ತುಳುನಾಡ್ದ ಜಾನಪದ ಗೊಬ್ಬು - ಕೋರಿದಕಟ್ಟ.
Facebook copy
ತುಳುನಾಡಿನ ಸಂಸ್ಕೃತಿಯಲ್ಲಿ ಕೋಳಿ ಅಂಕಕ್ಕೆ (ಕೋರಿದ ಕಟ್ಟ)ತನ್ನದೇ ಅದ ಮಹತ್ವವಿದೆ. ಕೋಳಿ ಅಂಕ ಯಾವಾಗ ಆರಂಭವಾಯಿತೋ ಅಥವಾ ಎಲ್ಲಿ ಆರಂಭವಾಯಿತೋ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿದ್ದರೂ ಹಿಂದಿನಕಾಲದಿಂದಲೇ ನಡೆದುಕೊಂಡು ಬಂದಿದೆ ಎಂದು ತಿಳಿಯಬಹುದು. ಇತಿಹಾಸದಲ್ಲಿ ಪ್ರಾರಂಭವಾದ ಈ ಜಾನಪದ ಆಟ ಕ್ರಮೇಣ ದೈವಾರಾಧನೆಯ ಜೊತೆಗೆ ನಡೆಯುತ್ತಿರುವುದರಿಂದ ಧಾರ್ಮಿಕ ಮಹತ್ವ ಪಡೆಯಿತು. ಕೋಳಿ ಅಂಕವು ಜಾತ್ರೆ ನಡೆದು ಮುಗಿದ ಮಾರನೇ ದಿನದಿಂದಲೇ ಪ್ರಾರಂಭವಾಗುತ್ತದೆ, ಹಾಗೆಯೇ ನೇಮೋತ್ಸವ ಮುಗಿದ ದಿನದಿಂದಲೇ ಪ್ರಾಂಭವಾಗುತ್ತದೆ ಇದು ಇಲ್ಲಿನ ಮೂಲ ಪದ್ಧತಿ. ಈಗಲೂ ಕೋರಿಗುಂಟ ಮಾಡಿಯೇ ನೇಮೋತ್ಸವಗಳು ಆರಂಭವಾಗುತ್ತದೆ. ಕೋಳಿಗಳ ಹೋರಾಟದ ಸ್ಥಳವನ್ನು “ಕಲ” ಎಂದು ಕರೆಯಲಾಗುತ್ತದೆ .ಜನರು ತಮ್ಮದೇ ಆದ ಕೋಳಿಗಳನ್ನು ತರುತ್ತಾರೆ ಮತ್ತು ಅವರು ಬಾಲ್ ಎಂಬ ಸಣ್ಣ ಚಾಕುವನ್ನು ಕೋಳಿಗಳ ಕಾಲುಗಳಿಗೆ ಕಟ್ಟುತ್ತಾರೆ ಮತ್ತು ನಂತರ ಪರಸ್ಪರ ಹೋರಾಡಲು ಅವಕಾಶ ಮಾಡಿಕೊಡುತ್ತಾರೆ. “ಜೋಡಿ ನಾಡುನು” ಎಂಬುದು ಹೋರಾಟಕ್ಕಾಗಿ ಜೋಡಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ “ಕೊರಿ ಮುಟ್ಟುನು” ಎಂಬುದು ನಿಜವಾಗಿ ಹೋರಾಟವನ್ನು ಅನುಸರಿಸುತ್ತದೆ. ಒಂದು ಕೋಳಿ ದೂರ ಓಡಿದಾಗ ಅಥವಾ ಗಾಯಗೊಂಡಾಗ. ಗೆಲ್ಲುವ ಕೋಳಿ ಮಾಲೀಕರು ಒಂಟಿ ಕಟ್ಟಾದಲ್ಲಿ ಎರಡೂ ಕೋಳಿಗಳನ್ನು ಪಡೆಯುತ್ತಾರೆ, ಅದನ್ನು ಆ ಸಂಜೆ ಗೆಲುವು ಎಂದು ಪರಿಗಣಿಸಲಾಗುತ್ತದೆ, ಮತ್ತು ಅದನ್ನು ಅಂಕಾ ಎಂದು ಕರೆಯುತ್ತಾರೆ.
