Monday, 10 December 2018

ಮಾಣಿ ಗುತ್ತುವಿನಲ್ಲಿ 08.12.2018 ರಂದು ಕಂಬಳಕೋರಿ ನಡೆಯಿತು - Beauty of Tulunad

" ಮಾಣಿ ಗುತ್ತುವಿನಲ್ಲಿ 08.12.2018 ರಂದು ಕಂಬಳಕೋರಿ ನಡೆಯಿತು " - Beauty of Tulunad

ಮಾಣಿಯ ಮಣ್ಣಿನ ಸಂಸ್ಕ್ರತಿಯಲ್ಲಿ ಕಂಬಳಕೋರಿ ಗ್ರಾಮದ ಕೃಷಿ ಸಂಸ್ಕ್ರತಿಯ ಹಬ್ಬಕ್ಕೆ ಅದರದೇ ಆದ ಮಹತ್ವ ಇದೆ.

ಪ್ರಾಚೀನ ಕಾಲದ ಕೃಷಿ ಸಂಸ್ಕ್ರತಿಯ ಫಲಕೃತಿಗೆ ಇಂದಿಗೂ ಸಾಕ್ಷಿ ಮಾಣಿ ಗ್ರಾಮದ ಬಾಕಿಮಾರು ಮತ್ತು ಕಂಬಳದ ಗದ್ದೆಗಳು. ಮಾಣಿಯ ಮಣ್ಣಿನಲ್ಲಿ ನಡೆಯುವ ಕಂಬಳಕೋರಿ ಆಚರಣೆ ವಿಶಿಷ್ಟವಾದದು.ಮಾಣಿ ಎಂದರೆ ನಾಗಾರಾದನೆಗೆ ಸಂಬಂಧಿಸಿದ ಭೂಮಿ. ಪ್ರಾಚೀನ ಕಾಲದಿಂದಲೂ ಮಾತ್ರವಲ್ಲದೆ ನಾಗಬ್ರಹ್ಮನ ಆರಾಧನೆ ಕೂಡ ಇದೆ. (Follow Beauty of Tulunad facebook page)

ಕಂಬಳಕೋರಿಗೆ ನಿಗದಿಗೊಳಿಸಿದ ಏಳು ದಿವಸಗಳ ಮೊದಲು ಮಾಣಿ ಗುತ್ತಿನ ಮನೆಯಲ್ಲಿ ಗೊನೆ ಮುಹೂರ್ತ ನಡೆಯುತ್ತದೆ.ದೈವದ ಅಪ್ಪಣೆ ಪ್ರಕಾರ ಈ ನೇಮಕ್ಕೆ ಗ್ರಾಮಸ್ತರ ಮನೆ – ಮನೆಗೆ ಹೋಗಿ ಆಮಂತ್ರಣ ಕೊರಗಜ್ಜ ದೈವ ನೀಡುತ್ತದೆ. ಈ ದೈವಕ್ಕೆ ಗ್ರಾಮದ ಪ್ರತೀ ಮನೆಯ ಜನರು ಬರಮಾಡಿ ತುಳು ನಾಡಿನ ಸಾರ್ವತ್ರಿಕ ಅಕ್ಕಿಅಥವಾ ಭತ್ತ ,ತೆಂಗಿನ ಕಾಯಿ,ಯಥಾನುಶಕ್ತಿ ಕಾಣಿಕೆ ಮಾನಾದಿಗೆ , ನೀಡಿ ಆಶೀರ್ವಾದ ಪಡೆಯುತ್ತಾರೆ.ಕೆಲವು ಮಂದಿ ಅಗೆಲ್ ಬಡಿಸುವ ಮೂಲಕ ಕೊರಗಜ್ಜನ ಸಂತೃಪ್ತಿ ಪಡಿಸಿ ಧನ್ಯತಾ ಭಾವ ಹೊಂದುತ್ತಾರೆ. (Follow Beauty of Tulunad facebook page)

ಕಂಬಳಕೋರಿ ಎಂದರೆ ಗ್ರಾಮದ ಪಾವಿತ್ರ್ಯತೆ ಹೊಂದಿರುವ ಕಂಬಳ ಗದ್ದೆಯ ಕೋರುವುದು / ಉಳುಮೆ ಮಾಡುವುದು ಆಗಿದೆ. ಮಾಣಿ ಕಂಬಳ ಗದ್ದೆಗೆ ಸೂತಕ ,ಮೈಲಿಗೆ ಇದ್ದವರು ಹೋಗುವಂತಿಲ್ಲ.(ಬಾಕಿಮಾರು ಗದ್ದೆಗೂ ಈ ನಿಯಮ ಅನ್ವಯಿಸುತ್ತದೆ) ಇದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ- ಕಟ್ಟು ನಿಟ್ಟಿನ ನಿಯಮ. (Follow Beauty of Tulunad facebook page)

ಕಂಬಳ ಗದ್ದೆಯ ಉಳುವ ಮುಹೂರ್ತ ಕ್ಕೆ ” ಕಂಡದ ಕೋರಿ ” ಎಂದು ಕರೆಯಲಾಗುತ್ತದೆ ಇದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ಧಾರ್ಮಿಕ ಆಚರಣೆ. ಇದರ ಮುಂಚಿನ ದಿವಸ ಕಂಬಳ ಗದ್ದೆಯ ಸಿಂಗರಿಸಲಾಗುತ್ತದೆ. ನಿಗದಿ ಪಡಿಸಿದ ಗ್ರಾಮದ ಜನರು ಕಂಬಳ ಗದ್ದೆಯ ಬದುವಿನ ಸುತ್ತ ಜೇಡಿಮಣ್ಣಿನಲ್ಲಿ ಸಿಂಗರಿಸುತ್ತಾರೆ ಮತ್ತು ಕಂಬಳ ಕೋರಿ ಗೆ ಪೂರ್ವ ಸಿದ್ದತೆ ನಡೆಸುತ್ತಾರೆ. ಕಂಡದ ಕೋರಿ ಯ ದಿನ ಬೆಳಿಗ್ಗೆ ಕಂಬಳ ಗದ್ದೆಯ ಬದಿಯಲ್ಲಿ ಇರುವ ನಾಗ ,ನಾಗ ಬ್ರಹ್ಮ ರಿಗೆ ತಂಬಿಲ ಸೇವೆ ನಡೆದು ಬಳಿಕ ಪ್ರಾಚೀನ ಕಾಲದ ಸಂಪ್ರದಾಯ ದಂತೆ ನಾಗಬ್ರಹ್ಮ ಹಾಗೂ ಉರವನಿಗೆ( ಎರುಬಂಟ) ನೇಮ ನಡೆದು ಸಾಂಕೇತಿಕವಾಗಿ ಉಳುಮೆ ಮಾಡಲಾಗುತ್ತದೆ.( ಹಿಂದಿನ ಕಾಲದಲ್ಲಿ ಮಾಣಿ ಗ್ರಾಮದ ಬೇರೆಬೇರೆ ಕಡೆಯಿಂದ ಉಳುಮೆ ಗೆ ಎತ್ತು – ಕೋಣಗಳ ಜೊತೆ ಬರುತ್ತಿದ್ದ ವು.ಎಂದು ಊರಿನ ಹಿರಿಯರು ಹೇಳುತ್ತಾರೆ. ಇಂದು ಕಾಲ ಬದಲಾಗಿದೆ .ಎಲ್ಲವೂ ಕಟ್ಟು ಕಟ್ಟಳೆ ಆಚರಣೆ ಆಗಿ ಉಳಿದಿದೆ.) (Follow Beauty of Tulunad facebook page)

ಈ ಸಮಯದಲ್ಲಿ ಡೋಲು ಬಾರಿಸುತ್ತಾ,ಗುತ್ತಿನ ಮನೆಯವರು,ಊರಿನ ಪ್ರಮುಖರು, ಗ್ರಾಮಸ್ತರು ಕಂಬಳ ಗದ್ದೆಯ ಬದಿ ಬರುತ್ತಾರೆ. ವಿಜೃಂಭಣೆಯಿಂದ ಪೂಕರೆ ನೆಟ್ಟು,ವಿಶೇಷ ಸಂಪ್ರದಾಯ ನಡೆದು ಎಲ್ಲರೂ ಅನ್ನಪ್ರಸಾದ ದ ಸಹಭೋಜನ ನಡೆಸುತ್ತಾರೆ. ಕಂಬಳಕೋರಿ ಎಂದರೆ ಗ್ರಾಮ ದೈವಕ್ಕೆ ಪುದ್ದಾರ್ (ಹೊಸ -ಅನ್ನ) ಇದ್ದಂತೆ. ಇದನ್ನು ಸ್ಮರಣೀಯ ವಾಗಿ ಗ್ರಾಮಸ್ತರು ಒಟ್ಟಾಗಿ ಸಹ ಭೋಜನ ನಡೆಸುವುದು ವಾಡಿಕೆ.ಹಿಂದಿನ ಕಾಲದಲ್ಲಿ ಕಂಬಳ ಕೋರಿ ದಿವಸ ಸಣ್ಣ ಪುಟ್ಟ ಸಂತೆ ವ್ಯಾಪಾರ ಕೂಡ ಇತ್ತೆಂದು ಇಂದಿಗೂ ಊರಿನ ಹಳೆಯ ಕಾಲದ ಹಿರಿಯ ವ್ಯಕ್ತಿಗಳು ಸವಿ – ಸವಿ ನೆನಪಾಗಿ ನೆನಪಿಸಿಕೊಳ್ಳುತ್ತಾರೆ. ಕಂಬಳ ಕೋರಿ ದಿವಸ ರಾತ್ರಿ ಮಾಣಿಗುತ್ತಿನಲ್ಲಿ ಅರಸು ಶ್ರೀ ಗುಡ್ಡೆಚಾಮುಂಡಿ ಪ್ರಧಾನಿ ಶ್ರೀ ಪಂಜುರ್ಲಿ ಮತ್ತು ಬಂಟೆಡಿ ಶ್ರೀ ಮಲೆಕೊರತಿ ದೈವಗಳಿಗೆ ವರ್ಷದ ಮೊದಲ ನೇಮೋತ್ಸವ ಜರುಗಿ ಕಂಬಳ ಕೋರಿ ಆಚರಣೆಗೆ ಪರಿಸಮಾಪ್ತಿ ಆಗುತ್ತದೆ. (Follow Beauty of Tulunad facebook page)

ಮಾರನೇ ದಿನ ಒಂದು ಸಾವಿರದ ಒಂದು ದೈವ ಗಣಗಳಿಗೆ ಕಟ್ಟುಕಟ್ಟಳೆ ಸೇವೆ ನಡೆದು ಕೊನೆಯಲ್ಲಿ ಕೊರಗಜ್ಜನಿಗೆ ಸೇವೆ ನಡೆಯುದು ವಾಡಿಕೆ ಹೀಗೆ ಕಂಬಳಕೋರಿ ಆಚರಣೆಗೆ ಮಾಣಿಯಲ್ಲಿ ಮಹತ್ವ ಇದೆ. ಕಂಬಳ ಕೋರಿ ಗೆ ಗೊನೆ ಮುಹೂರ್ತ ನಡೆದ ಬಳಿಕ ಕಂಬಳಕೋರಿ ನೇಮ ಆಗುವ ವರೆಗೆ ಗ್ರಾಮದಲ್ಲಿ ಶುಭ ಸಮಾರಂಭ, ಸಭೆ ಮುಂತಾದುಗಳು ನಡೆಯುವಂತಿಲ್ಲ. (Follow Beauty of Tulunad facebook page)

Courtesy : Beauty of Tulunad | Photo Credits : Shravan Poojari Agrabail | Beauty of Tulunad | Article Credits : Bantwal News

Tuesday, 4 December 2018

ಅಗೋಳಿ ಮಂಜಣ್ಣ’ ಎಂಬುವನೊಬ್ಬನಿದ್ದ...

‘ಅಗೋಳಿ ಮಂಜಣ್ಣ’ ಎಂಬುವನೊಬ್ಬನಿದ್ದ...
ಶ್ರೀವತ್ಸ ಜೋಶಿ:

ಆಗೊಳಿ ‘ಮಂಜಣ್ಣ’ನ ಕುರಿತಾಗಿ ನಿಮಗೆ ಹೇಳಬೇಕೆಂದೆನಿಸಿತು. ಈತನ ಕಥೆಯೆಂದರೆ ತುಳುನಾಡಿನ ‘ಜಗ ಜಟ್ಟಿ’ಯ, ಗಟ್ಟಿ ಮುಟ್ಟಿನ ಭೀಮ ಕಾಯದ ಬಕಾಸುರ ಬಾಯಿಯ ದಢೂತಿ ವ್ಯಕ್ತಿಯಾಬ್ಬನ ಕಣಿ. ತುಳುನಾಡ ಸಿರಿಯ ಮೌಕ್ತಿಕ ಹಾರದಲ್ಲೊಂದು ಹೊಳೆಯುವ ಮಣಿ.

ಸಾಹಿತ್ಯ ಭಂಡಾರ ಅಷ್ಟಕ್ಕಷ್ಟೆ - ಹೀಗಿದ್ದರೂ ತುಳು ಭಾಷೆಯಲ್ಲಿ ಜನಪದ ಕಥೆ ಕವನ ನುಡಿಗಟ್ಟುಗಳ ಅದ್ಭುತ ಕಣಜವೇ ಇದೆ. ತುಳು ಸಾಹಿತ್ಯ/ಜನಪದ ಅಧ್ಯಯನದಲ್ಲಿ ಪಾರಂಗತರಾದ ಪ್ರೊ।ಬಿ.ಎ ವಿವೇಕ ರೈಯವರು ಹೇಳುವಂತೆ ತುಳುನಾಡಿನಲ್ಲಿ ಹಿಂದಿನಿಂದಲೂ ನಮ್ಮ ಹಿರೀಕರು ಹೇಳಿಕೊಂಡು ಬಂದಂಥ ಅಜ್ಜಿಕಥೆ, ಪಾಡ್ದನ ಕಥೆಗಳೇ ಒಂದು ಕಾಲದಲ್ಲಿ ತುಳುನಾಡಿಗರಿಗೆ ಗತಚರಿತ್ರೆಯನ್ನು ತಿಳಿಸಿದ- ಕಲಿಸಿದ ವಿದ್ಯೆಯಾಗಿದ್ದುವು. ಕೋಟಿ-ಚೆನ್ನಯ, ಸಿರಿ, ಅಬ್ಬಗ-ದಾರಗ, ದೇವು ಪೂಂಜ, ಅಗೋಳಿ ಮಂಜಣ್ಣ, ಭೂತಾಳ ಪಾಂಡ್ಯ ಮೊದಲಾದ ಚಾರಿತ್ರಿಕ ವೀರ ವೀರೆಯರ ಕತೆಗಳನ್ನು ತುಳುವರೆಲ್ಲ ಬಾಲ್ಯದಲ್ಲಿ ಕೇಳಿಯೇ ಇರುತ್ತಾರೆ. ಇಂದಿನಂತೆ ಸೂಪರ್‌ಮ್ಯಾನ್‌, ಬ್ಯಾಟ್‌ಮಾನ್‌, ಫಾಂಟಮ್‌ ಮೊದಲಾದ ಕಾಮಿಕ್‌ ಹೀರೋಗಳ ಬಗ್ಗೆ ಕೇಳಿಯೂ ಗೊತ್ತಿರದಿದ್ದ ದಿನಗಳವು. ಅಜ್ಜ ಅಜ್ಜಿ ಹೇಳುವ ಕಥೆಗಳಲ್ಲೇ ತಮಾಷೆ, ಕುಟಿಲತೆ, ನೀತಿ, ಸಾಹಸ, ಹೊಟ್ಟೆ ಹುಣ್ಣಾಗಿಸುವಷ್ಟು ನಗು ಎಲ್ಲವೂ ಸೇರಿರುತ್ತಿತ್ತು. ಆ ಕಥೆಗಳಲ್ಲಿ ಕನಸು ಕಟ್ಟುವ ರಸವಿತ್ತು; ಕನಸನ್ನು ನನಸಾಗಿಸುವ ಛಲ ಮೂಡಿಸುವ ಕಸುವಿತ್ತು. ಅಂತಹ ಒಂದು ಕಥೆಯ ನಾಯಕ ‘ಅಗೋಳಿ ಮಂಜಣ್ಣ’ನ ಕುರಿತು ಒಂದೆರಡು ಸಾಲನ್ನಾದರೂ ನೀವು ಓದಬೇಕು ಅನ್ನುವ ದೃಷ್ಟಿಯಿಂದ ಈ ವಾರದ ವಿಷಯವನ್ನು ಆಯ್ದುಕೊಂಡಿದ್ದೇನೆ.

ಆಗಲೇ ಅಂದಂತೆ ಅಗೋಳಿ ಮಂಜಣ್ಣ ತುಳುನಾಡಿನ ಭೀಮನೆಂದು ಪ್ರಸಿದ್ಧನಾದ ಐತಿಹಾಸಿಕ ಪುರುಷ. ಅಪ್ರತಿಮ ಶಕ್ತಿ ಸಾಹಸಗಳಿಗೆ ಹೆಸರಾದ ವ್ಯಕ್ತಿ. ಅದ್ಭುತ ಜೀರ್ಣಶಕ್ತಿಯುಳ್ಳ ತಿನಿಸಿಗ. ‘ಅಗೋಳಿ’ ಎಂಬ ತುಳು ಶಬ್ದಕ್ಕೆ ಅರ್ಥ ಗುಡಾಣ, ಹಂಡೆ ಅಥವಾ ಅಂತಹದೇ ಭಾರಿ ಗಾತ್ರದ ಪಾತ್ರೆ ಎಂದು. ಆ ಪಾತ್ರೆಯಲ್ಲಿ ಊಟ ಮಾಡುವವನು ಅಗೋಳಿ ಮಂಜಣ್ಣ. ಮಂಗಳೂರು ಆಕಾಶವಾಣಿಯ ಕೃಷಿರಂಗ ಕಾರ್ಯಕ್ರಮದಲ್ಲಿ ಅಗೋಳಿ ಮಂಜಣ್ಣನ ಕಥಾನಕವನ್ನು ತುಳು-ಕಬಿತೆ ರೂಪದಲ್ಲಿ ಅಪರೂಪಕ್ಕೊಮ್ಮೆ ಪ್ರಸಾರಮಾಡುತ್ತಾರೆ. ಅದರಲ್ಲಿ ಮಂಜಣ್ಣನ ಅಪೆಟೈಟ್‌ ಹೇಗಿತ್ತು ಎಂಬ ವರ್ಣನೆಯ ಸಾಲುಗಳನ್ನು ನೋಡಿ:

ಬಜಿಲ್‌ ಒಂಜಿ ಕಳಾಸೆ ಆಂಡಾಲಾ ಒರೊರೊ ಅರಾ ಅರಾ ಆಪುಂಡ್‌
ಗೋಂಟ್‌ ತಾರಾಯಿ ಇರ್ವತ್ತೈನ್‌ಲಾ ಬಾಯಿಡೆ ಗಾಣ ಪಾಡುಂಡ್‌...

ಅವಲಕ್ಕಿ ಒಂದು ಕಳಸಿಗೆಯಷ್ಟಿದ್ದರೂ (1 ಕಳಸಿಗೆ ಅಂದರೆ 14 ಸೇರು; 3 ಕಳಸಿಗೆ ಅಂದರೆ 1 ಮುಡಿ) ಕೆಲವೊಮ್ಮೆ ಕಡಿಮೆಯೇ ಆಗುತ್ತದೆ. ಒಣತೆಂಗಿನಕಾಯಿ ಇಪ್ಪತ್ತೈದು ಇದ್ದರೂ ಬಾಯಿಯಲ್ಲೇ ಗಾಣಹಾಕುತ್ತಾನೆ.

