Saturday 2 May 2020

ತುಳು ಲಿಪಿಯ ಅಪಪ್ರಚಾರ.... ಸಹಿಸಲು ಸಾಧ್ಯವಿಲ್ಲ 😡

ತುಳು ಭಾಷೆಗೆ ಲಿಪಿ ಇತ್ತು ಆದರೆ  ಕಾಲ ಕ್ರಮೇಣ ಲಿಪಿ ಬಳಕೆ ಕಡಿಮೆ ಆಗಿ ತುಳು ಲಿಪಿ ನೇಪಥ್ಯಕ್ಕೆ ಸೇರಿದ್ದು ಎನ್ನುವುದು ಭಾಷಾ ತಜ್ಞರ ಅಭಿಪ್ರಾಯ    ಇತ್ತೀಚೆಗೆ ಕೆಲವು ತುಳು ಭಾಷಾಭಿಮಾನಿಗಳು ಅದನ್ನು    ಪುನಃ ಚಾಲ್ತಿಗೆ ತರುವ ಪ್ರಯತ್ನ ಕೂಡ ಮಾಡುತ್ತಿದ್ದಾರೆ ....ಆದರೆ ಕೆಲವು ತುಳು ವಿರೋಧಿಗಳು ನಿರಂತರವಾಗಿ ತುಳು ಲಿಪಿಯ ಬಗ್ಗೆ ಅಪಪ್ರಚಾರಗಳನ್ನು ಮಾಡುತ್ತಾ ಬಂದಿರುತ್ತಾರೆ ಅವರ ಎಲ್ಲಾ ಅಪಪ್ರಚಾರಗಳಿಗೆ ಉತ್ತರ ಕೊಡುವ ಚಿಕ್ಕ ಪ್ರಯತ್ನ ಇದು .

ಅಪಪ್ರಚಾರ 1 :
ತುಳು ಲಿಪಿ ವಿನ್ಯಾಸ ಗೊಳಿಸಿದ್ದು ತಮಿಳು ಬ್ರಾಹ್ಮಣರು ತುಳು ಬ್ರಾಹ್ಮಣರು ಅಲ್ಲ
ಉತ್ತರ : ತಮಿಳು ಬ್ರಾಹ್ಮಣರು ಬಳಸಿದ್ದು ಗ್ರಂಥ ಲಿಪಿ ಯನ್ನು ....ತುಳು ಲಿಪಿ ಗ್ರಂಥ ಲಿಪಿಯ ಆಧಾರಿತ ಲಿಪಿ ಹೌದು ಆದರೆ ಗ್ರಂಥ ಲಿಪಿಗೂ ತುಳು ಲಿಪಿಗೂ ವ್ಯತ್ಯಾಸ ಇದೆ .... ಭಟ್ಟಿ ಪ್ರೋಲು ಲಿಪಿ ಮತ್ತೆ ಕದಂಬ ಲಿಪಿ ಗೆ ಇರುವುದಕ್ಕಿಂತ ಹೆಚ್ಚಿನ ವ್ಯತ್ಯಾಸ ಇದೆ  ( ಚಿತ್ರ 1 ನೋಡಿ ) ....ಹಾಗಾಗಿ ತುಳು ಲಿಪಿ ವಿನ್ಯಾಸ ಗೊಳಿಸಿದ್ದು ತುಳು ಬ್ರಾಹ್ಮಣರು ಅಲ್ಲ ಎಂದಾದರೆ ಕದಂಬ ಲಿಪಿ ವಿನ್ಯಾಸ  ಗೊಳಿಸಿದ್ದು ಕನ್ನಡಿಗರು ಅಲ್ಲ