ಜನವರಿ ತಿಂಗಳು ಆರಂಭವಾದರೆ ಅಲ್ಲಿಂದ ಮುಂದಕ್ಕೆ ಕರಾವಳಿಯ ಗ್ರಾಮಾಂತರ ಪ್ರದೇಶಗಳಲ್ಲಿ ನೇಮ, ಅಂಕ, ಆಯನ ಹೀಗೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳ ಗೌಜು ಆರಂಭವಾಗುತ್ತದೆ. ಜನವರಿಯಿಂದ ಮೇ ವರೆಗೂ ನಡೆಯುವ ಅಂಕ-ಆಯನ ಮೊದಲಾದ ಉತ್ಸವ ಜಾತ್ರೆಗಳು ಪತ್ತನಾಜೆಯಂದು ಮುಕ್ತಾಯವಾಗುತ್ತವೆ. ಕೋಳಿಗಳ ಹೋರಾಟದ ಸ್ಪರ್ಧೆಯಾದ ‘ಕೋಳಿ ಅಂಕ’ (ಕೋರಿ ಕಟ್ಟ) ಜನಪದರ ಮನರಂಜನೆಗಾಗಿ ರೂಪುಗೊಂಡ ಕ್ರೀಡೆ. ಇಲ್ಲಿನ ಮತ್ತೊಂದು ಜನಪದ ಕ್ರೀಡೆಯಾದ ಕಂಬಳದಂತೆ ಕೋಳಿ ಅಂಕವನ್ನು ಇಂತಹ ನಿರ್ದಿಷ್ಟ ಸಮಯದಲ್ಲಿ ನಡೆಸಬೇಕೆಂಬ ನಿಯಮವೇನೂ ಇಲ್ಲ. ಜನಪದರ ಮನರಂಜನೆಯ ಉದ್ದೇಶಕ್ಕಾಗಿಯಷ್ಟೆ ಆರಂಭವಾಗಿರಬಹುದಾದ ಕೋಳಿ ಅಂಕವು ಈಗ ಪಡೆದುಕೊಂಡಿರುವ ಆಯಾಮ ಮಾತ್ರ ರಕ್ತಸಿಕ್ತ. ಕೋಳಿ ಅಂಕದ ಆರಂಭ ಯಾವ ಉದ್ದೇಶಕ್ಕಾಗಿ ಆರಂಭವಾಯಿತೋ, ಆಗ ಅದರ ಉದ್ದೇಶಗಳು ಏನಿದ್ದವೋ? ಅದು ಕೇವಲ ಮನರಂಜನೆಯೋ? ಅಥವಾ ಅದರಲ್ಲಿ ಧಾರ್ಮಿಕ ಉದ್ದೇಶಗಳೂ ಇದ್ದುವೋ? ದೈವಗಳ ನೇಮದ ಕಾಲದಲ್ಲಿ ಮತ್ತು ಕೆಲವು ದೇವಾಲಯಗಳ ಹತ್ತಿರದಲ್ಲಿ ಕೋಳಿ ಅಂಕವು ನಡೆಯುತ್ತಿದ್ದುದನ್ನು ನೋಡಿದರೆ ಅದು ಭೂತಗಳಿಗೆ ಅಥವಾ ದೈವಗಳಿಗೆ ರಕ್ತದ ನೈವೇದ್ಯ ಮಾಡುವ ಉದ್ದೇಶದ್ದಿರಬಹುದು ಎಂದು ಹಿರಿಯರು ಅಭಿಪ್ರಾಯಪಡುತ್ತಾರೆ.
‘ಅಂಕದ ಕೋಳಿ’ ಎಂದರೆ ಅದು ‘ಹುಂಜ’ ಮಾತ್ರ. ಹೆಣ್ಣು ಕೋಳಿಗಳಿಗೆ ಕದನದ ಆಖಾಡಕ್ಕೆ ಪ್ರವೇಶವಿಲ್ಲ (ಅಬಲೆಯರೆಂದೋ ಏನೊ?). ಅವುಗಳನ್ನು ಬೆಳೆಸುವ ಉದ್ದೇಶ ಮಾಂಸಕ್ಕಾಗಿ ಅಲ್ಲವಾದರೂ ಕಾದಾಟದಲ್ಲಿ ಸತ್ತ ಹುಂಜ ಅಡುಗೆ ಮನೆಗೆ ಹೋಗುತ್ತದೆನ್ನುವುದು ಮಾತ್ರ ಸತ್ಯ. ಅಂದಹಾಗೆ, ಸಾಕಿ ಬೆಳೆಸಲೊಂದು ನಿರ್ದಿಷ್ಟ ಕ್ರಮವಿದೆ.ಆ ಕ್ರಮದಲ್ಲಿ ಆಹಾರ ಪದ್ಧತಿ, ಅವುಗಳ ನಡವಳಿಕೆ ತಿದ್ದುವಿಕೆ, ದೇಹದ ಭಾರದ ನಿಯಂತ್ರಣ, ಕಾದಾಟಕ್ಕೆ ಬೇಕಾದ ಕೆಚ್ಚನ್ನು ತುಂಬುವಿಕೆ, ಕಾದಾಟದ ತರಬೇತಿ ಇವೆಲ್ಲ ಇರುತ್ತದೆ. ಕಡ್ಡಾಯ ಬ್ರಹ್ಮಚರ್ಯ! ಕಂಬಳದ ಕೋಣಗಳನ್ನು ಸಾಕುವಷ್ಟು ಶ್ರಮ ಮತ್ತು ಹಣ ಇದಕ್ಕೆ ಬೇಕಾಗಿಲ್ಲವಾದರೂ ಕಾದಾಟದ ಕೋಳಿಗಳನ್ನು ಸಾಕುವುದಾಗಲಿ ಹೋರಾಟದ ಕೆಚ್ಚನ್ನು ಅದರಲ್ಲಿ ತುಂಬಿಸುವುದಾಗಲಿ ಸರಳವಾದ ಕೆಲಸವೇನಲ್ಲ.