ಸುಮಾರು ನಾಲ್ಕೈದು ತಲೆಮಾರುಗಳ ಹಿಂದೆ ಮಂಗಳೂರಿನ (ತುಳುವಿನಲ್ಲಿ ‘ಕುಡ್ಲ’ ಎನ್ನುವುದು) ಹತ್ತಿರದ ತೊರ್ತಲ್ತ್‌ ಎಂಬ ಹೆಸರಿನ ಗ್ರಾಮದ ಕಟ್ಲ ಎನ್ನುವಲ್ಲಿ ನಾರಾಯಣ ಶೆಟ್ಟಿ ಮತ್ತು ದುಗ್ಗು ದಂಪತಿಯ ಮಗನಾಗಿ ಹುಟ್ಟಿದವ ಮಂಜಣ್ಣ. ಸಂತಾನಹೀನ ಶೆಟ್ಟಿ ದಂಪತಿ ಬಪ್ಪನಾಡಿನ ದುರ್ಗಾಪರಮೇಶ್ವರಿಗೆ ಹರಕೆ ಸಲ್ಲಿಸಿದ ಬಳಿಕವೇ ಮಂಜಣ್ಣ ಹುಟ್ಟಿದ್ದು. ಹಾಗಾಗಿ ತಂದೆ ತಾಯಿಯಂತೆ ಆತನೂ ದುರ್ಗೆಯ ಭಕ್ತ. ಮಂಜಣ್ಣನ ಸೋದರಮಾವ, ನೆರೆಯಗ್ರಾಮವಾದ ‘ತೆಲಾರ್‌ ಗುತ್ತು’ ಎನ್ನುವಲ್ಲಿನ ಬಗ್ಗಣ್ಣ ಅಡ್ಯಂತಾಯ. ಮಂಜಣ್ಣ ಹುಟ್ಟಿದ್ದು ಅಲ್ಲೇ. ಅದೂ ಅಲ್ಲದೇ ‘ಅಳಿಯ ಸಂತಾನ’ ರೂಢಿಯಲ್ಲಿದ್ದುದರಿಂದ ಮತ್ತು ಬಗ್ಗಣ್ಣ ಅಡ್ಯಂತಾಯನಿಗೆ ಸೈನ್ಯಕ್ಕೆ ಸೇರಲು ಬುಲಾವ್‌ ಬಂದಿದ್ದರಿಂದ ಇಡೀ ‘ತೆಲಾರ್‌ ಗುತ್ತು’ ಪ್ರದೇಶಕ್ಕೆ ಮಂಜಣ್ಣನನ್ನೇ ಅಧಿಪತಿಯನ್ನಾಗಿ ಮಾಡಲಾಗಿತ್ತು.

ಓ... ತೆಲಾರ ಗುತ್ತ ಮಂಜಣ್ಣಾಯ್ಕೆ ಪನ್ಪಿನಾಯೆ। ಆಯೇ ಬಾರಿ ಬಿರ್ದ್‌ ತಂಕ ದರ್ಪು ಮಲ್ದಿನಾಯೇ ।।
ಅಟ್ಟೆ ಮುಟ್ಟೆ ಪೊಲಿಪುನಂಚೀ ಲಟ್ಟೆದಾಯೆ । ಆಯೇ ಕೊಟ್ಟೆದಾಂಕರದ ತಿಗಲೇ ನುರ್ದಿನಾಯೇ ।।
ಕೆಂಚಿ ಮೀಸೆ ಕುಪುಲು ಕಣ್ಣ್‌ ಮರದಿನಾಯೇ। ಆಯೇ ಪುಂಚೊಡಿತ್ತಿ ಉಚ್ಚುಲೇನ್‌ ಪುರುಂಚಿನಾಯೇ ।।
ಕೊದಂಟಿದಾಂತೇ ಅರಿತ್ತ ಮುಡಿಲಾ ಕಟ್‌ದಿನಾಯೇ । ಆಯೇ ಕೈಟ್‌ ಗುದುದೂ ಕೊಜಂಟಿ ತಾರಯಿ ಮಲ್ದಿನಾಯೇ ।।

ಮಂಜಣ್ಣನ ಪರಾಕ್ರಮವನ್ನು ಸಾರುವ ಕಥಾನಕದ ಸಾಲುಗಳಿವು. ತೆಲಾರಗುತ್ತುವಿನ ಬಿರುದಾನ್ವಿತ, ಸಮಕಾಲೀನ ಅಹಂಕಾರಿ ಜಟ್ಟಿಗಳಿಗೆಲ್ಲ ಮಣ್ಣುಮುಕ್ಕಿಸಿದ, ಹುತ್ತಕ್ಕೇ ಕೈ ಹಾಕಿ ಹಾವುಗಳನ್ನೆಲ್ಲ ತಿರುಚಿಹಾಕುವ ಸಾಹಸಿಗ, ಯಾವುದೇ ಕೈಕರಣದ ನೆರವಿಲ್ಲದೇ ಅಕ್ಕಿ ಮುಡಿಯನ್ನು ಕಟ್ಟಬಲ್ಲವ (‘ಕೊದಾಂಟಿ’ ಎಂದರೆ ಅಕ್ಕಿಮುಡಿಯನ್ನು ಕಟ್ಟುವಾಗ ಬೈಹುಲ್ಲಿನಲ್ಲಿ ಅಕ್ಕಿ ಒತ್ತಟ್ಟಾಗಿಸಲು ಕೈಯಲ್ಲಿ ಹಿಡಿದು ಬಡಿಯುವ ಮರದ ದಪ್ಪವಾಗಿರುವ ಕೋಲು), ಕೈಯಲ್ಲಿ ಗುದ್ದಿಯೇ ತೆಂಗಿನಕಾಯಿಯನ್ನೊಡೆದು ತಿರುಳನ್ನೆಲ್ಲ ನುಂಗುವವ... ಹೀಗೆ ಸಾಗುತ್ತದೆ ಮಂಜಣ್ಣನ ವರ್ಣನೆ.

ಎರ್ಮಾಳ್‌ ಊರಿನ ಜಾತ್ರೆಯಲ್ಲಿ ಬಲಪ್ರದರ್ಶನ, ದೇವಸ್ಥಾನದ ಪ್ರಾಂಗಣದಲ್ಲಿದ್ದ ಬಲಿಗಲ್ಲನ್ನು ಕಿತ್ತೆಬ್ಬಿಸಿ ಒಬ್ಬನೇ ಅದನ್ನು ಹೊತ್ತುತಂದು ಬಪ್ಪನಾಡು ದುರ್ಗಾಪರಮೇಶ್ವರಿಯ ಪದತಲಕ್ಕೆ ತಂದು ತಾಯಿಯ ಹರಕೆಯನ್ನು ಕೈಗೂಡಿಸಿದ್ದು, ಅರಸು ಕಂಬಳ ನಡೆಸುತ್ತೇವೆಂದು ಹೊರಟ ಮುಲ್ಕಿಯ ಸಾಮಂತ ಅರಸ ಕಳಿಸಿದ ಯುವಕರ ಜಂಭ ಮುರಿದದ್ದು, ಅಷ್ಟು ಯುವಕರು ಒಟ್ಟಿಗೇ ಸೇರಿದರೂ ಕದಲಿಸಲೂ ಆಗದ ಕಾಡುಸೊಪ್ಪಿನ ಕಟ್ಟನ್ನು ಒಬ್ಬನೇ ಎತ್ತಿ ಸಾಗಿಸಿದ್ದು (ಆಗೆಲ್ಲ ದನಕರುಗಳನ್ನು ಕಟ್ಟುವ ಹಟ್ಟಿಗೆ ದಿನಾಲೂ ಸೊಪ್ಪು ತಂದು ಹಾಕುವುದು, ಇದರಿಂದ ಸಾವಯವ ಗೊಬ್ಬರ ಮಾಡುವ ಕ್ರಮ), ಹುಲ್ಲಿನ ಕಟ್ಟಿನಲ್ಲೇ ಹಂದಿಮರಿಯನ್ನೂ ಅಡಗಿಸಿಟ್ಟು ತಂದು ತನ್ನ ಸೋದರತ್ತೆಯ ಬಳಿ ರೊಟ್ಟಿ-ಹಂದಿಮಾಂಸದಡಿಗೆ ಮಾಡಿಕೊಡೆಂದು ಹೇಳಿದ್ದು, ಒಲ್ಲೆನೆಂದರೆ ಅತ್ತೆಗೇ ಬುದ್ಧಿಕಲಿಸುವ ಉಪಾಯ ಹೂಡಿದ್ದು, ತೆಂಗಿನಮರಗಳನ್ನು ಕೈಗಳಿಂದ ಅಲುಗಾಡಿಸಿಯೇ ಎಳೆನೀರು ಉದುರುವಂತೆ ಮಾಡಿ ಆನಂದಿಸಿದ್ದು, ಬೈಹುಲ್ಲನ್ನು ಹೊತ್ತುಕೊಂಡು ಬರಲು ಮನೆಯಾಂದಕ್ಕೆ ಹೋದಾಗ ಅವರು ಊಟ ಮಾಡುತ್ತೀಯಾ ಎಂದು ಕೇಳೇ ಇಲ್ಲವೆಂದು ಕುಪಿತನಾಗಿ ಅವರ ಮನೆಯಂಗಳದಿಂದ ಧಾನ್ಯದ ಕಣಜವನ್ನೇ ಹಿಡಿದೆತ್ತಿ ಸಾಗಿಸಿದ್ದು ... ಹೀಗೆ ಮಂಜಣ್ಣನ ಅಟಾಟೋಪಗಳು ಲೆಕ್ಕವಿಲ್ಲದಷ್ಟು.

ಇಷ್ಟಿದ್ದರೂ ಸೂಕ್ಷ್ಮವಾಗಿ ನೋಡಿದರೆ ಇದಾವುದೂ ಉಪಟಳ ಕೊಡುವುದಕ್ಕಾಗಿ ಹುಡುಗುಬುದ್ಧಿಯಿಂದ ಮಾಡಿದ್ದಲ್ಲ. ‘ಪವರ್‌ ಹೌಸ್‌’ ಆಗಿದ್ದ ಕಾಯಕ್ಕೆ ಕಾಯಕ ಬೇಕಲ್ಲ ! ಸುಡುಗಾಡಿನಂತಿದ್ದ ಊರನ್ನು ಸುಭಿಕ್ಷವಾಗಿಸಿದ್ದು ಮಂಜಣ್ಣನೇ! ಗುಡ್ಡಬೆಟ್ಟ ಕಡಿದು ಹೊಲಗದ್ದೆಗಳನ್ನಾಗಿ ಮಾಡಿ ಬೆವರು ಹರಿಸಿ ದುಡಿದು ಎಲ್ಲರ ಮನೆಗಳ ‘ಕುತ್ತಟ್ಟ’ (ಅಡಿಗೆಮನೆಯ ಅಟ್ಟ)ದಲ್ಲಿ ಅಕ್ಕಿಮುಡಿಗಳ ರಾಶಿರಾಶಿ ಪೇರಿಸಿಟ್ಟ ಜೀವ ಅವನು. ಸತ್ಯಮಾರ್ಗದಲ್ಲಿ ನಡೆದವನು. ಅನವಶ್ಯಕ ಕಾಲುಕೆರೆದು ಜಗಳವಾಡಿದವನಲ್ಲ, ಅದರೆ ಒಂದೊಮ್ಮೆ ಯಾರಾದರೂ ಕೆಣಕಿದರೆ ಅವರ ಗತಿಯೇನು ಎಂಬುದನ್ನು ಕಾಳಗದ ಮೊದಲೇ ಊಹಿಸಬಹುದಿತ್ತು!

ಅಗೋಳಿ ಮಂಜಣ್ಣ ಕಥೆನ್‌ ಕೇಣ್ಣಾಗಾ ಜೋಕುಲೊಟ್ಟಿಗೆ ನಲಿಪುವೊ
ಮಲ್ಲಾ ಜವಾಣೆರ್‌ ಮರ್ಲ್‌ ಪತ್ತ್‌ದ್‌ ಮಂಜಣ್ಣಾ ಬೆರಿಯೆ ಪಾರುವೊ...

ಮಂಜಣ್ಣನ ಕಥೆಯನ್ನು ಅಜ್ಜ-ಅಜ್ಜಿ ಹೇಳುವಾಗ ಮಕ್ಕಳೆಲ್ಲ ಸಂತೋಷದಿಂದ ಕುಣಿದರೆ ಯುವಕರು ಸ್ಫೂರ್ತಿಗೊಂಡು ಮಂಜಣ್ಣನ ಛಲ-ಬಲಗಳ ಅನುಕರಣೆಗೆ ತೊಡಗುತ್ತಾರೆ..

ಇಂತಹ ಧೀರ ಮಂಜಣ್ಣನ ಅವಸಾನ ಹೇಗಾಯ್ತು ಎಂಬ ಕುತೂಹಲವಿರಬಹುದಲ್ಲವೇ? ಮಂಜಣ್ಣನ ಪರಾಕ್ರಮವನ್ನು ನೋಡಿ ಮತ್ಸರದಿಂದ ಕುದಿಯುತ್ತಿದ್ದ ಸಮಕಾಲೀನ ಹೇಡಿ ಯುವಕರ ಗುಂಪೊಂದು ಮೋಸಮಾಡಿ ಮಂಜಣ್ಣನನ್ನು ಸುಮ್ಮನೇ ಔತಣ ಬಡಿಸುತ್ತೇವೆಂದು ಆಹ್ವಾನಿಸಿತು. ಹುಣ್ಣಿಮೆಯ ಮುಚ್ಚಂಜೆಯಲ್ಲಿ ನಿಗದಿತ ಸ್ಥಳಕ್ಕೆ ಅವನು ಬರುತ್ತಿದ್ದಾಗ ಈ ಯುವಕರು ಮರೆಯಲ್ಲಿ ನಿಂತು ಒಂದರಮೇಲೊಂದರಂತೆ ಮಂಜಣ್ಣನ ಮೇಲೆ ಬಾಣಗಳ ಸುರಿಮಳೆ ಮಾಡಿ ದಾರುಣ ಹತ್ಯೆಗೈದರು ಎಂಬ ಸಂಗತಿ ವಿಷಾದ ಮೂಡಿಸುತ್ತದೆ. ಪರಾಕ್ರಮಿಯಾಬ್ಬನಿಗೆ ಈ ರೀತಿಯ ಅವಸಾನ, ಅವನೊಬ್ಬ ಐತಿಹಾಸಿಕ ಪುರುಷನೇ ಆಗಿದ್ದರೂ ಅವನ ಮೇಲೆ ಹೆಚ್ಚಿನ ಕನಿಕರ ಮೂಡಿಸುತ್ತದೆ.

ಅಗೋಳಿ ಮಂಜಣ್ಣನ ಕುರಿತಾದ ಈ ಲೇಖನಕ್ಕೆ ಪೂರಕ ಸಾಮಗ್ರಿಯನ್ನು (ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಅವರಿಂದ ಪ್ರಕಟಿತ, ಗಣೇಶ್‌ ಅಮೀನ್‌ ಸಂಕಮಾರ್‌ ಅವರ ‘ಅಗೋಳಿ ಮಂಜನೆ’ ತುಳು ಭಾಷೆಯ ಪುಸ್ತಕ) ಒದಗಿಸಿದ ನ್ಯೂಜೆರ್ಸಿಯಲ್ಲಿರುವ ದಿನೇಶ್‌ ನೆಟ್ಟಾರ್‌ (ಮೂಲತಃ ಮಂಗಳೂರಿನವರೆಂದು ಬೇರೆ ಹೇಳಬೇಕಿಲ್ಲವಷ್ಟೆ) ಅವರಿಗೂ, ತುಳು-ಕನ್ನಡ-ಇಂಗ್ಲಿಷ್‌ ನಿಘಂಟಿನಿಂದ ಅಗೋಳಿ ಮಂಜಣ್ಣನ ಬಗ್ಗೆ ವಿವರಗಳನ್ನೊದಗಿಸಿದ ಮೇರಿಲ್ಯಾಂಡ್‌ ನಿವಾಸಿ ಡಾ।ಕುಸುಮಾಧರ ಗೌಡ ಅವರಿಗೂ ವಿಶೇಷ ಕೃತಜ್ಞತೆಗಳು.
Copy post....

Thursday, 22 November 2018

ಕಾಲವಾಗುತ್ತಿದೆ ಕುತ್ತೆತ್ತೂರು ಅರಮನೆ - Beauty of Tulunad

ಕಾಲವಾಗುತ್ತಿದೆ ಕುತ್ತೆತ್ತೂರು ಅರಮನೆ - Beauty of Tulunad



ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಅರಮನೆಗಳಲ್ಲಿ  ಒಂದಾದ ಕುತ್ತೆತ್ತೂರು ಅರಮನೆ ಕ್ಷಯವಾಗುತ್ತಿದೆ. ಉಪ್ಪರಿಗೆಯ ಅಂದರೆ ಒಂದು ಮಹಡಿಯ ಈ ಅರಮನೆಯ ಹಂಚುಗಳನ್ನು ಅರ್ಧಭಾಗದಷ್ಟು ತೆಗೆಯಲಾಗಿದೆ. ಒಂದು ಭಾಗ ಕುಸಿದಿದೆ. ಇನ್ನರ್ಧವನ್ನು ಕೆಡವಿ ಹಾಕಲಾಗಿದೆ.

ಮಂಗಳೂರಿನಿಂದ ಸುರತ್ಕಲ್ಲಿಗೆ ಸಾಗುವ ಹೆದ್ದಾರಿಯಲ್ಲಿ ಎಡಕ್ಕೆ ತಿರುಗಿ ಮುಂದುವರೆದರೆ ಕುತ್ತೆತ್ತೂರು ಎಂಬಲ್ಲಿ ಹಸಿರಿನ ನೆಮ್ಮದಿ ಹೊದ್ದುಕೊಂಡು ಮಲಗಿದ ಪ್ರದೇಶದಲ್ಲಿ ಈ ಅರಮನೆ ಇದೆ. ಎದುರು ಭಾಗದಲ್ಲಿ ಕೆರೆಯೊಂದಿದೆ. ಅದರ ಪಕ್ಕದಲ್ಲಿ ಇನ್ನೊಂದು ಬಾವಿಯಂತಹ ರಚನೆ ಇದೆ. ಅದರ ಮಗ್ಗುಲಲ್ಲೇ ಶಿಲಾಶಾಸನವಿದೆ.

ಅರಮನೆಯ ಚಾವಡಿ ವಿಶಾಲವಾಗಿದೆ. ಬೃಹತ್ ಕಂಭಗಳು ಇದರ ಉಪ್ಪರಿಗೆಯನ್ನು ಆಧರಿಸಿ ಹಿಡಿದಿವೆ. ಗಟ್ಟಿ ಮುಟ್ಟಾದ ತೊಲೆಗಳು ಅರಮನೆಗೆ ಸುರಕ್ಷೆಯನ್ನು ಒದಗಿಸಿವೆ. ಕಂಭಗಳು ಅತ್ಯಂತ ನಾಜೂಕಿನ ಕುಸುರಿಕೆತ್ತನೆಯನ್ನು ಹೊಂದಿವೆ. ಇಲ್ಲಿ ನ್ಯಾಯ ತೀರ್ಮಾನಗಳಾಗುತ್ತಿದ್ದವು. ನ್ಯಾಯ ತೀರ್ಮಾನ ಮಾಡಲು ಕುಳಿತುಕೊಳ್ಳುವ ಸ್ಥಳದಲ್ಲಿ ಯಾವುದೇ ಕೆತ್ತನೆಗಳಿಲ್ಲದ ಕಂಬವೊಂದಿದೆ. ಅದರ ಅಡಿಯಲ್ಲಿ  ಮನೆಯ ಮಕ್ಕಳು ಕೂಡಾ ಕುಳಿತುಕೊಳ್ಳುವಂತಿರಲಿಲ್ಲ ಎನ್ನುವುದನ್ನು ಈಗ ವೃದ್ದಾಪ್ಯದಂಚಿನಲ್ಲಿರುವ ತಲೆಮಾರು ನೆನಪಿಸಿಕೊಳ್ಳುತ್ತದೆ.

