*ನವೆಂಬರ್ ಒಂದರಂದು ಕರಾಳ ದಿನದ ಎಚ್ಚರಿಕೆ*
ನವೆಂಬರ್ ಒಂದರೊಳಗೆ ತುಳು ಭಾಷೆಯನ್ನು ಸಂವಿಧಾನಕ್ಕೆ ಸೇರಿಸಲು ರಾಜ್ಯ ಸರಕಾರ ಕಂಬಳಕ್ಕೆ ಮಾಡಿದ ಹಾಗೆ *ವಿಶೇಷ ಅಧಿವೇಶನ* ಕರೆದು ತುಳು ಭಾಷೆಯನ್ನು ರಾಜ್ಯದ *ಅಧಿಕೃತ ಭಾಷೆ* ಎಂದು ಅಂಗೀಕರಿಸಿ ಕೇಂದ್ರ ಸರಕಾರಕ್ಕೆ ಸಂವಿಧಾನಕ್ಕೆ ಸೇರಿಸಲು ಒತ್ತಡ ಹೇರಬೇಕು
ಇಲ್ಲದೇ ಹೋದಲ್ಲಿ *ನವೆಂಬರ್ ಒಂದ*ರಂದು ತುಳುನಾಡಿದ್ಯಾಂತ *ಕರಾಳ ದಿನ*ವಾಗಿ ಆಚರಿಸಲಾಗುವುದು ಮತ್ತು ಕರಾಳದಿನದ ಅಂಗವಾಗಿ *ನವೆಂಬರ್ ಒಂದು* ತಾರೀಕಿನಂದು #BlackDayForTulunad ಎಂಬ ಹ್ಯಾಶ್ ಟ್ಯಾಗ್ ಮೂಲಕ *ಬೃಹತ್ ಟ್ವೀಟರ್ ಅಭಿಯಾನ* ಮಾಡಿ ರಾಜ್ಯದ ಮಲತಾಯಿ ಧೋರಣೆ ವಿರುದ್ಧ ಪ್ರತಿಭಟಿಸುವ ಮತ್ತು ಎರಡು ರಾಜ್ಯಕ್ಕೆ ಹಂಚಿಹೋದ *ತುಳುನಾಡನ್ನು ಏಕೀಕರಣ*ಗೊಳಿಸುವ ಚಳುವಳಿಯ ಭಾಗವಾಗಿ *ಕರಾಳದಿನ* ಆಚರಿಸುವ ನಿರ್ಣಯವನ್ನು ತುಳು ಸಂಘಟನೆಗಳ ಒಕ್ಕೂಟವಾದ *ತುಳುನಾಡು ಏಕೀಕರಣ ಸಮಿತಿ*ಯು ತೆಗೆದುಕೊಂಡಿದೆ
ಮನವಿ ಕೊಟ್ಟು ಕೊಟ್ಟು ತುಳುನಾಡಿಗೇ ತುಳುನಾಡೇ ಸುಸ್ತಾಗಿದೆ.
ಇನ್ನು ಮನವಿಯ ಮಾತಿಲ್ಲ.
*ಫಲಿತಾಂಶದ ಮಾತಷ್ಟೇ.*
ಜೈ ತುಳುನಾಡ್
No comments:
Post a Comment