ಅಪಪ್ರಚಾರ 2 .
 ತುಳು ಲಿಪಿ ಯನ್ನು ತುಳು ಭಾಷೆ ಬರೆಯುವ ಮೊದಲೇ ಸಂಸ್ಕೃತ  ಭಾಷೆ ಬರೆಯಲು ಬಳಸಲಾಗಿದೆ
ಉತ್ತರ ; ಈ ಅಪವಾದ  ಸುಳ್ಳು ಎಂದು ಕಳೆದ 4 - 5 ವರುಷದ ಬೆಳವಣಿಗೆಯಿಂದ ಸಿದ್ಧವಾಗಿದೆ 2014 ರಲ್ಲಿ ಪತ್ತೆ ಆದ ಕಿದೂರು ಶಾಸನ ( ತುಳು ಭಾಷೆ , ತುಳು ಲಿಪಿ ) ದಲ್ಲಿ ಒರುಂಬನೂತ್ತ್ ರಡ್ಡ್ ( 902 ) ಎಂಬ ಇಸವಿ ನಮೂದಿಸಲಾಗಿದೆ ಶಾಲಿವಾಹನ ಶಕ 902 ಅಂದರೆ
ಕ್ರಿಶ 980 ಇದು ಈಗಿನ ವರೆಗಿನ ಅತೀ ಪುರಾತನ ತುಳು ಲಿಪಿ ತುಳು ಭಾಷೆಯ  ಶಾಸನ
 ( ಚಿತ್ರ 2 ನೋಡಿ ) ....ಆದರೆ ಈ ಲಿಪಿಯಲ್ಲಿ  ಸಂಸ್ಕೃತ ಶ್ಲೋಕ ಬರೆದ ಅತೀ ಪುರಾತನ ಹಸ್ತ ಪ್ರತಿ 12 ನೆ ಶತಮಾನದ್ದು ....ಹಾಗಾಗಿ ಸಂಸ್ಕೃತ ಬರೆಯಲು ಮೊದಲು ಬಳಸಿದ್ದಾರೆ ಎಂದು ವಾದ ಮಾಡುವವರು 980 ಇಸವಿ ಗೂ ಹಿಂದಿನ ತುಳು ಲಿಪಿಯಲ್ಲಿ ಬರೆದ ಸಂಸ್ಕೃತ ಹಸ್ತ ಪ್ರತಿ ತೋರಿಸಿ ತಮ್ಮ ವಾದ ಸಿದ್ಧ ಮಾಡಬಹುದು

ಅಪವಾದ 3 .
ಅದು ತುಳು ಲಿಪಿ ಅಲ್ಲ ಅದರ ಹೆಸರು ತಿಗಲಾರಿ ಲಿಪಿ
ಉತ್ತರ : ತಿಗಲಾರಿ ಲಿಪಿ ಎಂಬ ಹೆಸರಿನ  ಉಲ್ಲೇಖ ಇತ್ತೀಚೆಗೆ ಬಂದಿದ್ದು ತುಳು ಏಳಿಗೆಯನ್ನು ಸಹಿಸದ ವ್ಯಕ್ತಿಗಳು ಆ ಹೆಸರನ್ನು ಇಟ್ಟಿದ್ದು ( ತುಳು ನಾಡು ಕರೆಯುವ ಬದಲು ಕರಾವಳಿ ಎಂದು ಕರೆದಂತೆ )
ಆ ಲಿಪಿಯ ಹೆಸರು  ತುಳು ಲಿಪಿ ಅನ್ನುವುದಕ್ಕೆ ಪುರಾತನ ಪುರಾವೆ ಸಿಕ್ಕಿದೆ 16 ನೆ ಶತಮಾನದ ತುಳು ರಾಮಾಯಣದ ಶೀರ್ಷಿಕೆಯಲ್ಲಿ
ಇದು " ತುಳು ಬರಹ ತುಳು ಭಾಸೇ ರಾಮಾಯಣ " ಎಂದು ಬರೆಯಲಾಗಿದೆ  ( ಚಿತ್ರ 3 ನೋಡಿ )
ಅದರ ಹೆಸರು ತಿಗಲಾರಿ ಲಿಪಿ ಎಂದು ವಾದಿಸುವವರು ಅದಕ್ಕಿಂತಲೂ ಹಳೆಯ ಯಾವುದೇ ದಾಖಲೆಗಳಲ್ಲಿ ತಿಗಲಾರಿ ಲಿಪಿ ಎಂಬ ಹೆಸರು ಇದ್ದಿದ್ದನ್ನು ತೋರಿಸಿ ತಮ್ಮ ವಾದವನ್ನು ಸಿದ್ದ ಮಾಡ ಬಹುದು

Copied post... From Jai Tulunad ®