ಮೂಲತಹ ಈ ಅರಮನೆ ಜೈನ ಮನೆತನಕ್ಕೆ ಸೇರಿದುದಾಗಿತ್ತು. ಕರ್ಣ  ಪರಂಪರೆಯ ಮೂಲಕ ಜನ ಮಾನಸದಲ್ಲಿ ಉಳಿದಿರುವ ಸಂಗತಿ. ಅರಸಿ ಜೈನ ಮಹಿಳೆಯೊಬ್ಬರು (ಪೊನ್ನು ಕುಂದಾಡ್ದಿ - ಈ ಬಗ್ಗೆ ಕೆ.ವಿ.ರಮೇಶ್ ಅವರ ತುಳುನಾಡಿನ ಪ್ರಾಚೀನ ಇತಿಹಾಸ ಪುಸ್ತಕದಲ್ಲಿ ಉಲ್ಲೇಖವಿದೆ) ಈ ಪರಿಸರದಲ್ಲಿ ಆಳ್ವಿಕೆ ಮಾಡಿದ ಬಗ್ಗೆ ಪಾಡ್ದನಗಳಲ್ಲಿ ತಿಳಿದು ಬರುತ್ತದೆ. ಈಕೆ ಮಾಯವಾದ ಅಂದರೆ ಸಮಾಧಿ ಸ್ಥಳ ಕುತ್ತೆತ್ತೂರಿನಲ್ಲಿ ಇದೆ. ಆಕ್ರಮಣದ ಸಂಧರ್ಭದಲ್ಲಿ ಜೈನರು ಅರಮನೆ ತೊರೆದು ಹೋಗುವಾಗ ಎದುರಿರುವ ಸಣ್ಣ ಕೆರೆಯಲ್ಲಿ ತಮ್ಮ ಅಮೂಲ್ಯ ಸೊತ್ತುಗಳನ್ನು ಹಾಕಿ ಊರುಬಿಟ್ಟು ಹೋದರು ಎನ್ನಲಾಗುತ್ತಿದೆ. ಸ್ಮರಣ ಪದ್ದತಿಯ ಈ ಇತಿಹಾಸವನ್ನು ದಾಖಲೆಗಳಿಲ್ಲ ಎಂಬ ಕಾರಣಕ್ಕೆ ತೀರಾ ತಳ್ಳಿ ಹಾಕುವಂತಿಲ್ಲ. ಪ್ರಖ್ಯಾತ ಇತಿಹಾಸಕಾರ ಡಾ. ಕೆ.ವಿ. ರಮೇಶ್ ಕೂಡಾ ಕರ್ಣ ಪರಂಪರೆಯಲ್ಲಿ ವಿಶ್ವಾಸಾರ್ಹ ಅಂಶಗಳಿವೆ ಎನ್ನುವುದನ್ನು ಒಪ್ಪಿಕೊಳ್ಳುತ್ತಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಕಟವಾದ 1923 ಎಂ. ಗಣಪತಿ ರಾವ್ ಐಗಳ್ ಅವರ ’ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ “ ಕೃತಿಯಲ್ಲಿ “ಮಂಗಳೂರು ತಾಲೂಕಿನ ಬಲ್ಲಾಳರು” ಶೀರ್ಷಿಕೆಯಲ್ಲಿ ಕುತ್ತೆತ್ತೂರು ಮನೆತನದ ಬಗ್ಗೆ ವಿವರಗಳಿವೆ. ಕುತ್ತೆತ್ತೂರು, ಇಡ್ಯ, ಸುರತ್ಕಲ್ಲು, ಸಸಿಹಿತ್ಲು, ಚೇಳಾರು, ಸುರೆಯ, ದೇಲಂತಬೆಟ್ಟು , ಮಧ್ಯ ಗ್ರಾಮಗಳನ್ನು ಒಳಗೊಂಡ ಮೂರು ನಾಡುಗಳನ್ನು ಆಳಿಕೊಂಡಿದ್ದರು ಎಂಬ ಅಂಶ ಅದರಲ್ಲಿ ದಾಖಲಾಗಿದೆ. ಕುತ್ತೆತ್ತೂರಿನಲ್ಲಿ ಇವರ ಬೀಡು ಇದೆ. ಸುರತ್ಕಲ್ಲಿನ ಸದಾಶಿವ ದೇವಸ್ಥಾನವು ಸೀಮೆ ದೇವಸ್ಥಾನವಾಗಿದೆ. ಈ ಮನೆತನಕ್ಕೆ ಕಿನ್ನರಿ ಅರಸು ಮನೆತನ ಎಂಬ ಹೆಸರೂ ಇದೆ. ಅಳಿಯ ಕಟ್ಟನ್ನು ಇವರು ಪಾಲಿಸುತ್ತಿದ್ದರು.   ಮನೆಯ  ಒಳಭಾಗದಲ್ಲಿರುವ ಕಿಟಕಿಯ ಮೇಲೆ ನವಿಲಿನ ಚಿತ್ರಗಳಿವೆ. ಈ ವಿಶಾಲ ಮನೆಯಲ್ಲಿ ಬೆಳಕಿನ ಕೊರತೆ ಬಾರದಂತೆ ಮೇಲ್ಭಾಗದಲ್ಲಿ ತೆರೆದ ಅವಕಾಶವಿದೆ. ಇದರಿಂದ ಮಳೆಯ ನೀರು ಮನೆಯೊಳಗೆ ಬರುತ್ತಿತ್ತಾದರೂ ಬೆಳಕಿನ ಕೊರತೆ ಪರಿಹಾರವಾಗುವಂತೆ ರಚಿಸಲಾಗಿದೆ. ಅರಮನೆಯ ಪಟ್ಟದ ಕುರ್ಚಿ ಈಗ  ಬಾಲಾಲಯದಲ್ಲಿದೆ. ಅದರ ಮೇಲೂ ಕೆತ್ತನೆಗಳಿವೆ.

ಇತಿಹಾಸವೆಂದರೆ ಅದು ಭೂತಕಾಲ ಮತ್ತು ವರ್ತಮಾನಕಾಲದ ನಡುವಿನ ಸಂಭಾಷಣೆ. ಇದಕ್ಕೆ ಅವಕಾಶ ಮಾಡಿಕೊಡುವಂತಹ ಆಕರಗಳಲಿ ಅರಮನೆಗಳೂ ಒಂದು. ಕುತ್ತೆತ್ತೂರು ಅರಮನೆ ತುಳುನಾಡನ್ನು ಆಳಿದ ಅರಸುಮನೆತನಕ್ಕೆ ಸಂಬಂಧಿಸಿದ ಭೌತಿಕ  ಕೊಂಡಿ. ಹಿಂದೊಮ್ಮೆ ಇದಕ್ಕೆ ಬೆಂಕಿ ಬಿದ್ದಾಗ ಅದನ್ನು ಪುನರ್ನಿರ್ಮಿಸಲಾಗಿತ್ತು. ಅದಕ್ಕೆ ಹೊದಿಸಿದ ಹಂಚುಗಳ ಮೇಲೆ ತಯಾರಿಕೆ ಕಾಲವಾದ ೧೯೧೮ ಇಸವಿಯನ್ನು ಮುದ್ರಿಸಲಾಗಿದೆ. ಶತಮಾನಗಳನ್ನು ಕಂಡ ಈ ಅರಮನೆ ಇನ್ನು ಕೆಲವೇ ಕಾಲದಲ್ಲಿ ಕಾಲಗರ್ಭಕ್ಕೆ ಸೇರಿ  ಕಣ್ಮರೆಯಾಗುವ ಹಾದಿಯಲ್ಲಿದೆ. (Follow Beauty of Tulunad facebook page)

Wednesday, 21 November 2018

ತುಳು ಪಾತೆರೊ: ತುಳು ಭಾ‍ಷಾ ಶಾಸ್ತ್ರ ಬೊಕ ವ್ಯಾಕರಣ

ತುಳು ಪಾತೆರೊ: ತುಳು ಭಾ‍ಷಾ ಶಾಸ್ತ್ರ ಬೊಕ ವ್ಯಾಕರಣ

ಬುಧಾನಂದ ಶಿವಳ್ಳಿ ( ೧೯೨೩ - ೧೯೮೨  ) ಅರೆನ "ತುಳು ಪಾತೆರೊ: ತುಳು ಭಾ‍ಷಾ ಶಾಸ್ತ್ರ ಬೊಕ ವ್ಯಾಕರಣ"
ಮೂಲ ಪುಸ್ತಕದ ಪೂರ್ಣ ಪಾಠ ಈ ಲಚರಿ (ಬ್ಲಾಗ್) ಡ್  ದುಂಬುದ ಪುಟೊಕುಲೆಡ್  ಪ್ರಕಟವಾಪುಂಡು. ಒಂಜೊಂಜಿ ಅಂಕಣಲೆಡ್ ಕ್ರಮವಾದ್ ಒಂಜೊಂಜಿ  ಪ್ರಕರಣೊಲೆನ್ ಕೊರ್ಪುಂಡು.
ತುಳು  ಪಾತೆರೊ ಪುಸ್ತಕ
ವಿಕಿ(ತುಳು) ಪುಟ.   ಸಂಕ್ಷಿಪ್ತವಾಯಿನ  ಕೃತಿ  ಪರಿಚಯೊನು ಈ ವಿಕಿ ಪುಟೊಟುಲಾ ಓದೋಲಿ.(ನೀಲಿಡ್ ಅಡಿಗೆರೆ ಪಾಡ್ದಿನ "ತುಳು ಪಾತೆರೊ ಪುಸ್ತಕ" ಶಬ್ಧೊನು ಕ್ಲಿಕ್ ಮಲ್ಪುಲೆ).
ತುಳುಪಾತೆರೊ ಪುಸ್ತಕೊಡು ಮೂಜಿ ಭಾಗೊಲು ಉಂಡು:

ಭಾಗ ೧: ಭಾಷಾ ಶಾಸ್ತ್ರ
ಭಾಗ ೨: ತುಳು ವ್ಯಾಕರಣ
ಭಾಗ ೩: ಅನುಬಂಧಲು.

ಭಾಗ ಒಂಜಿ -ಭಾಷಾಶಾಸ್ತ್ರ
ಪುಸ್ತಕದ  ಮುದೆಲ್ದ ಭಾಗೊಡು ಉಪ್ಪುನ ಅಧ್ಯಾಯೊಲು ಇಂಚ ಉಂಡು:
ಮುದೆಲ್ಪಾತೆರೊ
  1. ಭಾಷೆ
  2. ತುಳುವ ಪಾತೆರೊದ ಇತಿಹಾಸ
  3. ಶಬ್ಧ ವ್ಯುತ್ಪತ್ತಿ
ಕೊಡಿಪಾತೆರೊ
ಭಾಗ ರಡ್ಡ್:  ತುಳು ವ್ಯಾಕರಣ
ರಡ್ಡನೆಯ ಬಾಗೊಡು ಬರ್ಪಿನ ಪ್ರಕರಣೊಲು ಇಂಚ ಉಂಡು:
  1. ಅಕ್ಷರ ಪ್ರಕರಣ
  2. ಸಂಧಿ ಪ್ರಕರಣ
  3. ಶಬ್ಧ ಪ್ರಕರಣ
  4. ನಾಮ ಪ್ರಕರಣ
  5. ವಿಶೇಷಣ ಪ್ರಕರಣ
  6. ಧಾತು ಪ್ರಕರಣ
  7. ಕ್ರಿಯಾ ಪ್ರಕರಣ
  8. ಕೃದಾಂತ-ತಧ್ಧಿತಾಂತ ಪ್ರಕರಣ
  9. ಅವ್ಯಯ ಪ್ರಕರಣ
  10. ಸಮಾಸ ಪ್ರಕರಣ
  11. ತತ್ಸಮ ಪ್ರಕರಣ
  12. ವಾಕ್ಯ ಪ್ರಕರಣ
  13. ಲೇಖನ ಜಿಹ್ನೆ ಪ್ರಕರಣ
  14. ಜನಪದ ಸಾಹಿತ್ಯ
  15. ಭಾಷೆ-ಸಂಸ್ಕೃತಿ.

ಭಾಗ ೩:  ಅನುಬಂಧಲು.
ಮೂಜನೆಯ ಭಾಗೊಡು ಅನುಬಂಧೊಲೆನ್ ಸೇರಾದುಂಡು. ಅವು ಇಂಚ ಉಂಡು:

ಅನುಬಂಧ ೧: ಮೂಲ ದ್ರಾವಿಡೊಡ್ದ್ ಏಕಪ್ರವಾಹವಾದ್ ತುಳು-ಕನ್ನಡ ಭಾಷೆಲೆಗ್ ಬೈದಿನ ಪದಲು.
ಅನುಬಂಧ ೨: ಪ್ರಾಚೀನ ತಮಿಳು ಸಾಹಿತ್ಯೊಲೆಡ್ ತುಳುವ ಸಾಮಿಪ್ಯದ ಪದಲು
ಅನುಬಂಧ ೩: ಶಬ್ಧ ವ್ಯುತ್ಪತ್ತಿ- ದಕ್ಷಿಣ ಭಾರತದ ಮುಖ್ಯ ಭಾಷೆಲೆಗ್ ತುಳು ಸಾಮಿಪ್ಯ
ಅನುಬಂಧ ೪ ಅ: ತುಳು ಕ್ರಿಯಾ ಧಾತುಲು
ಅನುಬಂಧ ೪ ಇ: ಸಂಸ್ಕೃತ್ ಧಾತುರೂಪಲು- ಕೃದಾಂತ-ತಧ್ಧಿತಾಂತ (ಸಾಧಿತ ) ರೂಪಲು.
ಅನುಬಂಧ ೪ ಉ: ತುಳು ಧಾತುಲೆಡ್ದ್ ಕೃದಾಂತ-ತಧ್ಧಿತ ನಾಮಪದ ರಚನೆ.
ಅನುಬಂಧ ೫: ತುಳು ಲಿಂಗ್,ವಚನ ಕಾಲ ಪ್ರತ್ಯಯಲು, ಕ್ರಿಯಾಪದಲು.
ಕನ್ನಡ ಲಿಪಿ ವಿಕಾಸ.

ಪ್ರಾಚೀನ ತುಳು ಸಾಹಿತ್ಯಗಳು - ಡಾ| ಕಬ್ಬಿನಾಲೆ ವಸಂತ ಭಾರದ್ವಜ

ಪ್ರಾಚೀನ ತುಳು ಸಾಹಿತ್ಯಗಳು - ಡಾ| ಕಬ್ಬಿನಾಲೆ ವಸಂತ ಭಾರದ್ವಜ

1. ದೇವೀ ಮಹಾತ್ಮೆ :
ತುಳುವಿನಲ್ಲಿ ಲಭಿಸಿದ ಕೃತಿಗಳಲ್ಲೇ ಅತ್ಯಂತ ಪ್ರಾಚೀನವಾದ ಕಾವ್ಯವಿದು. ಸಂಸ್ಕೃತದ ಸಪ್ತಶತೀ ಎಂಬ ಪಾರಾಯಣ ಗ್ರಂಥದ ಅನುವಾದವಾಗಿರುವ ಈ ಕೃತಿಯ ತಾಡವಾಲೆ ಪ್ರತಿಯನ್ನು ಪುಲ್ಲೂರಿನ ತೆಂಕಿಲ್ಲಾಯರ ಮನೆಯಲ್ಲಿ ಡಾ| ವೆಂಕಟರಾಜ ಪುಣಿಂಚಿತ್ತಾಯರು ಸಂಶೋಧಿಸಿದ್ದಾರೆ. ಇವರ ಕಾಲವನ್ನು ಕ್ರಿ.ಶ. 1200 ಕ್ಕೆ ಒಯ್ಯಬಹುದಾಗಿದೆ. ಇಲ್ಲಿಯ ತುಳುಭಾಷೆಯಲ್ಲಿ ’ಸ್ಸ್’ ಕಾರ ವಿಶೇಷತೆ, ರಳಾಕ್ಷರ ಪ್ರಯೋಗ, ಅನೇಕ ವಿಭಕ್ತಿ ಪ್ರತ್ಯಯಗಳ ಬಳಕೆಯನ್ನು ಕಾಣಬಹುದು. ಈಗಿನ ತುಳುವಿನಲ್ಲಿ ಕಾಣದೇ ಇರುವ ಕರ್ಮಣಿ ಪ್ರಯೋಗ ಇಲ್ಲಿಯ ಮತ್ತೊಂದು ವಿಶೇಷತೆ.

2. ಮಹಾಭಾರತೊ :
ಉಡುಪಿಯ ಕೊಡವೂರಿನ ಅರುಣಾಬ್ಜ ಎಂಬ ಕವಿ ಇದರ ಕರ್ತೃ. ಕ್ರಿ.ಶ.1383 ರ ಸುಮಾರಿನಲ್ಲಿ ಈ ಕವಿಯಿದ್ದನೆಂದು ತಿಳಿಯಲಾಗಿದೆ. ಪುತ್ತೂರಿನ ಮೂಡನೂರು ಗ್ರಾಮದ ಮುಂಡ್ಯ ಶ್ರೀ ಲಕ್ಷ್ಮೀನಾರಾಯಣ ಕೇಕುಣ್ಣಾಯರ ಮನೆಯಲ್ಲಿದ್ದ ಈ ಕಾವ್ಯದ ತಾಳೆಗರಿ ಗ್ರಂಥವನ್ನು ಡಾ| ವೆಂಕಟರಾಜ ಪುಣಿಂಚಿತ್ತಾಯರು ಪತ್ತೆಹಚ್ಚಿದ್ದಾರೆ. ಕಾವ್ಯದಲ್ಲಿರುವ ಒಟ್ಟು ೧೬೫೭ ಪದ್ಯಗಳಲ್ಲಿ ೮೮೩ ಅಂಶ ಷಟ್ಪದಗಳೇ ಇರುವುದು ಈ ಕಾವ್ಯದ ವಿಶೇಷತೆ, ಜೊತೆಗೆ ತೋಟಕ, ತೋಟಕದೀರ್ಘ, ಮಹಾಮಾಲೆ ಮುಂತಾದ ವೃತ್ತಗಳ ಬಳಕೆಯೂ ಇದೆ. ಮಹಾಭಾರತದ ಆದಿಪರ್ವದ ಕಥೆಯೇ ಈ ಕಾವ್ಯದ ವಸ್ತು. ತುಳುನಾಡಿನ ೨೬ ವಾದ್ಯಗಳ ಉಲ್ಲೇಖ, ವಿವಿಧ ಮಕ್ಕಳ ಆಟಗಳು, ಮದುವೆ ಮಂಟಪದ ಚಮತ್ಕಾರದ ಗೊಂಬೆಗಳು, ಕೀಲುಕೊಡೆಗಳು, ತಂಪುನೀರಿನ ವಿತರಣೆ, ದೇವರಿಗೆ ಖರ್ಜೂರ ನೈವೇದ್ಯ ಭೂತಾರಾಧನೆ ಮುಂತಾದ ವೈಶಿಷ್ಟ್ಯಗಳಿಂದ ಈ ಕಾವ್ಯ ಗಮನಸೆಳೆಯುತ್ತದೆ.

