗ ಮಾರ್ಗ ನಿಮರ್ಿಸಲಾಗಿದೆ ಅದರ ಕುರುಹುಗಳು ಈಗಲೂ ನಮ್ಮ ಮುಂದೆಯಿದೆ. ಬಾರಕೂರಿನ ಅರಸೊತ್ತಿಗೆಯನ್ನು ನೆನಪಿಸುವ ಸಿಂಹಾಸನ ಸಿಂಹಾಸನಗುಡ್ಡೆಯೆಂಬಲ್ಲಿ ಈಗಲೂ ನಮಗೆ ಕಾಣ ಸಿಗುತ್ತದೆ.

ಜೈನ ಧರ್ಮದವರು ಇಲಿ ನೆಲೆಸಿದದ್ರು ತಮ್ಮದೇ ಆದ ಧಾಮರ್ಿಕ ಕೇಂದ್ಗರಗಳನ್ನು ರಚನೆ ಮಾಡಿಕೊಂಡಿದ್ದರು.ಇದಕ್ಕೆ ಸಾಕಿಯಾಗಿ ನಿಂತಿದೆ ಕತ್ತಲೆ ಬಸದಿ.ಇಲ್ಲಿನ ಅನೀಕ ದೇವಾಲಯಗಳಲ್ಲಿ 2 ನೇ ಶತಮಾನಕ್ಕೆ ಸೇರಿದೊಂದೇ ಸಂಕೀರ್ಣದಲ್ಲಿರುವ ಜೋಡಿ ದೇಗುಲಬಹುಮುಖ್ಯವಾದದು,ಎರಡೂ ದೇವಾಲಯಗಳು ತಳವಿನ್ಯಾಸದಲ್ಲಿ ಗರ್ಭಗೃಹ,ಸುಖನಾಸಿ ಹಾಗೂ ಸ್ತಂಭಗಳ ಮುಖ ಮಂಟಪಗಳನ್ನಿ ಒಳಗೊಂಡಿದೆ.

ಸುಮಾರು 11 ಶತಮಾನದ ಶಾಸನ ಪ್ರಕಾರ ಬಾರಕೂರಿನಲಿ ಜೈನ ಧರ್ಮ ಉಗಮಿಸಿತು ವಿಜಯನಗರದ ಶಾಸನಗಳು ಬಸದಿಗಳಲ್ಲಿ ನಿಮರ್ಾಣವಾಗಿತ್ತು ಇಲ್ಲಿನ ವರ್ತಕರು ಹೆಚ್ಚಿನವರು ಜೈನರಾಗಿದ್ದುಪೌರಾಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು..ಬಾರಕೂರಿನಲ್ಲಿ ವೀರಶೈವ ಅನುಯಾಯಿಯಾದಕೆಳದಿ ಅರಸರ ಆಡಳಿತಕ್ಕೆ ಬಂದ ನಂತ ನಂತರ ಜೈನ ಧರ್ಮ ಕಡಿಮೆಯಾಯಿತು.1149 ರ ಹೊಯ್ಸಳ ಶಾಸನದಲ್ಲಿ ಬಾರಕೂರು ತನ್ನ ರಾಜ್ಯದ ಒಂದು ಅಂಗವೆಂದು ಹೇಳಲಾಗಿದೆ.ಇನ್ನೋಂದು ಕುತೂಹಲಕಾರಿ ಸಂಗತಿಯೆಂದರೆ ಕುಂದಕನ್ನಡವುಬಾರಕೂರು ಮತ್ತು ಬಸ್ರೂರು ಈ ಎರಡು ಪಟ್ಟಣಗಳಲ್ಲಿ ಅಳಿಯ ಕಟ್ಟು ಸಂಪ್ರದಾಯ ಉಗಮವಾಯಿತು ಎಂದು ಹೇಳಲಾಗಿದೆ.ದಕ್ಷಿಣ ಕನ್ನಡ ಇತಿಹಾಸದಲ್ಲಿಬಾರಕೂರಿನಲ್ಲಿ ದೊರೆತ ಮೂಡುಕೇರಿಯಲ್ಲಿ ದೊರೆತ ಶಾಸನದಲ್ಲಿ ತುಳು ವಿಷಯ ದಾಖಲಾಗಿದೆ ಅದೇ ರೀತಿ ವಿಜಯನಗರದ ಶಾಸನದಲ್ಲಿ ಬಾರಕೂರನ್ನು ತುಳು ರಾಜ್ಯವೆನ್ನಲಾಗಿದೆ.

ಬಾರಕೂರು ಅಳುಪರ ರಾಜಧಾನಿಯಾಗಿದ್ದು,ಅಳುಪ ಅರಸು ಅಳುಪೇಂದ್ರ ಕಾಲದಲ್ಲಿ1139 ಇವನ ಪ್ರಥಮ ಶಾಸನಪಂಚಲಿಂಗೇಶ್ವ ದೇವಾಲಯದಲ್ಲಿದೆ.ದ.ಕ ನೇರವಾಗಿ ಆಡಳಿತ ನಡೆಸಿದ ಕರ್ನಾಟಕ ದ ಪ್ರಥಮ ರಾಜರಾದ ಹೊಯ್ಸಳರು ಕ್ರ.ಶ1333 ರಲ್ಲಿ ಅಳುಪ ರಾಜ್ಯದ ಮೀಲಿನ ಹೊಯ್ಸಳರ ಆಕ್ರಮಣ ಇಲ್ಲಿನ ಇತಿಹಾಸದಲ್ಲಿಮಹತ್ವದ ಬದಲಾವಣೆಯನ್ನುಂಟುಮಾಡಿತು.ಈ ಹೊಯ್ಸಳ ಸೇನೆಯನ್ನು ಹಿಮ್ಮೆಟಿಸುವುದು ಅಸಾದ್ಯವೆಂದು ಮನಗಂಡ ಅಳುಪರಾಜ ಸೋಯಿದೇವರಾಜಕುಮಾರಿ ಚಿಕ್ಕಾಯಿತಾಯಿಯನ್ನು ಹೊಯ್ಸಳ ಅರಸುಮುಮ್ಮಡಿ ಬಲ್ಲಾಳನಿಗೆ ವಿವಾಹ ಮಾಡಿಕೊಟ್ಟ ಇವರು ತುಳುನಾಡಿನಲ್ಲಿ ಆಳ್ವಿಕೆ ಮಾಡತೊಡಗಿದರು. ಇಲ್ಲಿ ಸಿಕ್ಕಿದ ಪ್ರತಿಯೊಂದು ಶಾಸನವು ಆಗಿನ ಕಾಲದ ಇತಿಹಾಸಕ್ಕೆ ಸಾಕ್ಷಿಯಾಗಿದೆ.ಈ ಶಾಸನವು ಯಾರದೋ ಬಚ್ಚಲ ಮನೆಯ ಕಲ್ಲುಗಳಾಗದೆಅದರ ರಕ್ಷಣೆಯನ್ನು ಮಾಡಬೇಕಾಗಿದೆ. ಬಾರಕೂರು ಉತ್ಖನನ ನಡೆಸಿ ಅದರ ಬಗ್ಗೆ ಹೆಚ್ಚಿನ ಅದ್ಯಯನ ನಡೆಸಬೇಕಾಗಿದೆ. ಮಾಹಿತಿ : ರಾಘವೇಂದ್ರ ಪ್ರಭು, ಉಡುಪಿ, ಉಪನ್ಯಾಸಕರು | Courtesy : Beauty of Tulunad