3. ಶ್ರೀ ಭಾಗವತೊ:
ಇದರ ಕರ್ತೃ ವಿಷ್ಣುತುಂಗನೆಂಬವನು. ಇವನು ಹೇರೂರಿನವನು. ಜಾತಕ ಪದ್ಯದ ಆಧಾರದಿಂದ ಕ್ರಿ.ಶ. 1636 ರ ಕಾಲಘಟ್ಟದಲ್ಲಿದ್ದನೆಂದು ಹೇಳಬಹುದು. ಇತ್ತೀಚಿನ ಸಂಶೋಧನೆಯ ಪ್ರಕಾರ ಇವನ ಕಾಲವನ್ನು ಕ್ರಿ.ಶ. 1370 ಎಂದು ನಿರ್ಣಯಿಸಲಾಗಿದೆ. ಮಧೂರು ಶಿವನಾರಾಯಣ ಶರಳಾಯರ ಮನೆಯಲ್ಲಿದ್ದ ಈ ತಾಡವಾಲೆ ಗ್ರಂಥವನ್ನು ಡಾ| ವೆಂಕಟರಾಜ ಪುಣಿಂಚಿತ್ತಾಯರೇ ಸಂಶೋಧಿಸಿದ್ದಾರೆ.
ಕವಿಯು ಅಲ್ಲಲ್ಲಿ ಬಳಸಿದ ಕಾವ್ಯಶೀರ್ಷಿಕೆಯ ಪದ್ಯಗಳಲ್ಲಿ ’ಶ್ರೀ ಭಾಗವತಾರ್ಥೊ’ ಎಂಬ ಸೂಚನೆಯಿರುವುದರಿಂದ ಕಾವ್ಯದ ಹೆಸರೇ ಹಾಗಿರಬೇಕೆಂದು ಡಾ| ಕಬ್ಬಿನಾಲೆ ವಸಂತ ಭಾರದ್ವಾಜರು ಊಹಿಸಿದ್ದಾರೆ. ಅಷ್ಟೇ ಅಲ್ಲದೆ ಈ ಕವಿಯು ಉಡುಪಿಯ ಸಮೀಪದ ಹೇರೂರಿನವನೆಂದೂ ಅವರು ಹೇಳಿದ್ದಾರೆ. ಮೂರುಸ್ಕಂದಗಳ ವ್ಯಾಪ್ತಿಯಲ್ಲಿ ೪೯ ಅಧ್ಯಾಯಗಳಲ್ಲಿ ೧೯೮೮ ಪದ್ಯಗಳಿದ್ದು, ಸಂಸ್ಕೃತ- ಕನ್ನಡ ಭಾಗವತ ಕಾವ್ಯಗಳಿಗೆ ಹೋಲಿಸಿದರೆ ಇದು ತುಂಬಾ ಕಿರಿದೆಂದು ಹೇಳಬಹುದು. ಕೊನೆಯಲ್ಲಿ ಫಲಶ್ರುತಿಯಿಲ್ಲದಿರುವುದರಿಂದ ಈ ಕೃತಿಯು ಸಮಗ್ರವಾಗಿ ಲಭಿಸಿಲ್ಲವೆಂದೇ ಹೇಳಬಹುದು.

4. ಕಾವೇರಿ :
ಅಜ್ಞಾತ ಕರ್ತೃಕವಾದ ಈ ಕಾವ್ಯದ ಉಪಲಬ್ದ ಭಾಗ ಕಲ್ಲಿಕೋಟೆ ವಿಶ್ವವಿದ್ಯಾಲಯದ ಹಸ್ತಪ್ರತಿ ಭಂಡಾರದಲ್ಲಿ ದೊರಕಿದೆ. ಇದರ ಕಾಲವನ್ನು ಸುಮಾರು 14ನೆಯ ಶತಮಾನದ ಕೊನೆಯೆಂದು ಭಾವಿಸಲಾಗಿದೆ. ಸ್ಕಾಂದ ಪುರಾಣಾಂತರ್ಗತವಾದ ಕಾವೇರಿ ಮಹಾತ್ಮೆ ಇಲ್ಲಿಯ ವಸ್ತು. ಛಂದಸ್ಸು, ಭಾಷಾಪ್ರಯೋಗ, ಅಲಂಕಾರಗಳ ದೃಷ್ಟಿಯಿಂದ ಈ ಕಾವ್ಯ ಗಮನಾರ್ಹವಾಗಿದೆ. ಕಾವ್ಯವನ್ನು ನಿಂದಿಸುವ ಜನರನ್ನು ಕುರಿತ ಕವಿಯ ಹೇಳಿಕೆಯೊಂದು ಆ ಕಾಲದ ಸಾಹಿತ್ಯವಾತಾವರಣಕ್ಕೆ ಕನ್ನಡಿ ಹಿಡಿಯುತ್ತದೆ. ಅಂತೆಯೇ ತನ್ನ ಕಾವ್ಯ ’ಕಬ್ಬಿನ ಜಲ್ಲೆ ಸವಿದಂತೆ ಮುಂದುಮುಂದಕ್ಕೆ ಹೆಚ್ಚು ಸವಿಯಾಗುತ್ತಾ ಹೋಗುವಂತಹುದು’ ಎಂದು ಕವಿ ಹೇಳಿಕೊಂಡರೂ, ಕಾವ್ಯದ ಪೂರ್ಣಭಾಗ ದೊರಕದೇ ಹೋಗಿರುವುದು ವಿಪರ್ಯಾಸ ಎನ್ನಬಹುದು.

5. ತುಳು ರಾಮಾಯಣ :
ಈ ಕಾವ್ಯದ ತಾಡವಾಲೆ ಗ್ರಂಥವು ಬಂಟ್ವಾಳ ತಾಲೂಕಿನ ವಿಟ್ಲಸೀಮೆಯ ವಿಟ್ಲ ಅರಮನೆಯಲ್ಲಿ ದೊರಕಿದ್ದು, ಪ್ರಸ್ತುತ ಶ್ರೀ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಟಾನದಲ್ಲಿ ಸಂರಕ್ಷಿತವಾಗಿದೆ. ಈ ಕಾವ್ಯದ ಆರಂಭದ ಓಲೆಯಲ್ಲಿ ’ತುಳುಬರಹ-ತುಳುಭಾಷೆ ರಾಮಾಯಣ’ ಎಂಬ ಶೀರ್ಷಿಕೆಯಿದ್ದು ಇದನ್ನು ಡಾ| ಎಸ್.ಆರ್. ವಿಘ್ನರಾಜ ಸಂಪಾದಿಸಿದ್ದಾರೆ. ಇದರಲ್ಲಿ ಹದಿನೈದು ಅಧ್ಯಾಯಗಳಿದ್ದು ಇಕ್ಷ್ವಾಕುವಂಶದ ಚರಿತ್ರೆಯ ಕಥಾವಸ್ತುವಿದೆ. ಹತ್ತು, ಹನ್ನೊಂದು, ಹನ್ನೆರಡನೆಯ ಅಧ್ಯಾಯಗಳಲ್ಲಿ ರಾಮಾಯಣದ ಸಂಕ್ಷಿಪ್ತ ಕಥೆ ಕಂಡುಬರುತ್ತದೆ. ಇದು ವಿಷ್ಣುತುಂಗ ವಿರಚಿತ ’ಶ್ರೀ ಭಾಗವತೊ’ ಕಾವ್ಯದ ಒಂದು ಭಾಗವೇ ಆಗಿದೆಯೆಂದು ಡಾ| ಕಬ್ಬಿನಾಲೆ ವಸಂತ ಭಾರದ್ವಾಜರು ಅಭಿಪ್ರಾಯಪಡುತ್ತಾರೆ.

6. ತುಳು ಕರ್ಣಪರ್ವ :
ಈ ಕಾವ್ಯವನ್ನು ಬರೆದವನು ವಿಜಯನಗರದ ಅರಸನಾದ ಇಮ್ಮಡಿ ಹರಿಹರನೆಂಬವನು. ಈತನಿಗೆ ಹರಿಯಪ್ಪನೆಂದೂ ಹೆಸರಿದೆ. ವಿಜಯನಗರವನ್ನು ಆಳಿದ ಅರಸರು ’ತುಳುವ’ ವಂಶದವರಷ್ಟೇ ಅಲ್ಲ. ಅವರು ತುಳು ಭಾಷಿಗರೂ ಆಗಿದ್ದರೆಂದು ಇದರಿಂದ ತಿಳಿಯಬಹುದು. ಕರ್ಣನನ್ನು ಅರ್ಜುನನು ಜಯಿಸಿದಂತಹ ಕಥೆ ಇಲ್ಲಿಯ ಕಥಾವಸ್ತು. ಈ ಕಾವ್ಯದ ಆರಂಭದಲ್ಲಿರುವ ಕಾಲಸೂಚಕ ಪದ್ಯವೊಂದರ ಆಧಾರದಿಂದ ಕವಿಕಾಲವನ್ನು ಕ್ರಿ.ಶ. 1385 ಎಂದು ನಿರ್ಣಯಿಸಬಹುದಾಗಿದೆ. ಮುಖ್ಯವಾಗಿ ಅಂಶಷಟ್ಪದಿಯಲ್ಲಿ ರಚನೆಗೊಂಡ ಈ ಕವ್ಯ್ದಲ್ಲಿ ಇತರ ವೃತ್ತಗಳೂ ಬಳಕೆಯಾಗಿದೆ. ಗಣಪತಿಯನ್ನು ಸ್ತುತಿಸುತ್ತಾ ಕವಿಯು ಬಾಳೆಹಣ್ಣು,ಎಲೆ‌ಅಪ್ಪ,ಕಬ್ಬು ಉಂಡಲಿಗಳೊಂದಿಗೆ ಹಲಸಿನ ಹಣ್ಣನ್ನೂ ಅರ್ಪಿಸಿರುವುದು ವಿಶೇಷವಾಗಿದೆ. ಪೂರ್ವಕವಿಸ್ಮರಣೆ ಇರುವುದರಿಂದ ಈ ಕವಿಗಿಂತಲೂ ಹಿಂದೆ ತುಳುವಿನಲ್ಲಿ ಕಾವ್ಯಪರಂಪರೆಯಿದ್ದಿತೆಂದು ತಿಳಿಯಬಹುದಾಗಿದೆ.
ಈ ಎಲ್ಲಾ ಕಾವ್ಯಗಳಲ್ಲಿ ಶಿವಳ್ಳಿ ತುಳು ಭಾಷೆಯೇ ಬಳಕೆಯಾಗಿದೆ ಎಂಬುದು ಗಮನಾರ್ಹವಾಗಿದೆ.

ಪರಾಮರ್ಶನ ಗ್ರಂಥಗಳು
1. ತುಳು ದೇವೀ ಮಹಾತ್ಮೆ: (ಸಂ) ವೆಂಕಟರಾಜ ಪುಣಿಂಚಿತ್ತಾಯ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂ.ಜಿ.ಎಂ.ಕಾಲೇಜು. ಉಡುಪಿ (1991)
2. ಮಹಾಭಾರತೊ : (ಸಂ) ವೆಂಕಟರಾಜ ಪುಣಿಂಚಿತ್ತಾಯ, ಕನ್ನಡ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು. (2000)
3. ಶ್ರೀ ಭಗವತೊ : (ಸಂ) ವೆಂಕಟರಾಜ ಪುಣಿಂಚಿತ್ತಾಯ, ಕನ್ನಡ ವಿಭಾಗ, ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು. (1984)
4. ಕಾವೇರಿ : (ಸಂ) ವೆಂಕಟರಾಜ ಪುಣಿಂಚಿತ್ತಾಯ, , ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂ.ಜಿ.ಎಂ.ಕಾಲೇಜು. ಉಡುಪಿ. (೧1987)
5. ತುಳು ರಾಮಯಣ : (ಸಂ) ಎಸ್.ಆರ್. ವಿಘ್ನರಾಜ, ಶ್ರೀ ಮಂಜುನಥೇಶ್ವರ ಪುಸ್ತಕ ಪ್ರಕಶನ ಮಾಲೆ, ಉಜಿರೆ. (2005)
6. ಪಳಂತುಳು ಕಾವ್ಯ : ಡಾ| ಕಬ್ಬಿನಾಲೆ ವಸಂತ ಭಾರದ್ವಜ, ಮಧುಮತಿ ಪ್ರಕಾಶನ, ೧೨೫, ಮೊದಲ ತಿರುವು, ಬಸವೇಶ್ವರ ಬಡಾವಣೆ, ವಿಜಯನಗರ, ಬೆಂಗಳೂರು. (2001)

- ಡಾ| ಕಬ್ಬಿನಾಲೆ ವಸಂತ ಭಾರದ್ವಜ

Tuesday, 20 November 2018

ತುಳುನಾಡ್ದ ಜಾನಪದ ಗೊಬ್ಬು - ಕೋರಿದಕಟ್ಟ.

ತುಳುನಾಡ್ದ ಜಾನಪದ ಗೊಬ್ಬು - ಕೋರಿದಕಟ್ಟ.
Facebook copy
 

 

ತುಳುನಾಡಿನ ಸಂಸ್ಕೃತಿಯಲ್ಲಿ ಕೋಳಿ ಅಂಕಕ್ಕೆ (ಕೋರಿದ ಕಟ್ಟ)ತನ್ನದೇ ಅದ ಮಹತ್ವವಿದೆ. ಕೋಳಿ ಅಂಕ ಯಾವಾಗ ಆರಂಭವಾಯಿತೋ ಅಥವಾ ಎಲ್ಲಿ ಆರಂಭವಾಯಿತೋ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿದ್ದರೂ ಹಿಂದಿನಕಾಲದಿಂದಲೇ ನಡೆದುಕೊಂಡು ಬಂದಿದೆ ಎಂದು ತಿಳಿಯಬಹುದು. ಇತಿಹಾಸದಲ್ಲಿ ಪ್ರಾರಂಭವಾದ ಈ ಜಾನಪದ ಆಟ ಕ್ರಮೇಣ ದೈವಾರಾಧನೆಯ ಜೊತೆಗೆ ನಡೆಯುತ್ತಿರುವುದರಿಂದ ಧಾರ್ಮಿಕ ಮಹತ್ವ ಪಡೆಯಿತು. ಕೋಳಿ ಅಂಕವು ಜಾತ್ರೆ ನಡೆದು ಮುಗಿದ ಮಾರನೇ ದಿನದಿಂದಲೇ ಪ್ರಾರಂಭವಾಗುತ್ತದೆ, ಹಾಗೆಯೇ ನೇಮೋತ್ಸವ ಮುಗಿದ ದಿನದಿಂದಲೇ ಪ್ರಾಂಭವಾಗುತ್ತದೆ ಇದು ಇಲ್ಲಿನ ಮೂಲ ಪದ್ಧತಿ. ಈಗಲೂ ಕೋರಿಗುಂಟ ಮಾಡಿಯೇ ನೇಮೋತ್ಸವಗಳು ಆರಂಭವಾಗುತ್ತದೆ. ಕೋಳಿಗಳ ಹೋರಾಟದ ಸ್ಥಳವನ್ನು “ಕಲ” ಎಂದು ಕರೆಯಲಾಗುತ್ತದೆ .ಜನರು ತಮ್ಮದೇ ಆದ ಕೋಳಿಗಳನ್ನು ತರುತ್ತಾರೆ ಮತ್ತು ಅವರು ಬಾಲ್ ಎಂಬ ಸಣ್ಣ ಚಾಕುವನ್ನು ಕೋಳಿಗಳ ಕಾಲುಗಳಿಗೆ ಕಟ್ಟುತ್ತಾರೆ ಮತ್ತು ನಂತರ ಪರಸ್ಪರ ಹೋರಾಡಲು ಅವಕಾಶ ಮಾಡಿಕೊಡುತ್ತಾರೆ. “ಜೋಡಿ ನಾಡುನು” ಎಂಬುದು  ಹೋರಾಟಕ್ಕಾಗಿ ಜೋಡಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ “ಕೊರಿ ಮುಟ್ಟುನು” ಎಂಬುದು  ನಿಜವಾಗಿ ಹೋರಾಟವನ್ನು ಅನುಸರಿಸುತ್ತದೆ. ಒಂದು ಕೋಳಿ ದೂರ ಓಡಿದಾಗ ಅಥವಾ ಗಾಯಗೊಂಡಾಗ. ಗೆಲ್ಲುವ ಕೋಳಿ ಮಾಲೀಕರು ಒಂಟಿ ಕಟ್ಟಾದಲ್ಲಿ ಎರಡೂ ಕೋಳಿಗಳನ್ನು ಪಡೆಯುತ್ತಾರೆ, ಅದನ್ನು ಆ ಸಂಜೆ ಗೆಲುವು ಎಂದು ಪರಿಗಣಿಸಲಾಗುತ್ತದೆ, ಮತ್ತು ಅದನ್ನು ಅಂಕಾ ಎಂದು ಕರೆಯುತ್ತಾರೆ.

ಜನವರಿ ತಿಂಗಳು ಆರಂಭವಾದರೆ ಅಲ್ಲಿಂದ ಮುಂದಕ್ಕೆ ಕರಾವಳಿಯ ಗ್ರಾಮಾಂತರ ಪ್ರದೇಶಗಳಲ್ಲಿ ನೇಮ, ಅಂಕ, ಆಯನ ಹೀಗೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳ ಗೌಜು ಆರಂಭವಾಗುತ್ತದೆ. ಜನವರಿಯಿಂದ ಮೇ ವರೆಗೂ ನಡೆಯುವ ಅಂಕ-ಆಯನ ಮೊದಲಾದ ಉತ್ಸವ ಜಾತ್ರೆಗಳು ಪತ್ತನಾಜೆಯಂದು ಮುಕ್ತಾಯವಾಗುತ್ತವೆ. ಕೋಳಿಗಳ ಹೋರಾಟದ ಸ್ಪರ್ಧೆಯಾದ ‘ಕೋಳಿ ಅಂಕ’ (ಕೋರಿ ಕಟ್ಟ) ಜನಪದರ ಮನರಂಜನೆಗಾಗಿ ರೂಪುಗೊಂಡ ಕ್ರೀಡೆ. ಇಲ್ಲಿನ ಮತ್ತೊಂದು ಜನಪದ ಕ್ರೀಡೆಯಾದ ಕಂಬಳದಂತೆ ಕೋಳಿ ಅಂಕವನ್ನು ಇಂತಹ ನಿರ್ದಿಷ್ಟ ಸಮಯದಲ್ಲಿ ನಡೆಸಬೇಕೆಂಬ ನಿಯಮವೇನೂ ಇಲ್ಲ. ಜನಪದರ ಮನರಂಜನೆಯ ಉದ್ದೇಶಕ್ಕಾಗಿಯಷ್ಟೆ ಆರಂಭವಾಗಿರಬಹುದಾದ ಕೋಳಿ ಅಂಕವು ಈಗ ಪಡೆದುಕೊಂಡಿರುವ ಆಯಾಮ ಮಾತ್ರ ರಕ್ತಸಿಕ್ತ. ಕೋಳಿ ಅಂಕದ ಆರಂಭ ಯಾವ ಉದ್ದೇಶಕ್ಕಾಗಿ ಆರಂಭವಾಯಿತೋ, ಆಗ ಅದರ ಉದ್ದೇಶಗಳು ಏನಿದ್ದವೋ? ಅದು ಕೇವಲ ಮನರಂಜನೆಯೋ? ಅಥವಾ ಅದರಲ್ಲಿ ಧಾರ್ಮಿಕ ಉದ್ದೇಶಗಳೂ ಇದ್ದುವೋ? ದೈವಗಳ ನೇಮದ ಕಾಲದಲ್ಲಿ ಮತ್ತು ಕೆಲವು ದೇವಾಲಯಗಳ ಹತ್ತಿರದಲ್ಲಿ ಕೋಳಿ ಅಂಕವು ನಡೆಯುತ್ತಿದ್ದುದನ್ನು ನೋಡಿದರೆ ಅದು ಭೂತಗಳಿಗೆ ಅಥವಾ ದೈವಗಳಿಗೆ ರಕ್ತದ ನೈವೇದ್ಯ ಮಾಡುವ ಉದ್ದೇಶದ್ದಿರಬಹುದು ಎಂದು ಹಿರಿಯರು ಅಭಿಪ್ರಾಯಪಡುತ್ತಾರೆ.

‘ಅಂಕದ ಕೋಳಿ’ ಎಂದರೆ ಅದು ‘ಹುಂಜ’ ಮಾತ್ರ. ಹೆಣ್ಣು ಕೋಳಿಗಳಿಗೆ ಕದನದ ಆಖಾಡಕ್ಕೆ ಪ್ರವೇಶವಿಲ್ಲ (ಅಬಲೆಯರೆಂದೋ ಏನೊ?). ಅವುಗಳನ್ನು ಬೆಳೆಸುವ ಉದ್ದೇಶ ಮಾಂಸಕ್ಕಾಗಿ ಅಲ್ಲವಾದರೂ ಕಾದಾಟದಲ್ಲಿ ಸತ್ತ ಹುಂಜ ಅಡುಗೆ ಮನೆಗೆ ಹೋಗುತ್ತದೆನ್ನುವುದು ಮಾತ್ರ ಸತ್ಯ. ಅಂದಹಾಗೆ, ಸಾಕಿ ಬೆಳೆಸಲೊಂದು ನಿರ್ದಿಷ್ಟ ಕ್ರಮವಿದೆ.ಆ ಕ್ರಮದಲ್ಲಿ ಆಹಾರ ಪದ್ಧತಿ, ಅವುಗಳ ನಡವಳಿಕೆ ತಿದ್ದುವಿಕೆ, ದೇಹದ ಭಾರದ ನಿಯಂತ್ರಣ, ಕಾದಾಟಕ್ಕೆ ಬೇಕಾದ ಕೆಚ್ಚನ್ನು ತುಂಬುವಿಕೆ, ಕಾದಾಟದ ತರಬೇತಿ ಇವೆಲ್ಲ ಇರುತ್ತದೆ. ಕಡ್ಡಾಯ ಬ್ರಹ್ಮಚರ್ಯ! ಕಂಬಳದ ಕೋಣಗಳನ್ನು ಸಾಕುವಷ್ಟು ಶ್ರಮ ಮತ್ತು ಹಣ ಇದಕ್ಕೆ ಬೇಕಾಗಿಲ್ಲವಾದರೂ ಕಾದಾಟದ ಕೋಳಿಗಳನ್ನು ಸಾಕುವುದಾಗಲಿ ಹೋರಾಟದ ಕೆಚ್ಚನ್ನು ಅದರಲ್ಲಿ ತುಂಬಿಸುವುದಾಗಲಿ ಸರಳವಾದ ಕೆಲಸವೇನಲ್ಲ.

ಕೋಳಿ ಮರಿಯನ್ನು ಆಯ್ದುಕೊಂಡ ಮೇಲೆ ಅದರ ಬೆಳವಣಿಗೆಯ ಕಾಲದಲ್ಲಿ ಪೋಷಕಾಂಶಗಳಿಂದ ಸಮೃದ್ಧವಾದ ವಿಶೇಷ ತಿನಿಸುಗಳನ್ನು ಹಾಕಿ ಸಾಕಬೇಕಾಗುತ್ತದೆಯೇ. ಕೋಳಿ ಬೆಳೆಯಲು ಉತ್ತಮವಾದ ಪೌಷ್ಟಿಕ ಆಹಾರ ಬೇಕು. ಅದು ಕೋಳಿಯ ಶಕ್ತಿವರ್ಧನೆಗೆ ಪೂರಕವಾಗಿರಬೇಕೆ ಹೊರತು ಅದರ ದೇಹದ ತೂಕವನ್ನು ಹೆಚ್ಚಿಸಬಾರದು. ಗ್ರಾಮೀಣಜನರ ಅನುಭವದ ಪ್ರಕಾರ ಗೋಧಿ ದೇಹದ ಭಾರವನ್ನು ಹೆಚ್ಚಿಸಿ ಅದನ್ನು ಆಲಸಿಯನ್ನಾಗಿ ಮಾಡುತ್ತದಂತೆ. ದೇಹದ ಭಾರ ಹೆಚ್ಚಾದರೆ ಚುರುಕುತನದಿಂದ ಕಾದಾಡುವುದು ಸಾಧ್ಯವಾಗುವುದಿಲ್ಲ. ಹಾಗಾಗಿ ದೇಹಕ್ಕೆ ಚೈತನ್ಯವನ್ನು ಮಾತ್ರ ನೀಡುವಂತಹ ರಾಗಿ, ಭತ್ತ ಅಥವಾ ಅಕ್ಕಿಯನ್ನು ಉಣಿಸುತ್ತಾರೆ. ಕೆಲವೊಮ್ಮೆ ಕಡಲೆಕಾಳು ಮತ್ತು ಬೆಲ್ಲ ಕೊಡುವುದಿದೆ. ನೀರುಳ್ಳಿಯನ್ನು ಕೊಡುವುದರಿಂದ (ರಸದ ರೂಪದಲ್ಲಿ) ಕೋಳಿಯ ಕಾದಾಟದ ಕೆಚ್ಚು ಹೆಚ್ಚುತ್ತದೆಂಬ ನಂಬಿಕೆಯೂ ಇದೆ. ಮರಿಯ ಬೆಳವಣಿಗೆಯ ಕಾಲದಲ್ಲಿ ಅದಕ್ಕೆ ಕಾದಾಟದ ತಯಾರಿಯ ಜೊತೆಗೆ ಮನುಷ್ಯರ ಒಡನಾಟವನ್ನೂ ದೀಪದ ಬೆಳಕನ್ನೂ ಅಭ್ಯಾಸ ಮಾಡಿಸುತ್ತಾರೆ.

ಈ ಕೋಳಿಗಳಲ್ಲೂ ಎಷ್ಟೊಂದು ವೈವಿಧ್ಯತೆಗಳು ಇವೆ. ಅಂಕದ ಕೋಳಿಗಳ ಜಾಗದಲ್ಲಿ ನಮ್ಮ ಕೋಳಿಗಳನ್ನು ಕಲ್ಪಿಸಿಕೊಳ್ಳುವಂತೆಯೆ ಇಲ್ಲ. ಅವುಗಳೆಲ್ಲವೂ ಕೊಬ್ಬಿದ ಕೋಳಿಗಳು. ಹಾಗೆ ಅವೆಲ್ಲವನ್ನೂ ಒಂದೆ ವರ್ಗದಲ್ಲಿ ಕೂರಿಸುವಂತೆಯೂ ಇಲ್ಲ. ಕೋಳಿಗಳ ದೈಹಿಕ ಆಕಾರದ ಆಧಾರದಲ್ಲಿ ಸಣ್ಣ ಮೈಕಟ್ಟಿನ ಕೋಳಿಯನ್ನು ‘ಜೇಣ’ ಮತ್ತು ಬಲಿಷ್ಟ ದೇಹದ ಕೋಳಿಗಳನ್ನು ‘ಪೈರಿ’ ಎನ್ನುತ್ತಾರೆ. ಮೈಮೇಲಿನ ಪುಕ್ಕಗಳೂ ವರ್ಗೀಕರಣಕ್ಕೆ ಕಾರಣವಾಗುವುದರಿಂದ ಗರಿಗಳ ವಿನ್ಯಾಸಕ್ಕನುಗುಣವಾಗಿ ‘ಪೆರಡಿಂಗ’ ಅಥವ ‘ಜಳ್ಳಿ’ ಎನ್ನುತ್ತಾರೆ. ಕೋಳಿಗಳನ್ನು ವರ್ಗೀಕರಿಸಲು ಇರುವ ಮತ್ತೊಂದು ಮಾನದಂಡವೆಂದರೆ ಬಣ್ಣ. ಕಪ್ಪು, ಬಿಳಿ, ಹಳದಿ, ಕೆಂಪು ಹಾಗು ಪಂಚವರ್ಣಗಳ ಆಧಾರದಲ್ಲಿ ಅವುಗಳನ್ನು ವಿಂಗಡಿಸುತ್ತಾರೆ. ಶುದ್ಧ ಬಿಳಿ ಬಣ್ಣದ ಕೋಳಿ ‘ಬೊಳ್ಳೆ’ ಎನ್ನಿಸಿಕೊಂಡರೆ ಕಪ್ಪು, ಹಳದಿ, ಕೆಂಪು, ಪಂಚವರ್ಣದ ಆಧಾರದಲ್ಲಿ ‘ಕಕ್ಕೆ’, ‘ಮಂಜಲೆ’, ‘ಕುಪುಳೆ’, ‘ಪೆರಡಿಂಗೆ’ ಎನ್ನುತ್ತಾರೆ. ಬಿಳಿಯ ಮೇಲೆ ಬಣ್ಣ ಬಣ್ಣದ ಚುಕ್ಕೆಗಳಿದ್ದರೆ ಚುಕ್ಕಿಗಳ ಬಣ್ಣದ ಅಧಾರದಲ್ಲಿ ‘ಪಂಚಣಿ ಕಡ್ಲೆ’, ‘ಬಂಗಾರ್ ಕಡ್ಲೆ’, ‘ಕಪ್ಪು ಕಡ್ಲೆ’ ಎನ್ನುತ್ತಾರೆ. ಚುಕ್ಕಿಗಳ ಬದಲಾಗಿ ಇತರ ಬಣ್ಣಗಳ ತುಸು ಮಿಶ್ರಣವಿದ್ದಲ್ಲಿ ಅವುಗಳನ್ನು ‘ಮಂಜಲ್ ಬೊಳ್ಳೆ’, ‘ಕೊಂರ್ಗು ಬೊಳ್ಳೆ’, ‘ಕಾವೆ ಬೊಳ್ಳೆ’, ‘ಪೆರಡಿಂಗ ಬೊಳ್ಳೆ’ ಎಂದು ವರ್ಗೀಕರಿಸುತ್ತಾರೆ. ಕೋಳಿಯ ಜುಟ್ಟುಗಳ ಆಕಾರದಲ್ಲಿ ಅವನ್ನು ಸಹಾ ನಾತ್ರಕೊಟ್ಟು, ಸುತ್ಯೆಕೊಟ್ಟು, ಇರೆಕೊಟ್ಟು, ಕುಂಚಲಕೊಟ್ಟು ಮತ್ತು ನಾಗಕೊಟ್ಟು ಎಂದು ವಿಂಗಡಿಸಿದ್ದಾರೆ. ಎಲ್ಲ ಸೇರಿ ಸುಮಾರು ಅರವತ್ತರಷ್ಟು ವೈವಿಧ್ಯಮಯ ಕೋಳಿಗಳಿವೆಯಂತೆ! ಎಲ್ಲವೂ ಅಂಕದ ಕಣದಲ್ಲಿ ಕಾಣಿಸಿಕೊಳ್ಳುತ್ತವಾದರೂ ಅವುಗಳಲ್ಲಿ ಸುಮಾರು ಹದಿನೈದರಷ್ಟು ಜಾತಿಯ ಕೋಳಿಗಳು ಕಾದಾಟಕ್ಕೆ ಅತ್ಯುತ್ತಮವಂತೆ.

ಕಾಲಕ್ರಮದಲ್ಲಿ ಧಾರ್ಮಿಕ ಉದ್ದೇಶದ ಜೊತೆಗೆ ಮನರಂಜನೆಯ ಅಂಶಗಳೂ ಸೇರಿರಬಹುದು. ಆದರೆ ಈಗಂತೂ ಅದು ಹೋರಾಟದ ಅಂಗಣವಾಗಿದೆ. ಆ ಅಂಗಣದಲ್ಲಿ ಅಂಕದ ಕೋಳಿಗಳಷ್ಟೆ ಅಲ್ಲದೆ ಅದರ ಯಜಮಾನರೂ ಜೊತೆಯಲ್ಲಿ ಪ್ರೇಕ್ಷಕರೂ ಹೊಡೆದಾಟಕ್ಕಿಳಿಯುತ್ತಾರೆ. ಕೋರಿ ಕಟ್ಟದ ಕಾಲದಲ್ಲಿ ಗುಂಪು ಘರ್ಷಣೆಗಳೂ ನಡೆಯುತ್ತಿರುತ್ತವೆ.ಶರಾಬು ಅಂಗಡಿಗಳ ಆಸುಪಾಸಿನಲ್ಲೆ ಅಂಕ ಜರುಗುವುದರಿಂದ ಘರ್ಷಣೆಗೆ ಅವಕಾಶಗಳು ಹೆಚ್ಚಾಗೇ ಇರುತ್ತವೆ. ಗೆಲ್ಲುವ ಕೋಳಿಗಳ ಮೇಲೆ ಬಾಜಿ ಕಟ್ಟುವುದರಿಂದ ಅದೊಂದು ರೀತಿಯ ಜೂಜಿನಂತೆಯೇ ಪರಿಗಣಿತವಾಗಿದೆ.

ಹೀಗೇನೆ ಹಿಂದಿನ ಕಾಲದಿಂದ ನಡೆದುಕೊಂಡು ಬಂದ ಈ ಕೋಳಿಅಂಕಗಳು ಕಾಲ ಕ್ರಮೇಣ ದುಡ್ಡಿನ ಆಸೆಗಾಗಿ ಜೂಜು ದಂಧೆಯಾಗಿ ಪರಿವರ್ತನೆಯಾಗಿದ್ದು ಒಂದು ವಿಪರಿಯಾಸವೇ ಸರಿ. ಈಗ ಕೋಳಿ ಅಂಕವು ವಿವಿಧ ರೀತಿಯಲ್ಲಿ ನಡೆಯುತ್ತದೆ, ಸವಾಲಿನ ಕಟ್ಟಗಳೂ, ಮೊಬೈಲ್ ಕಟ್ಟಗಳೂ. ಈಗ ಕೋಳಿ ಅಂಕದಲ್ಲಿ ಹಿರಿಯವರಿಗಿಂತ ಕಿರಿಯವರೇ ಜಾಸ್ತಿ ಅವರದೇ ಅಧಿಕಾರ, ಲಕ್ಷ ಗಟ್ಟಲೆ ಜೂಜುಗಳು ನಡೆಯುತ್ತದೆ.ಕೋಳಿ ಅಂಕಕ್ಕೆ ಹೋಗಿ ಜೂಜಾಡಿ ಹಣ ಕಳೆದುಕೊಳ್ಳುವವರು ಇರುವಂತೆ ಕೋಳಿ ಅಂಕದಲ್ಲೆ ಹಲವಾರು ಉಪ ವೃತ್ತಿಗಳನ್ನು ಕಂಡುಕೊಂಡವರೂ ಇದ್ದಾರೆ. ದೈವಸ್ಥಾನದ ಬಳಿಯ ಅಂಕವನ್ನು ಬಿಟ್ಟು ಉಳಿದಂತೆ ಕೋಳಿ ಅಂಕದ ಪಕ್ಕದ ಸಾರಾಯಿ ಅಂಗಡಿಗೆ ಯಾವಾಗಲೂ ಭರ್ಜರಿ ವ್ಯಾಪಾರ ಇದ್ದೇ ಇರುತ್ತದೆ. ಉಳಿದಂತೆ ತಂಪು ಪಾನೀಯ ಹಾಗೂ ಐಸ್ ಕ್ರೀಮ್ ಮಾರಾಟಗಾರರಿಗೆ, ಚುರುಮುರಿಯವರಿಗೂ ಆದಾಯವಿದ್ದೇ ಇರುತ್ತದೆ. ಕೋಳಿಯ ಕಾಲಿಗೆ ಕಟ್ಟುವ ಹರಿತವಾದ ಕತ್ತಿಗಳನ್ನು (ಬಾಳ್) ತಂದು ಅದನ್ನು ಬಾಡಿಗೆಗೆ ಕೊಟ್ಟು ಹಣಗಳಿಸುವವರೂ ಇರುತ್ತಾರೆ. ಅಂಕ ನಡೆಯುವ ಜಾಗದ ಚಪ್ಪರ (ದೊಂಪೆ) ಕಟ್ಟುವವರಿಗೆ, ಅಲ್ಲಿಗೆ ರಾತ್ರೆ ಇಡೀ ವಿದ್ಯುತ್ ಸೌಲಭ್ಯ ಕಲ್ಪಿಸುವವರಿಗೆ ಸಾಕಷ್ಟು ಕೆಲಸವಿರುತ್ತದೆ.ಕೋಳಿಗಳ ಪಂಚಾಗವೂ ಇದೆ. ಯಾವ ರಂಗಿನ ಕೋಳಿಗೆ ಯಾವ ದಿನ ಹುಟ್ಟು, ಬಾಲ್ಯ, ಯೌವನ, ಮುಪ್ಪು, ಮರಣ ಎಂಬುದು ಕೋಳಿ ಶಾಸ್ತ್ರಜ್ನ್ಯರಿಗೆ ಗೊತ್ತಿರುತ್ತದೆ. ಇಲ್ಲಿ ಹುಣ್ಣಿಮೆ ಮತ್ತು ಅಮವಾಸ್ಯೆಗಳೂ ಪ್ರಮುಖ ಪಾತ್ರ ವಹಿಸುತ್ತದೆ. ಅದನ್ನೆಲ್ಲಾ ತಿಳಿದುಕೊಂಡೇ ಆ ಪ್ರಕಾರ ಕೋಳಿ ಅಂಕ ನಡೆಸುವವರಿದ್ದಾರೆ. ಯಾವ ಕೋಳಿ ಗೆಲ್ಲುತ್ತದೆ ಎಂದು ಪಂಥ ಹಾಕಿ ಜೂಜಾಡುವ ಪದ್ಧತಿ ಹಿಂದಿನಿಂದಲೂ ಇತ್ತು.

ಕೋಳಿ ಅಂಕದ ಹಿಂದೆ ಇರುವ ನಮ್ಮ ತುಳುನಾಡಿನ ಪರಂಪರೆಯನ್ನು ಮತ್ತು ಅದರ ಹಿಂದೆ ಇರುವ ಧಾರ್ಮಿಕ ನಂಬಿಕೆಗಳನ್ನು ಅರ್ಥಮಾಡಿಕೊಂಡು ನಡೆಸಬೇಕು. ಕೇವಲ ಜೂಜುಗಾಗಿ ಕೋಳಿ ಅಂಕ ನಡೆಸುತ್ತ ಹೋದರೆ ಕ್ರಮೇಣ ಅದಕ್ಕೂ ನಿರ್ಬಂಧ ಬೀಳುವ ಸಾಧ್ಯತೆ ಇದೆ, ಇದಕ್ಕೆ ಆಸ್ಪದ ಕೊಡದೆ ಕೇವಲ ಮನೋರಂಜನೆಗಾಗಿ ಮತ್ತು ಜಾನಪದ ಆಟವಾಗಿ ನಡೆಸಬೇಕು ಇದರಿಂದ ಈ ಕ್ರೀಡೆಯನ್ನು ಉಳಿಸಬಹುದು.
Facebook cop

Wednesday, 14 November 2018

ತುಳು ಭಾಷೆಗೆ ಬೇಕು ಸಂವಿಧಾನದ ಮಾನ್ಯತೆ

ತುಳು ಭಾಷೆಗೆ ಬೇಕು ಸಂವಿಧಾನದ ಮಾನ್ಯತೆ

ಅರ್ಧ ಲಕ್ಷದಷ್ಟು ಜನರು ಮಾತನಾಡುವ ಭಾಷೆಗಳಿಗೂ ಸಂವಿಧಾನದಲ್ಲಿ ಮಾನ್ಯತೆ ಸಿಕ್ಕಿದೆ. ಆದರೂ ಸುಮಾರು 50 ಲಕ್ಷ ಜನರ ಭಾಷೆಯಾಗಿರುವ ತುಳುವಿಗೆ ಆ ಭಾಗ್ಯ ಇನ್ನೂ ಸಿಕ್ಕಿಲ್ಲ. ತುಳು ಒಂದು ದೊಡ್ಡ ವರ್ಗದ ಜನರ ಭಾಷೆ, ಶತಮಾನಗಳ ಕಾಲ ಹೋರಾಡಿದ ಜನಾಂಗದ ಭಾಷೆ, ಅತ್ಯಂತ ಪುರಾತನ ದ್ರಾವಿಡ ಭಾಷೆಗಳಲ್ಲಿ ಒಂದು.

ಭಾಷೆಗಳ ಸ್ವಸಾಮರ್ಥ್ಯ ಮತ್ತು ಜಾಗತಿಕ ರಾಜ  ವ್ಯವಸ್ಥೆಗಳಲ್ಲಿ ಅವುಗಳ ಸ್ಥಾನ ನಿರ್ಣಯಗಳ ಹೊರತಾಗಿಯೂ ಪ್ರಭುತ್ವದ ಬೆಂಬಲದಿಂದಷ್ಟೇ ಒಂದು ಭಾಷೆ ಪೈಪೋಟಿ  ಮಧ್ಯೆ ಬದುಕುಳಿಯಲು ಸಾಧ್ಯ. ದುರದೃಷ್ಟವಶಾತ್‌ ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರದಿರುವುದರಿಂದ ಪ್ರಭುತ್ವದ ಬೆಂಬಲದಿಂದ ವಂಚಿತವಾಗಿದೆ.

ಜನರ ಮಾತೃಭಾಷೆಯನ್ನು ಮನ್ನಿಸುವ ಮೂಲಭೂತ ಹಕ್ಕುಗಳನ್ನು ನಿರಾಕರಿಸಿ ಅವರನ್ನು ದೂರವಿಡುವುದು  ನ್ಯಾಯ ವಿರೋಧಿಯೂ, ಅಮಾನವೀಯವೂ ಆಗಿದೆ.  ಭಾರತದ ಸಂವಿಧಾನವೇನೂ ಅಷ್ಟೊಂದು ನಿಷ್ಠುರವಾಗಿಲ್ಲ ಹಾಗೂ 8ನೇ ಪರಿಚ್ಛೇದದಲ್ಲಿ ಇಷ್ಟೇ ಭಾಷೆಗಳಿರಬೇಕು ಎಂಬ  ಕಠಿಣ ನಿಬಂಧನೆಯೇನೂ ಅದರಲ್ಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಹಲವು ಭಾಷೆಗಳನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ  ಸೇರಿಸಲಾಗಿದೆ. ಹಾಗೆ ಸೇರಿಸಲ್ಪಟ್ಟವುಗಳಲ್ಲಿ ಅನೇಕ ಭಾಷೆಗಳು ಸಂಖ್ಯಾಬಲದಲ್ಲಿ ತುಳುವಿಗಿಂತ ಬಲಿಷ್ಠವಾದುದಲ್ಲ. ಭಾಷಾ ವ್ಯಾಕರಣ ಇತ್ಯಾದಿ ದೃಷ್ಟಿಯಿಂದಲೂ ತುಳುವಿಗಿಂತ ಸಮೃದ್ಧ ಭಾಷೆಗಳೂ  ಅಲ್ಲವೆಂದು ಸಾಬೀತಾಗಿದೆ.  ಅರ್ಧ ಲಕ್ಷದಷ್ಟು ಜನರು ಮಾತನಾಡುವ ಭಾಷೆಗಳಿಗೂ ಸಂವಿಧಾನದಲ್ಲಿ ಮಾನ್ಯತೆ ಸಿಕ್ಕಿದೆ. ಆದರೂ ಸುಮಾರು 50 ಲಕ್ಷ ಜನರ ಭಾಷೆಯಾಗಿರುವ ತುಳುವಿಗೆ ಆ ಭಾಗ್ಯ ಇನ್ನೂ ಸಿಕ್ಕಿಲ್ಲ.

ತುಳು ಒಂದು ದೊಡ್ಡ ವರ್ಗದ ಜನರ ಭಾಷೆ, ಶತಮಾನಗಳ ಕಾಲ ಹೋರಾಡಿದ ಜನಾಂಗದ ಭಾಷೆ, ಅತ್ಯಂತ ಪುರಾತನ ದ್ರಾವಿಡ ಭಾಷೆಗಳಲ್ಲಿ ಒಂದು. ಇದು ಜನರನ್ನು ಒಂದಾಗಿರಿಸಿದೆ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಎಂದು ಗುರುತಿಸಿಕೊಂಡಿರುವ  ಹಾಗೂ ವಿವಿಧತೆಯಲ್ಲಿ  ಏಕತೆ ಎಂದು ಸಾರುವ ನಮ್ಮ ದೇಶದಲ್ಲಿ ತುಳು ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಹೋರಾಡಬೇಕಾದಂತಾಗಿದೆ.

ತಾಳೆಯೋಲೆಗಳನ್ನು ಕಾಪಿಡುವಲ್ಲಿ ಎದುರಾದ ತೊಂದರೆ ಗಳಿಂದಾಗಿ ತುಳು ಭಾಷೆಯ ಬಹುಪಾಲು ಸಾಹಿತ್ಯ ಕಳೆದು ಹೋಗಿದೆ. ಈಗ ದೊರೆಯುವ ಪ್ರಾಚೀನ ಸಾಹಿತ್ಯ 15ನೇ ಶತಮಾನದಿಂದೀಚಿನದ್ದು. ತುಳು ಭಾಷೆಯ ಪ್ರಾಚೀನತೆ ಸಾವಿರಾರು ವರ್ಷಗಳಷ್ಟು ಹಿಂದಿನದ್ದು. ಮಲಯಾಳಿ ಲಿಪಿ ಅಸ್ತಿತ್ವಕ್ಕೆ ಬರುವ ಮೊದಲೇ ತುಳು ಭಾಷೆಗೆ ತನ್ನದೇ ಆದ ಲಿಪಿ ಇತ್ತು. ಆದ್ದರಿಂದಲೇ ಮಲಯಾಳಕ್ಕಿಂತಲೂ ಕನಿಷ್ಠ ಸಾವಿರ ವರ್ಷಕ್ಕಿಂತಲೂ ಹಳೆಯ ತುಳು ಲಿಪಿಯಿಂದಲೇ ಮಲಯಾಳ ಲಿಪಿ ಬೆಳೆದಿರಬೇಕು ಎಂಬ ವಾದ ಕೇಳಿ ಬರುತ್ತಿರುವುದು. ದಕ್ಷಿಣ ದೇಶಕ್ಕೆ ತುಳುನಾಡಿನಿಂದ ತೆರಳಿದ ಅರ್ಚಕರು ತುಳು ಲಿಪಿಯಲ್ಲಿ ಬರೆಯಲಾದ ಆಗಮ ಶಾಸ್ತ್ರಗಳ ಮಂತ್ರಗಳನ್ನು ತಮ್ಮೊಡನೆ ಒಯ್ದರೆಂದೂ, ಆ ಲಿಪಿಯೇ ಮುಂದೆ ಮಲಯಾಳಿ ಲಿಪಿಯಾಗಿ ಸುಧಾರಣೆಗೊಂಡಿತೆಂದೂ ತಿಳಿಯಲಾಗಿದೆ.

ಲಭ್ಯವಿರುವ ತುಳು ಪ್ರಾಚೀನ ಕೃತಿ ತುಳು ಮಹಾಭಾರತ 15ನೇ ಶತಮಾನಕ್ಕೆ ಸೇರಿದ ತುಳು ಲಿಪಿಯಲ್ಲಿ ಬರೆಯಲ್ಪಟ್ಟದ್ದು. ಅದರಂತೆಯೇ 15ನೇ ಶತಮಾನದಲ್ಲಿ ರಚಿತವಾಗಿ ಈಚೆಗೆ ಪತ್ತೆಯಾಗಿರುವ ತುಳು ಲಿಪಿಯಲ್ಲಿ ಬರೆದ ಇನ್ನೊಂದು ಕೃತಿ ತುಳು ದೇವಿ ಮಹಾತ್ಮೆ. 17ನೇ ಶತಮಾನದಲ್ಲಿ ರಚನೆಗೊಂಡ ಮತ್ತೆರಡು ತುಳು ಮಹಾಕಾವ್ಯಗಳಾದ ತುಳು ಭಾಗವತೋ ಮತ್ತು ಕಾವೇರಿ ಕೃತಿಗಳೂ ಬೆಳಕಿಗೆ ಬಂದಿವೆ. ಶ್ರೀ ಮಧ್ವಾಚಾರ್ಯರು ತುಳು  ಲಿಪಿಯಲ್ಲಿಯೇ ತಮ್ಮ  ಸಾಹಿತ್ಯವನ್ನು ರಚಿಸಿದ್ದರು. ಸಂಶೋಧಿಸಲ್ಪಟ್ಟ ಇತರ ತಾಳೆಯೋಲೆ ಬರಹಗಳು ತುಳು ಲಿಪಿಗೆ ರೂಪಾಂತರಗೊಂಡ ಅನೇಕ ಸಂಸ್ಕೃತ ಮಂತ್ರಗಳೇ ಆಗಿವೆ.  ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಎಷ್ಟು ಭಾಷೆಗಳಿಗೆ ತುಳುವಿನಲ್ಲಿ ಇರುವಷ್ಟು ಸಾಹಿತ್ಯವಿದೆ? 

ತುಳುವಲ್ಲಿ ಪ್ರಪ್ರಥಮವಾಗಿ ಸಂಶೋಧನೆ ನಡೆಸಿದವರು ಜರ್ಮನ್‌ ಮಿಷನರಿಗಳಾದ ರೆ| ಕೆಮರರ್‌ ಮತ್ತು ರೆ| ಮೇನರ್‌ ಎಂಬವರು. ರೆ| ಕೆಮರರ್‌ ತಮ್ಮ ಜೀವಿತಾವಧಿಯಲ್ಲಿ ಸುಮಾರು 3000 ತುಳು ಶಬ್ದಗಳನ್ನು ಸಂಗ್ರಹಿಸಿದರು ಮತ್ತು ಅವುಗಳ ಅರ್ಥವನ್ನು ದಾಖಲೆಗೊಳಿಸಿದರು. ಅವರ ಬಳಿಕ ಆ ಕೆಲಸವನ್ನು ರೆ| ಮೇನರ್‌ ಮುಂದುವರಿಸಿದರು.  ಮೇನರ್‌ ಆಗಿನ ಮದ್ರಾಸ್‌ ಸರಕಾರದ ನೆರವಿನಿಂದ 1886ರಲ್ಲಿ ತುಳು ಭಾಷೆಯ ಪ್ರಥಮ ಶಬ್ದಕೋಶವನ್ನು ಪ್ರಕಟಿಸಿದರು. ಉಡುಪಿಯ ಎಂಜಿಎಂ ಕಾಲೇಜಿನ  ಗೋವಿಂದ  ಪೈ ಸಂಶೋಧನ ಕೇಂದ್ರವು 18 ವರ್ಷಗಳ ತನ್ನ ತುಳು  ಪದಕೋಶ (ಲೆಕ್ಸಿಕನ್‌)  ಯೋಜನೆಯನ್ನು 1979ರಲ್ಲಿ ಪ್ರಾರಂಭಿಸಿತ್ತು.  ಇದರಲ್ಲಿ ತುಳುವಿನ ಬೇರೆ ಬೇರೆ ಉಪಭಾಷೆಗಳಲ್ಲಿ ಬೇರೆ ಬೇರೆ ವ್ಯಕ್ತಿಗಳಲ್ಲಿ ಸಾಂಪ್ರದಾಯಿಕ ವಿಧಿ ವಿಧಾನಗಳಲ್ಲಿ, ಜನಪದ ಸಾಹಿತ್ಯವಾದ ಪಾಡªನಗಳಲ್ಲಿ ಬಳಸಲಾಗುವ ಪದಗಳನ್ನು ಸೇರಿಸಲಾಗಿದೆ. ಈ ತುಳು ಪದಕೋಶ 1996ರಲ್ಲಿ ದೇಶದಲ್ಲೇ ಅತ್ಯುತ್ತಮ ನಿಘಂಟಿಗೆ ನೀಡಲಾಗುವ ಗುಂಡರ್ಟ್‌ ಪ್ರಶಸ್ತಿಗೆ  ಭಾಜನವಾಯಿತು.

ಅಮೆರಿಕ ಮತ್ತು ಯೂರೋಪು ದೇಶಗಳ ವಿಶ್ವವಿದ್ಯಾನಿಲಯ ಗಳು ತುಳುವನ್ನು ಒಂದು ಪ್ರಮುಖ ಭಾಷೆಯಾಗಿ ಮಾನ್ಯ ಮಾಡಿವೆ. ಗ್ರಾಜುವೇಟ್‌ ರೆಕಾರ್ಡ್‌, ಎಕ್ಸಾಮಿನೇಶನ್‌ (ಜಿ.ಆರ್‌.ಇ.) ಮತ್ತು ದ ಬೆಸ್ಟ್‌ ಆಫ್  ಇಂಗ್ಲಿಷ್‌  ಆ್ಯಸ್‌ ಎ ಫಾರಿನ್‌ ಲಾಂಗ್ವೇಜ್‌ನ ಮಾಹಿತಿ ಪತ್ರಿಕೆಯಲ್ಲಿ ತುಳು ಭಾರತದ 17 ಭಾಷೆಗಳಲ್ಲಿ ಒಂದು ಎಂದು ನಮೂದಿಸಲ್ಪಟ್ಟಿದೆ. ಈ ಸಂಸ್ಥೆ ಜಗತ್ತಿನ 133 ಭಾಷೆಗಳಲ್ಲಿ ಪ್ರತಿಯೊಂದಕ್ಕೂ ಕೋಡ್‌ ಸಂಖ್ಯೆ ನೀಡಿದೆ. ತುಳುನಾಡು ಭಾರತೀಯ ಬ್ಯಾಂಕಿಂಗ್‌ ವ್ಯವಸ್ಥೆಯ ತೊಟ್ಟಿಲು ಎಂದು ಗುರುತಿಸಿಕೊಂಡಿದೆ.  ಎಸ್‌.ಯು. ಪಣಿಯಾಡಿ, ಎಲ್‌. ವಿ. ರಾಮಸ್ವಾಮಿ ಅಯ್ಯರ್‌ ಮತ್ತು ಪಿ.ಎಸ್‌. ಸುಬ್ರಹ್ಮಣ್ಯ ಮೊದಲಾದ ಭಾಷಾ ಶಾಸ್ತ್ರಜ್ಞರು ತುಳು ದ್ರಾವಿಡ ಭಾಷಾ ಕುಟಂಬದ ಮೂಲ ಬೇರುಗಳಿಂದ ಸ್ವತಂತ್ರವಾಗಿ ಕವಲೊಡೆದ  ಪುರಾತನ ಭಾಷೆಗಳಲ್ಲೊಂದು ಎಂದು ಅಭಿಪ್ರಾಯಪಟ್ಟಿದ್ದಾರೆ. ಕ್ರಿ.ಶ. 200ರ ಕಾಲದಲ್ಲೇ ತಮಿಳು ಕವಿ ಮಾಮುಲಾರ್‌ ಅವರು ತನ್ನ ಒಂದು ಕವಿತೆಯಲ್ಲಿ ತುಳುನಾಡು ಮತ್ತು  ತುಳುನಾಡಿನ ಚೆಲುವೆ ನರ್ತಕಿಯರ ಬಗ್ಗೆ ಬಣ್ಣಿಸಿದ್ದಾರೆ. ಹಲ್ಮಿಡಿ ಶಾಸನದಲ್ಲಿ ತುಳುನಾಡು ಆಲುಪರ ರಾಜ್ಯ ಎಂದು ಪ್ರಸ್ತಾಪಿಸಿದ್ದನ್ನು ಕಾಣಬಹುದು. ತುಳು ಪ್ರದೇಶವು 2ನೇ ಶತಮಾನದಲ್ಲಿ ಗ್ರೀಕರ ನಡುವೆ ತೊಲೊಕೊರ ಎಂದು ಪ್ರಚಲಿತದಲ್ಲಿತ್ತು. ಈಗಲೂ ತುಳುನಾಡಿನ ನಾಟಕ ತಂಡಗಳು, ಯಕ್ಷಗಾನ ವಿಶ್ವಮಾನ್ಯವಾಗಿದೆ.  ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಶಸ್ತಿಗಳ ಮೂಲಕ ಗಮನ ಸೆಳೆದ ತುಳು ಸಿನೆಮಾಗಳ ಸಂಖ್ಯೆಯೂ ಸಣ್ಣದೇನಲ್ಲ. ತುಳುವಿನಲ್ಲಿ ಕೆಲವು ಪತ್ರಿಕೆಗಳು ಹಾಗೂ ಕೇರಳ ಮತ್ತು ಕರ್ನಾಟಕ ಸರಕಾರದ ಅಧೀನದಲ್ಲಿ ಎರಡು ತುಳು ಅಕಾಡೆಮಿಗಳು ಕಾರ್ಯನಿರ್ವಹಿಸುತ್ತವೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಮದಿಪು ಹೆಸರಿನ ತ್ತೈಮಾಸಿಕವೂ ಪ್ರಕಟವಾಗುತ್ತಿವೆ. ಹಲವಾರು ಕೃತಿಗಳು ತುಳುವಿನಲ್ಲಿ  ಮತ್ತು ತುಳು ಕೇಂದ್ರಿತವಾಗಿ ಪ್ರಕಟಗೊಂಡಿವೆ. ತುಳುವಿನ ಮಹತ್ವವನ್ನು  ವಿವರಿಸಲು ಇಂಥ ಕೆಲವು ಪ್ರಮುಖ ಪೂರಕ ಅಂಶಗಳಿದ್ದರೂ ಸಂವಿಧಾನದ ಮಾನ್ಯತೆ ಪಡೆಯುವ ವಾದದಲ್ಲಿ ನಮ್ಮ ನಾಯಕರು ಯಾಕೆ ಸೋಲುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ.

ತುಳು ಒಂದು ಸುವ್ಯವಸ್ಥಿತ, ವೈಜ್ಞಾನಿಕ, ಸಾಂಸ್ಕೃತಿಕ ಮತ್ತು ಬೌದ್ಧಿಕವಾಗಿ ಸಮೃದ್ಧ ಶ್ರೀಮಂತ ಭಾಷೆ. ದೇಶದಲ್ಲಿ ಭಾಷೆಯ ಸಮೃದ್ಧಿ ಮತ್ತು ಶ್ರೀಮಂತಿಕೆಗೆ ಅಷ್ಟೇನೂ ಮಹತ್ವವಿಲ್ಲ. ಏಕೆಂದರೆ ಭಾಷೆಯ ಪಾವಿತ್ರ್ಯದ ರಕ್ಷಣೆ ಮತ್ತು ಪೋಷಣೆ ಹೆಚ್ಚಿನ ಮಟ್ಟಿಗೆ ಮನಸ್ಸಿಗೆ ತೋಚಿದಂತೆ ಮಾಡುವುದು ಅಥವಾ ಕೇವಲ ಸಂಖ್ಯೆಗಳ ಆಟವಷ್ಟೆ. ಸರಕಾರದ ಧೋರಣೆಗಳಲ್ಲಿ ಸುಧಾರಣೆಗಳನ್ನು ತರುವಲ್ಲಿ ಬಲವಾದ ಒತ್ತಡ ಹೇರುವುದಕ್ಕೆ ದೇಶದ ಸಂಸತ್ತಿನಲ್ಲಿ ತುಳುನಾಡಿಗೆ ಕಡಿಮೆ  ಪ್ರಾತಿನಿಧ್ಯವಿರುವುದೂ ಒಂದು ಪ್ರಬಲ ಅಡಚಣೆಯಾಗಿದೆ.

ತುಳುನಾಡು ಭೌಗೋಳಿಕವಾಗಿ ಮಾತ್ರವಲ್ಲ, ರಾಜಕೀಯ ವಾಗಿಯೂ ಅಸಂಘಟಿತವಾಗಿದೆ. ಭಾರತದ ಸ್ವಾತಂತ್ರ್ಯದ ಮೊದಲ್ಗೊಂಡು ಮತ್ತು ಪ್ರಾಂತ್ಯಗಳ ಪುನಾರಚನೆಯ ಅನಂತರವೂ ತುಳುವರು ತಮ್ಮ ಭಾಷೆಯನ್ನು  ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು  ಒತ್ತಾಯಿಸುತ್ತಲೇ ಇದ್ದಾರೆ. ಈ  ಮಧ್ಯೆ ಅವರ ಬೇಡಿಕೆ ಮೆಲುದನಿಯಲ್ಲಿದ್ದರೂ ಇತ್ತೀಚೆಗೆ ಅದು ಬಲವಾಗುತ್ತಿದೆ. ಆದರೆ ಸರಕಾರ ಪೂರಕವಾಗಿ  ಸ್ಪಂದಿಸುವ ಲಕ್ಷಣ ಇದುವರೆಗೆ ಕಂಡು ಬರುತ್ತಿಲ್ಲ. ತುಳುವರ ಬೇಡಿಕೆಯನ್ನು ಇದೇ ರೀತಿ ನಿರ್ಲಕ್ಷಿಸುತ್ತಾ ಬಂದರೆ ಮುಂದಿನ ದಿನಗಳಲ್ಲಿ ಪ್ರತ್ಯೇಕತೆಯ ಕೂಗು ಇಲ್ಲಿಂದ ಗಟ್ಟಿಯಾಗಿ ಕೇಳಿ ಬರುವ ಅಪಾಯ ಇಲ್ಲದಿರದು.

ನಮ್ಮ ಭಾಷೆಗೆ ಸಂವಿಧಾನದಲ್ಲಿ ನಮ್ಮದೇ ಸರಕಾರದಿಂದ ಮಾನ್ಯತೆ ದೊರೆತಿಲ್ಲ ಎಂದ ಮೇಲೆ ನಾವು ಯಾವ ಪ್ರಜಾಪ್ರಭುತ್ವದ ಕುರಿತು ಮಾತನಾಡುತ್ತಿದ್ದೇವೆ? ತುಳು ಭಾಷೆಗೆ ಮಾನ್ಯತೆ ನೀಡುವಷ್ಟು ಸಮಾಜವಾದಿ ಭಾವನೆ ಸರಕಾರಕ್ಕಿಲ್ಲ ಎಂದ ಮೇಲೆ ಯಾವ ಸಮಾಜವಾದದ ಬಗ್ಗೆ ಮಾತನಾಡಬೇಕು? ತುಳು ಭಾಷೆ ಮಾತನಾಡುವವರು ವಿವಿಧ ಮತಗಳ ಅನುಯಾಯಿಗಳಾಗಿದ್ದಾರೆ. ಒಂದು ಮತಾತೀತ ಭಾಷೆಯ ಮೇಲೆ ಯಾಕೆ ಈ ರೀತಿಯ ನಿರ್ಲಕ್ಷ್ಯ ಎಂಬ ಪ್ರಶ್ನೆಗೆ ಸರಕಾರವೇ ಸೂಕ್ತ ಉತ್ತರ ನೀಡಬೇಕಾಗಿದೆ.

ಸರಕಾರವು ಇಡೀ ದೇಶವನ್ನು ಸಬಲಗೊಳಿಸಲು ಬಯಸುತ್ತಿರುವುದು ಹೌದಾಗಿದ್ದರೆ, ತುಳುವಿಗೆ ಸಂವಿಧಾನದ 8ನೇ  ಪರಿಚ್ಛೇದದಲ್ಲಿ  ಸ್ಥಾನ ನೀಡಲು ಹಿಂಜರಿಯಬಾರದು. ಸಂವಿಧಾನದ ಮಾನ್ಯತೆ ಸಿಕ್ಕಿದರೆ ತುಳುವಿನ ಬೆಳವಣಿಗೆಗೆ ಹೊಸ ಶಕ್ತಿ ಸಿಗಲಿದೆ.

ಸ್ವಾಭಾವಿಕವಾಗಿ ಭಾರತವು ಭಾಷೆಯನ್ನು ನಾಶಗೊಳಿಸುತ್ತಿಲ್ಲ ವಾದರೂ, ಪರೋಕ್ಷವಾಗಿ   ದುರ್ಬಲಗೊಳಿಸುತ್ತಿಲ್ಲ ಎಂದು ಹೇಳಲಾಗದು. ಜಾಗತೀಕರಣವು ದೇಶವನ್ನು ಆರ್ಥಿಕತೆಯ ಮಟ್ಟದಲ್ಲಿ ದುರ್ಬಲಗೊಳಿಸಬಹುದು. ಆದರೆ ಅಂತಹ ದುರ್ಬಲಗೊಳಿಸುವಿಕೆ ಹೆಚ್ಚಾದಲ್ಲಿ ಒಂದು ಭಾಷಿಕ ಗುಂಪಿನಲ್ಲಿ ಅಭದ್ರತೆಯ ಭಾವನೆಯನ್ನು  ಹೆಚ್ಚಿಸುವುದು. ಹಾಗಾಗಿ ಜಾಗತೀಕರಣವು  ಭಾಷೆ  ಮತ್ತು ಸಂಸ್ಕೃತಿಗಳ ರಕ್ಷಕನ ಪಾತ್ರವನ್ನು ಸದೃಢಗೊಳಿಸುವುದು ಹೆಚ್ಚು ಸಂಭವನೀಯ.  ಕೇಂದ್ರ ಸರಕಾರವು ಈಗ ತುಳುವಿಗೆ ಸಾಂವಿಧಾನಿಕ ಮಾನ್ಯತೆಯನ್ನು ಕೊಡುವ ಮೂಲಕ ಅಸಂಖ್ಯ  ತುಳುವರ ಪ್ರೀತಿ, ವಿಶ್ವಾಸವನ್ನು ಗಳಿಸಲು ಮುಂದಾಗಬೇಕು ಮತ್ತು ತುಳುವರ ನ್ಯಾಯೋಚಿತವಾದ ಒಂದು ದೀರ್ಘ‌ಕಾಲದ ಬೇಡಿಕೆಯನ್ನು ಈಡೇರಿಸಿಕೊಟ್ಟು ಬದ್ಧತೆಯನ್ನು ಮೆರೆಯಬೇಕಾಗಿದೆ.

ಅಲೋಕ್ ರೈ

Wednesday, 31 January 2018

ತುಳುರಾಜ್ಯದ ಬೇಡಿಕೆ ತಪ್ಪಿಸಲು ತುಳುವಿಗೆ ಸಂವಿಧಾನ ಮಾನ್ಯತೆ ಎಂಬ ನಾಟಕ ಮಾಡುಲಾಗುತ್ತಿಯೇ? © ಕಿರಣ್ ತುಳುವೆ

ತುಳುರಾಜ್ಯದ ಬೇಡಿಕೆ ತಪ್ಪಿಸಲು ತುಳುವಿಗೆ ಸಂವಿಧಾನ ಮಾನ್ಯತೆ ಎಂಬ ನಾಟಕ ಮಾಡುಲಾಗುತ್ತಿಯೇ?
© ಕಿರಣ್ ತುಳುವೆ


ಹೌದು ಇದು ನೂರಕ್ಕೆ ನೂರರಷ್ಚು ನಿಜ, ಯಾವುದೇ ಸರಕಾರ ಬಂದಾಗಲು ಕೇಂದ್ರದ ಕಡೆ ಬೊಟ್ಟು ಮಾಡಿ ನಮ್ಮನ್ನು ಯಾಮರಿಸಲಾಗುತ್ತಿದೆ

ಇದು ಕೇಂದ್ರದಲ್ಲಿ ಎರಡು ರೀತಿಯ ಸರಕಾರವಿದ್ದಾಗಲೂ, ರಾಜ್ಯದಲ್ಲಿ ಐದು ಪಕ್ಷದ ಸರಕಾರಗಳು (ಕೇರಳ ಮತ್ತು ಕರ್ನಾಟಕ) ಆಡಳಿತ ನಡೆಸಿದಾಗಲೂ ಕೇಂದ್ರಕ್ಕೆ ಬೊಟ್ಟು ಮಾಡಿ ಸಂವಿಧಾನಿಕ ಮಾನ್ಯತೆ ಎಂಬ ನಾಟಕ ಮಾಡಿ ತುಳುನಾಡಿಗರನ್ನು ಮೋಸ‌ ಮಾಡಲಾಗಿದೆ

ಮೊದಲ ಬಾರಿಗೆ  2001 ರಲ್ಲಿ ವಾಜಪೇಯಿ ಸರಕಾರ ಇರುವಾಗ ತುಳು ಬಾಷೆಯನ್ನು ಸಂವಿಧಾನಕ್ಕೆ  ಸೇರಿಸಲು  ಒತ್ತಾಯ ಮಾಡಲಾಯಿತು,

ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಕೂಡಲೇ ವರದಿ ಕೊಡುವಂತೆ ಕೇಳಿಕೊಂಡಿತು.
ಆದರೆ ವರದಿ ಕೇಂದ್ರಕ್ಕೆ ತಲುಪಲೇ ಇಲ್ಲ
 ಆವಾಗ ಸಂವಿಧಾನಿಕ ಬೇಡಿಕ್ಕೆ ಇಟ್ಟ ಭಾಷೆಗಳ ಸಂಖ್ಯೆ ಕೇವಲ ಎರಡು. ತುಳುವನ್ನು ಸುಲಭದಲ್ಲಿ ಸೇರಿಸಬಹುದಿತ್ತು ರಾಜ್ಯ ಸರಕಾರ ಪ್ರಯತ್ನಿಸಿರುತ್ತಿದ್ದರೆ.

2003 ರಲ್ಲಿ ಸಂವಿಧಾನಕ್ಕೆ ಸೇರಿಸಲು ಭಾಷೆಗಳ ಸಂಖ್ಯೆಯಲ್ಲಿ ಏರಿಕೆ ಕಂಡಿತು, ಹಾಗಾಗಿ ಕೇಂದ್ರ ಸರಕಾರ ಸಂವಿಧಾನಕ್ಕೆ ಸೇರಿಸುವ ನಿಯಾಮವಳಿಯನ್ನು ಬದಲಾವಣೆ ಮಾಡಲು ಸಮಿತಿಯೊಂದನ್ನು ರಚಿಸಿ ಹೊಸ ನಿಯಾಮವಳಿಯನ್ನು ತಂದಿತು. ವಿಶೇಷ ಎಂದರೆ ಈ ನಿಯಾಮವಳಿಯನ್ನು ತುಳು ಭಾಷೆ ಸುಲಭವಾಗಿಯೇ ಗೆದ್ದಿತ್ತು  ಆದರೆ ರಾಜ್ಯ ಸರಕಾರಗಳಿಂದ ವರದಿ ತಲುಪಲೇ ಇಲ್ಲ

2009ರಲ್ಲಿ ಯಡ್ಯೂರಪ್ಪನವರು ತುಳುವನ್ನು ರಾಜ್ಯದ ಎರಡನೇ ಭಾಷೆಯಾಗಿ ಮಾಡುವುದಾಗಿ  ಹೇಳಿದ್ದರು, ಅದು ನಿಜವಾಗಲೇ ಇಲ್ಲ

2013 ರಲ್ಲಿ ತುಳು ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸು ಭಾವನಾತ್ಮಕವಾಗಿ, ಗೌರವಪೂರ್ವಕವಾಗಿ ವಸಂತ ಬಂಗೇರರವರಿಗೆ ಅವಕಾಶ ನೀಡಿ, ಮತ್ತೇ ಕನ್ನಡದಲ್ಲಿ ಪ್ರಮಾಣವಚನ ಮಾಡಿಸಬಹುದಿತ್ತು ಆದರೆ ತುಳುವಿನಲ್ಲಿ ಪ್ರಮಾಣ ವಚನ ಸ್ವೀಕರಿಸುವುದನ್ನು ತಡೆಯಲಾಯಿತು

ವಿಧಾನ ಸಭೆಯೋ ಅಥವಾ ವಿಧಾನ ಪರಿಷತ್ತೊ ಸರಿಯಾಗಿ ನೆನಪಿಲ್ಲ, ಓರ್ವ ಜನಪ್ರತಿನಿಧಿ "ತುಳು ಭಾಷೆಯ ಸಂವಿಧಾನಕ್ಕೆ ಸೇರಿಸುವ ವಿಚಾರ ಏನಾಗಿದೆ" ಎಂದಾಗ, ಇದಕ್ಕೆ ಉತ್ತರಿಸಿದ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಮಾಶ್ರೀಯವರು "ವರದಿ ಕೇಂದ್ರ ಸರಕಾರ ಕೇಳಿದೆ, ನಾವು ವರದಿ ಕೊಡುತ್ತೇವೆ" ಅಂದಿದ್ದರು.
ವರದಿ ಕೇಳಿರುವುದು 2001 ರಲ್ಲಿ, ಉಮಾಶ್ರೀಯವರು ಉತ್ತರಿಸಿರುವುದು 2014 ರಲ್ಲಿ. ಅಂದರೆ 13 ವರ್ಷವಾದರೂ ವರದಿ ತಲುಪಿಸಲಾಗಿಲ್ಲ.
ಈಗ 2018 ಈಗಲೂ ವರದಿ ತಲುಪಿದೆಯೇ ಗೊತ್ತಿಲ್ಲ

ತದ ನಂತರದ ನಾಟಕ ನೋಡಿ, ಕನ್ನಡ ಧ್ವಜಕ್ಕಾಗಿ ಸಮಿತಿ ಮಾಡಲಾಗಿದೆ,
ಆದರೆ ತುಳು ಸಂವಿಧಾನಕ್ಕೆ ಸೇರಿಸಲು ಯಾವುದೇ ಸಮಿತಿ ಮಾಡಿಲ್ಲ. ಅಂದರೆ ಈ ರಾಜ್ಯ ಮಾಡುತ್ತಿರುವುದು ನಾಟಕವಲ್ಲವೇ?

ಮತ್ತೊಂದು ವಿಚಾರ ನೆನಪಿಡಿ ಕೇರಳ ಮತ್ತು ಕರ್ನಾಟಕ ರಾಜ್ಯಗಳಪ ಐದು ಪಕ್ಷದ ಸರಕಾರವನ್ನು ಕಂಡಿದೆ,
ಆದರೆ ತುಳು ಸಂವಿಧಾನಿಕ ಮಾನ್ಯತೆಯ ವಿಚಾರದಲ್ಲಿ ಕೇಂದ್ರ ಸರಕಾರವನ್ನು ಬೊಟ್ಚು ಮಾಡುತ್ತಿವೆಯೇ ಹೊರತು ಯಾರೂ ದೃಢ ನಿರ್ಧಾರ ಕೈಗೊಂಡಿಲ್ಲ, ಯಾರೂ ಪ್ರಮಾಣಿಕ ಪ್ರಯತ್ನ ಮಾಡಿಲ್ಲ

ಹೇಗೆ ಅಂತೀರಾ?
ಗೋವಾ ರಾಜ್ಯ ರಚನೆ ಆದ ನಂತರ ಗೋವಾ ಸರಕಾರ ಕೊಂಕಣಿಯನ್ನು ಅಧಿಕೃತ ಭಾಷೆಯಾಗಿ ಮಾಡಿತ್ತು, ಆಗ ಕೊಂಕಣಿ ಸಂವಿಧಾನಕ್ಕೆ ಸೇರಿರಲಿಲ್ಲ. ಕೊಂಕಣಿ ಗೋವಾ ರಾಜ್ಯದ ಅಧಿಕೃತ ಭಾಷೆಯಾದ ನಂತರವೇ ಸಂವಿಧಾನಕ್ಕೆ ಸುಲಭವಾಗಿ ಸೇರಿತು

ಮತ್ತೊಂದು ವಿಚಾರ ನೆನಪಿರಲಿ ಕೊಂಕಣಿ ಮತ್ತು ತುಳು ಭಾಷಿಕರ ಸಂಖ್ಯೆ ಹೆಚ್ಚು ಕಡಿಮೆ ಒಂದೇ ಆಗಿದೆ ಆದರೆ ಕೊಂಕಣಿ ಯುನೆಸ್ಕೊದ "ಅಳಿವಿನಂಚಿನಲ್ಲಿರುವ ಭಾಷೆಗಳ ಪಟ್ಚಿಯಲ್ಲಿ ಸೇರಿಲ್ಲ, ಆದರೆ ತುಳು ಸೇರಿದೆ"

ಬಹುಶಃ ಸಂವಿಧಾನಿಕ ಮಾನ್ಯತೆ ಎಂಬ ನಾಟಕವನ್ನು ನಾವು ಈ ರಾಜ್ಯದಿಂದ ಕಲಿಯಬೇಕು

© ಕಿರಣ್ ತುಳುವೆ

Tuesday, 30 January 2018

ತುಳುನಾಡಿಗರ ಗಂಜಿಯ ಕರಕ್ಕೆ ಕಲ್ಲು ಬೀಳುತ್ತಿದೆ

ತುಳುನಾಡಿಗರ ಗಂಜಿಯ ಕರಕ್ಕೆ ಕಲ್ಲು ಬೀಳುತ್ತಿದೆ


 ಬಹುಭಾಷಿಕ ಕರ್ನಾಟದ ರಾಜಕೀಯ ಭಾಷೆ, ಸರಕಾರದ ಭಾಷೆ ತುಳು ಬ್ಯಾರಿ, ಕೊಡವ ಮುಂತಾದ ಭಾಷೆಗಳೂ ಕರ್ನಾಟಕದ ಭಾಷೆಗಳು. ಕರ್ನಾಟಕದ ಮಣ್ಣಿನ ಭಾಷೆಗಳು.

ಆದರೆ ವಾಸ್ತವವಾಗಿ ಏನಾಗಿದೆ ? ತುಳು ಕೊಂಕಣಿ,ಕೊಡವ ಭಾಷೆಗಳು ಕನ್ನಡದ ಬೆಳವಣಿಗೆಗೆ ಅಡ್ಡಿಯಾಗುತ್ತಿವೆ ಎಂಬ ಹೇಳಿಕೆಯನ್ನು ನಮ್ಮ ಕೆಲವು ಬುದ್ಧಿಜೀವಿಗಳೇ ಕೊಡುತ್ತಾರೆ. ಅದಕ್ಕೆ ನಾವು ಹೀಗೆ ಉತ್ತರ ಕೊಡಬಹುದು. ಅಂದರೆ ಅವರ ನಿರೀಕ್ಷೆ ಕೊಡಗು ಮತ್ತು  ತುಳುನಾಡು ಕರ್ನಾಟಕದಿಂದ ಬೇರೆ ಯಾಗಿ ಪ್ರತ್ಯೇಕ ರಾಜ್ಯ ಆದರೆ ಕನ್ನಡದ ಬೆಳವಣಿಗೆ ಲಾಭವಾಗುತ್ತದೆ ಎಂದೆ?

ತುಳುಭಾಷೆಯನ್ನು 8ನೇ ಪರಿಚ್ಛೇಧದಲ್ಲಿ ಸೇರಿಸುವಲ್ಲಿ ಕನ್ನಡಿಗರು ಆಸಕ್ತಿ ತಳೆಯುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ತುಳುಭಾಷಾ ಪ್ರದೇಶ ಕಾಸರಗೋಡು ಕರ್ನಾಟಕದ ಕೈ ಬಿಟ್ಟಾಗಲೂ ಕರ್ನಾಟಕದ ಜನತೆ ಅದನ್ನು ಪ್ರತಿಭಟಿಸಿ ಮರಳಿ ಕರ್ನಾಟಕದಲ್ಲಿ ಉಳಿಸುವ ಪ್ರಯತ್ನ ಮಾಡಲಿಲ್ಲ. ಕನ್ನಡಿಗರ ಈ ನಿರಾಸಕ್ತಿಗೆ ಕಾಸರಗೋಡು ತುಳುಭಾಷಾ ಪ್ರದೇಶವಾಗಿದ್ದು ಕಾರಣವಾಗಿದೆ ಎನ್ನುವುದು ಈ ಭಾಗದ ಕನ್ನಡ ಏಕೀಕರಣ ಹೋರಾಟಗಾರರ ನೋವು. ಬೆಳಗಾವಿ,ಸೊಲ್ಲಾಪುರ, ಕೊಲ್ಲಾಪುರ ಬಗ್ಗೆ ಇದ್ದ ಆಸಕ್ತಿ ಕಾಸರಗೋಡಿಗೆ ಇಲ್ಲವಾಗಲು “ಅವರು ತುಳುವರು” ಎನ್ನುವುದು ಕಾರಣ ಇದು ನನ್ನ ಮಾತಲ್ಲ. ಕಯ್ಯಾರ ಕಿಞ್ಞಣ್ಣ ರೈ ಅವರ ನೋವಿನ ನುಡಿ.

ಐತಿಹಾಸಿಕ ಕಾಲದಿಂದಲೂ ರಾಜಾಶ್ರಯ ಇಲ್ಲದೆ ಉಳಿದು ಬಂದ ಭಾಷೆ ಮತ್ತು ಸಂಸ್ಖತಿ ತುಳು. ಚಲಾವಣೆಯಲ್ಲಿ ಇದ್ದ ತುಳು ಲಿಪಿ ಯಾಕೆ ಬಳಕೆ ತಪ್ಪಿತು ಎನ್ನುವುದಕ್ಕೆ ಹಲವು ಕಾರಣಗಳು ಇದ್ದರೂ ಮುಖ್ಯವಾದ ಕಾರಣ ಅದಕ್ಕೆ ರಾಜಾಶ್ರಯ ಇಲ್ಲದೆ ಇರುವುದು. ರಾಜಾಶ್ರಯ ಇಲ್ಲದೆ ತುಳುನಾಡಿನ ಪ್ರಾದೇಶಿಕ ಭಾಷೆ ಜನಸಾಮಾನ್ಯರ ಭಾಷೆಯಾಗಿ ಉಳಿದಿದೆ ಹೆಚ್ಚುಗಾರಿಕೆ. ಇದಕ್ಕೆ ಕಾರಣ ಇಲ್ಲಿನ ಉಪಾಸನಾ ಸಂಸ್ಕøತಿ. ತುಳುನಾಡಿನ ಉಪಾಸನೆಯ ಶ್ರೀಮಂತ ನುಡಿಗಟ್ಟುಗಳು ಪಾಡ್ದನಗಳು ತುಳುಭಾಷೆಯಲ್ಲಿ ಇರುವುದರಿಂದ ತುಳುಭಾಷೆ ಇನ್ನಿತರ ಭಾಷೆಗಳಿಂದ ಶ್ರೀಮಂತಗೊಂಡಿದೆ ಎಂದರೆ ತಪ್ಪಾಗಲಾರದು.

ತುಳುನಾಡಿನ ಎಲ್ಲಾ ಭಾಷಿಕರು ಮಾತ್ರವಲ್ಲ ಮತಧರ್ಮೀಯರೂ  ತುಳುಭಾಷೆಯ ಮೂಲಕ ವ್ಯವಹಾರ ಮತ್ತು ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಇದರಿಂದಾಗಿ ತುಳುನಾಡಿನ ತುಳುಭಾಷೆ ಎಲ್ಲಾ ಭಾಷಿಕರ ಸೌರ್ಹಾದೆಯನ್ನು ಕಾಪಾಡಿಕೊಂಡು ಬಂದಿದೆ.

ಶಾಸ್ತೀಯ ಸ್ಥಾನ ಮಾನಕ್ಕೆ ತುಳುಭಾಷೆ ಅರ್ಹತೆಯನ್ನು ಪಡೆದುಕೊಂಡಿದೆ. ಮೌರ್ಯಮತ್ತು ಸಂಘಂ ಸಾಹಿತ್ಯ ತುಳು ಭಾಷೆಯ ಪ್ರಾಚೀನತೆಯ ಸುಳಿವು ಕೊಡುತ್ತದೆ. ಆದರೂ ತುಳು ಭಾಷೆ ಕರ್ನಾಟಕ ಸರಕಾರದ ಅವಗಣನೆಗೆ ಒಳಗಾಗಿದೆ.

"ಅಂಚಿ ತೆಲುಗೆರ್ ಇಂಚಿ ಕನಡೆರ್
ಎಂಚ ತಮಿಳೆರ್ ಮೆರೆಪೆರ್
ಕಣ್ಣೆದುರು ಕೇರಳ ಮೆರೆಪುಂಡು
ಎನ್ನ ತುಳುನಾಡ್ ಬುಲಿಪುಂಡು"

“ಆಚೆ ತೆಲುಗರು, ಈಚೆ ಕನಡರು
 ಹೇಗೆ ತಮಿಳರು ಮೆರೆವರು
ಕಣ್ಣೆದುರು ಕೇರಳ ಕೆನೆಯುತ್ತಿದೆ
ಎನ್ನ ತುಳುನಾಡು ಅಳುತ್ತಿದೆ. “

ಕರ್ನಾಟಕ ಏಕೀಕರಣ ಚಳುವಳಿಯ ಪ್ರಮುಖ ಹೋರಾಟಗಾರ ಕವಿ ಕಯ್ಯಾರ ಕಿಞ್ಞಣ್ಣ ರೈ ಅವರ ಹತಾಶ ನುಡಿಗಳಿವು.
ಈಗ ಅಂತಹ ಹತಾಶೆ ತುಳುನಾಡಿನ ಜನಸಾಮಾನ್ಯರಿಗಾಗಿದೆ. ಎತ್ತಿನ ಹೊಳೆ ಮೂಲಕ ತುಳುನಾಡನ್ನು ಅವಮಾನ ಮಾಡುತ್ತಿದೆ  ಸರಕಾರ. ಫಲವತ್ತಾದ ಮಣ್ಣಿನ ಕೃಷಿ ಭೂಮಿಯಾಗಿದ್ದ ತುಳುನಾಡಿನಲ್ಲಿ ವಿಷವನ್ನು ಫೂತ್ಕರಿಸುವ ಕಾರ್ಖಾನೆಗಳನ್ನು ತಂದು ಹಾಕಿ ತುಳುನಾಡಿನ ಮಣ್ಣಿಗೆ ಮತ್ತು ಮಣ್ಣಿನ ಸಂಸ್ಕøತಿಗೆ ಗದಾ ಪ್ರಹಾರ ಮಾಡಿದೆ.ಮತ್ತೂ ಮಾಡಲು ಹೊರಟಿದೆ. ಬಹುಷ: 1995 ಇರಬೇಕು. ಡಾ. ಶಿವರಾಮ ಕಾರಂತರು ಬೆಂಗಳೂರಿನಿಂದ ಮಂಗಳೂರಿಗೆ ವಿಮಾನ ಮೂಲಕ ಹೋಗುವವರಿದ್ದರು. ಆಗ ಅಲ್ಲಿಂದ ಬಂದ ಸುದ್ದಿ : ‘ಮೀನುಗಾರ ಮಹಿಳೆಯರು ಎಮ್ ಆರ್ .ಪಿ. ಎಲ್ ವಿರುದ್ಧ ಮುಷ್ಕರ ಹೂಡಿದ್ದಾರೆ. ರಸ್ತೆ ತಡೆ ನಡೆಸುತ್ತಿದ್ದಾರೆ. ಬಜಿಪೆಯಿಂದ ಕುಂದಾಪುರ ತಲುಪಲು ಕಷ್ಟವಾಗಬಹುದು’ ಎಂದು. ಶಿವರಾಮ ಕಾರಂತರು ಬಳಿ ಇದ್ದ ನನಗೆ ವಿವರಿಸಿದ್ದು ಹೀಗೆ : ಪಾಪ ಅವರ ಗಂಜಿಯ ಕರಕ್ಕೆ (ಅನ್ನದ ಮಡಕೆ) ಕಲ್ಲು ಹಾಕಿದೆ ಎಮ್ ಆರ್ ಪಿ. ಎಲ್. ಅವರು ಬೀದಿಗಿಳಿದು ಹೋರಾಡುವುದು ಅನಿವಾರ್ಯ.

ಈಗ ಇಡೀ ತುಳುನಾಡು ಬೀದಿಗಿಳಿದು ಹೋರಾಡಬೇಕಾಗಿದೆ. ತುಳುನಾಡಿಗರ ಗಂಜಿಯ ಕರಕ್ಕೆ ಕಲ್ಲು ಬೀಳುತ್ತಿದೆ. ಅನ್ನದ 'ಕರ ಒಟ್ಟೆ' (ತೂತು) ಆಗಿ ನೀರು ಸೋರಿ ಒಲೆ ಆರುತ್ತಿದೆ.....ಎದ್ದೇಳಿ....

ಡಾ. ಇಂದಿರಾ ಹೆಗ್ಗಡೆ

ತುಳುನಾಡೇತರ ಪ್ರದೇಶದಲ್ಲಿ ಹಾರಿಸಲಿ, ತುಳು ಪ್ರದೇಶದಲ್ಲಿ ಬೇಕೇ?

ಅಂದು ಸ್ವತಂತ್ರ ಭಾರತದಲ್ಲಿ 1953 ರಲ್ಲಿ ಭಾಷಾವಾರು ರಾಜ್ಯ ರಚನೆಗೆ ಮೊದಲ ಕೂಗೊಂದು ಆಂಧ್ರದಲ್ಲಿ ಮೊಳಗಿತ್ತು, ತದ ನಂತರ ಇದು ಇತರೆಡೆ ಹಬ್ಬಿ ಹಲವಾರು ಭಾಷಾವಾರು ರಾಜ್ಯ ರಚನೆಯಾಯಿತು



ಮುಂದೆ ಹಿಂದಿ ಗುಮಾನಿಯ ನಡುವೆ
1960 ರ ಹೊತ್ತಿಗೆ ದ್ರಾವಿಡ ಚಳುವಳಿಯು ತಮಿಳುನಾಡಿನಲ್ಲಿ ಜೋರಾಗಿಯೇ ನಡೆಯಿತು,
ಇದರ ಪ್ರಭಾವ ತಮಿಳರು ನೆಲೆಸಿರುವ ಬೆಂಗಳೂರಿಗೂ ತಟ್ಚಿತು

ದ್ರಾವಿಡ ಚಳುವಳಿಯ ಮುಂಚೂಣಿಯಲ್ಲಿದ್ದ ಡಿಮ್ಕೆ ಪಕ್ಷವು ತನ್ನ‌ ಕಪ್ಪು ಕೆಂಪು ಬಣ್ಣದ ಧ್ವಜವನ್ನು ಬೆಂಗಳೂರಿನಲ್ಲಿಯೂ ಸ್ಥಾಪಿಸಲು ಹೋಯಿತು

ಈ ಡಿಮ್ಕೆಯ ಹವಾವನ್ನು ತಪ್ಪಿಸುವ ಉದ್ದೇಶದಿಂದ‌ ಪ್ರಾದೇಶಿಕ ಪಕ್ಷಬೇಕೆಂದು ಮನಗಂಡ ಇಲ್ಲಿನ ನಾಯಕರು 1965 ರಲ್ಲಿ ಕನ್ನಡ ಪಕ್ಷ ಸ್ಥಾಪಿಸಿದರು

ದ್ರಾವಿಡ ಚಳುವಳಿಗೆ ಹಿನ್ನೆಡೆಯಾಗಬಾರದೆಂಬ ಉದ್ದೇಶದಿಂದ ಮಾತುಕತೆಯ ಮೂಲಕ ಡಿಮ್ಕೆ ಪಕ್ಷದ ಕೆಂಪು-ಕಪ್ಪು ಬಣ್ಣಕ್ಕೆ ಪರ್ಯಾಯವಾಗಿ ಹಳದಿ-ಕೆಂಪು ಬಣ್ಣದ ಧ್ವಜವೊಂದನ್ನು ಕನ್ನಡ ಪಕ್ಷಕ್ಕಾಗಿ ಸಿದ್ಧಪಡಿಸಿದರು

ಇದು ಮುಂದೆ ಪಕ್ಷದ ಧ್ವಜವಾಗಿಯೇ ಚುನಾವಣೆ ಆಯೋಗದಲ್ಲಿ ನೋಂದಾವಣೆಗೊಂಡಿತು

1998 ರಲ್ಲಿ ಕನ್ನಡ ಪ್ರಾಧಿಕಾರ ಇದನ್ನು ನಾಡಧ್ವಜವಾಗಿ ಮಾಡಲು ಹೊರಟಿತ್ತಾದರೂ ಪಕ್ಷದ ಧ್ವಜ ನಾಡ ಧ್ವಜ ಮಾಡಲು ಸ್ವತಃ ಕನ್ನಡ ಪಕ್ಷವೇ ವಿರೋಧ ವ್ಯಕ್ತ ಪಡಿಸಿತು

ಈಗ ಈ ರಾಜಕೀಯ ಪಕ್ಷಕ್ಕಾಗಿ ಮಾಡಿದ ಧ್ವಜವನ್ನು ನಮ್ಮ ಮೇಲೆ ಹೇರುವುದು ಯಾಕೆ ಎಂಬುದು ನಮ್ಮ ಪ್ರಶ್ನೆ

ಅಂದು ಸ್ವತಂತ್ರ ಭಾರತದಲ್ಲಿ 1953 ರಲ್ಲಿ ಭಾಷಾವಾರು ರಾಜ್ಯ ರಚನೆಗೆ ಮೊದಲ ಕೂಗೊಂದು ಆಂಧ್ರದಲ್ಲಿ ಮೊಳಗಿತ್ತು, ತದ ನಂತರ ಇದು ಇತರೆಡೆ ಹಬ್ಬಿ ಹಲವಾರು ಭಾಷಾವಾರು ರಾಜ್ಯ ರಚನೆಯಾಯಿತು

ಮುಂದೆ ಹಿಂದಿ ಗುಮಾನಿಯ ನಡುವೆ
1960 ರ ಹೊತ್ತಿಗೆ ದ್ರಾವಿಡ ಚಳುವಳಿಯು ತಮಿಳುನಾಡಿನಲ್ಲಿ ಜೋರಾಗಿಯೇ ನಡೆಯಿತು,
ಇದರ ಪ್ರಭಾವ ತಮಿಳರು ನೆಲೆಸಿರುವ ಬೆಂಗಳೂರಿಗೂ ತಟ್ಚಿತು

ದ್ರಾವಿಡ ಚಳುವಳಿಯ ಮುಂಚೂಣಿಯಲ್ಲಿದ್ದ ಡಿಮ್ಕೆ ಪಕ್ಷವು ತನ್ನ‌ ಕಪ್ಪು ಕೆಂಪು ಬಣ್ಣದ ಧ್ವಜವನ್ನು ಬೆಂಗಳೂರಿನಲ್ಲಿಯೂ ಸ್ಥಾಪಿಸಲು ಹೋಯಿತು

ಈ ಡಿಮ್ಕೆಯ ಹವಾವನ್ನು ತಪ್ಪಿಸುವ ಉದ್ದೇಶದಿಂದ‌ ಪ್ರಾದೇಶಿಕ ಪಕ್ಷಬೇಕೆಂದು ಮನಗಂಡ ಇಲ್ಲಿನ ನಾಯಕರು 1965 ರಲ್ಲಿ ಕನ್ನಡ ಪಕ್ಷ ಸ್ಥಾಪಿಸಿದರು

ದ್ರಾವಿಡ ಚಳುವಳಿಗೆ ಹಿನ್ನೆಡೆಯಾಗಬಾರದೆಂಬ ಉದ್ದೇಶದಿಂದ ಮಾತುಕತೆಯ ಮೂಲಕ ಡಿಮ್ಕೆ ಪಕ್ಷದ ಕೆಂಪು-ಕಪ್ಪು ಬಣ್ಣಕ್ಕೆ ಪರ್ಯಾಯವಾಗಿ ಹಳದಿ-ಕೆಂಪು ಬಣ್ಣದ ಧ್ವಜವೊಂದನ್ನು ಕನ್ನಡ ಪಕ್ಷಕ್ಕಾಗಿ ಸಿದ್ಧಪಡಿಸಿದರು

ಇದು ಮುಂದೆ ಪಕ್ಷದ ಧ್ವಜವಾಗಿಯೇ ಚುನಾವಣೆ ಆಯೋಗದಲ್ಲಿ ನೋಂದಾವಣೆಗೊಂಡಿತು

1998 ರಲ್ಲಿ ಕನ್ನಡ ಪ್ರಾಧಿಕಾರ ಇದನ್ನು ನಾಡಧ್ವಜವಾಗಿ ಮಾಡಲು ಹೊರಟಿತ್ತಾದರೂ ಪಕ್ಷದ ಧ್ವಜ ನಾಡ ಧ್ವಜ ಮಾಡಲು ಸ್ವತಃ ಕನ್ನಡ ಪಕ್ಷವೇ ವಿರೋಧ ವ್ಯಕ್ತ ಪಡಿಸಿತು

ಈಗ ಈ ರಾಜಕೀಯ ಪಕ್ಷಕ್ಕಾಗಿ ಮಾಡಿದ ಧ್ವಜವನ್ನು ನಮ್ಮ ಮೇಲೆ ಹೇರುವುದು ಯಾಕೆ ಎಂಬುದು ನಮ್ಮ ಪ್ರಶ್ನೆ
ಅಂದು ಸ್ವತಂತ್ರ ಭಾರತದಲ್ಲಿ 1953ನೇ ಇಸವಿಯಲ್ಲಿ ಭಾಷಾವಾರು ರಾಜ್ಯ ರಚನೆಗೆ ಮೊದಲ ಕೂಗೊಂದು ಆಂಧ್ರದಲ್ಲಿ ಮೊಳಗಿತ್ತು, ತದ ನಂತರ ಇದು ಇತರೆಡೆ ಹಬ್ಬಿ ಹಲವಾರು ಭಾಷಾವಾರು ರಾಜ್ಯ ರಚನೆಯಾಯಿತು

ಮುಂದೆ ಹಿಂದಿ ಗುಮಾನಿಯ ನಡುವೆ
1960 ರ ಹೊತ್ತಿಗೆ ದ್ರಾವಿಡ ಚಳುವಳಿಯು ತಮಿಳುನಾಡಿನಲ್ಲಿ ಜೋರಾಗಿಯೇ ನಡೆಯಿತು,
ಇದರ ಪ್ರಭಾವ ತಮಿಳರು ನೆಲೆಸಿರುವ ಬೆಂಗಳೂರಿಗೂ ತಟ್ಚಿತು

ದ್ರಾವಿಡ ಚಳುವಳಿಯ ಮುಂಚೂಣಿಯಲ್ಲಿದ್ದ ಡಿಮ್ಕೆ ಪಕ್ಷವು ತನ್ನ‌ ಕಪ್ಪು ಕೆಂಪು ಬಣ್ಣದ ಧ್ವಜವನ್ನು ಬೆಂಗಳೂರಿನಲ್ಲಿಯೂ ಸ್ಥಾಪಿಸಲು ಹೋಯಿತು

ಈ ಡಿಮ್ಕೆಯ ಹವಾವನ್ನು ತಪ್ಪಿಸುವ ಉದ್ದೇಶದಿಂದ‌ ಪ್ರಾದೇಶಿಕ ಪಕ್ಷಬೇಕೆಂದು ಮನಗಂಡ ಇಲ್ಲಿನ ನಾಯಕರು 1965 ರಲ್ಲಿ ಕನ್ನಡ ಪಕ್ಷ ಸ್ಥಾಪಿಸಿದರು

ದ್ರಾವಿಡ ಚಳುವಳಿಗೆ ಹಿನ್ನೆಡೆಯಾಗಬಾರದೆಂಬ ಉದ್ದೇಶದಿಂದ ಮಾತುಕತೆಯ ಮೂಲಕ ಡಿಮ್ಕೆ ಪಕ್ಷದ ಕೆಂಪು-ಕಪ್ಪು ಬಣ್ಣಕ್ಕೆ ಪರ್ಯಾಯವಾಗಿ ಹಳದಿ-ಕೆಂಪು ಬಣ್ಣದ ಧ್ವಜವೊಂದನ್ನು ಕನ್ನಡ ಪಕ್ಷಕ್ಕಾಗಿ ಸಿದ್ಧಪಡಿಸಿದರು

ಇದು ಮುಂದೆ ಪಕ್ಷದ ಧ್ವಜವಾಗಿಯೇ ಚುನಾವಣೆ ಆಯೋಗದಲ್ಲಿ ನೋಂದಾವಣೆಗೊಂಡಿತು

1998 ರಲ್ಲಿ ಕನ್ನಡ ಪ್ರಾಧಿಕಾರ ಇದನ್ನು ನಾಡಧ್ವಜವಾಗಿ ಮಾಡಲು ಹೊರಟಿತ್ತಾದರೂ ಪಕ್ಷದ ಧ್ವಜ ನಾಡ ಧ್ವಜ ಮಾಡಲು ಸ್ವತಃ ಕನ್ನಡ ಪಕ್ಷವೇ ವಿರೋಧ ವ್ಯಕ್ತ ಪಡಿಸಿತು

ಈಗ ಈ ರಾಜಕೀಯ ಪಕ್ಷಕ್ಕಾಗಿ ಮಾಡಿದ ಧ್ವಜವನ್ನು ನಮ್ಮ ಮೇಲೆ ಹೇರುವುದು ಯಾಕೆ ಎಂಬುದು ನಮ್ಮ ಪ್ರಶ್ನೆ

ತುಳುನಾಡೇತರ ಪ್ರದೇಶದಲ್ಲಿ ಹಾರಿಸಲಿ, ತುಳು ಪ್ರದೇಶದಲ್ಲಿ ಬೇಕೇ?