ಕೋಳಿ ಮರಿಯನ್ನು ಆಯ್ದುಕೊಂಡ ಮೇಲೆ ಅದರ ಬೆಳವಣಿಗೆಯ ಕಾಲದಲ್ಲಿ ಪೋಷಕಾಂಶಗಳಿಂದ ಸಮೃದ್ಧವಾದ ವಿಶೇಷ ತಿನಿಸುಗಳನ್ನು ಹಾಕಿ ಸಾಕಬೇಕಾಗುತ್ತದೆಯೇ. ಕೋಳಿ ಬೆಳೆಯಲು ಉತ್ತಮವಾದ ಪೌಷ್ಟಿಕ ಆಹಾರ ಬೇಕು. ಅದು ಕೋಳಿಯ ಶಕ್ತಿವರ್ಧನೆಗೆ ಪೂರಕವಾಗಿರಬೇಕೆ ಹೊರತು ಅದರ ದೇಹದ ತೂಕವನ್ನು ಹೆಚ್ಚಿಸಬಾರದು. ಗ್ರಾಮೀಣಜನರ ಅನುಭವದ ಪ್ರಕಾರ ಗೋಧಿ ದೇಹದ ಭಾರವನ್ನು ಹೆಚ್ಚಿಸಿ ಅದನ್ನು ಆಲಸಿಯನ್ನಾಗಿ ಮಾಡುತ್ತದಂತೆ. ದೇಹದ ಭಾರ ಹೆಚ್ಚಾದರೆ ಚುರುಕುತನದಿಂದ ಕಾದಾಡುವುದು ಸಾಧ್ಯವಾಗುವುದಿಲ್ಲ. ಹಾಗಾಗಿ ದೇಹಕ್ಕೆ ಚೈತನ್ಯವನ್ನು ಮಾತ್ರ ನೀಡುವಂತಹ ರಾಗಿ, ಭತ್ತ ಅಥವಾ ಅಕ್ಕಿಯನ್ನು ಉಣಿಸುತ್ತಾರೆ. ಕೆಲವೊಮ್ಮೆ ಕಡಲೆಕಾಳು ಮತ್ತು ಬೆಲ್ಲ ಕೊಡುವುದಿದೆ. ನೀರುಳ್ಳಿಯನ್ನು ಕೊಡುವುದರಿಂದ (ರಸದ ರೂಪದಲ್ಲಿ) ಕೋಳಿಯ ಕಾದಾಟದ ಕೆಚ್ಚು ಹೆಚ್ಚುತ್ತದೆಂಬ ನಂಬಿಕೆಯೂ ಇದೆ. ಮರಿಯ ಬೆಳವಣಿಗೆಯ ಕಾಲದಲ್ಲಿ ಅದಕ್ಕೆ ಕಾದಾಟದ ತಯಾರಿಯ ಜೊತೆಗೆ ಮನುಷ್ಯರ ಒಡನಾಟವನ್ನೂ ದೀಪದ ಬೆಳಕನ್ನೂ ಅಭ್ಯಾಸ ಮಾಡಿಸುತ್ತಾರೆ.
ಈ ಕೋಳಿಗಳಲ್ಲೂ ಎಷ್ಟೊಂದು ವೈವಿಧ್ಯತೆಗಳು ಇವೆ. ಅಂಕದ ಕೋಳಿಗಳ ಜಾಗದಲ್ಲಿ ನಮ್ಮ ಕೋಳಿಗಳನ್ನು ಕಲ್ಪಿಸಿಕೊಳ್ಳುವಂತೆಯೆ ಇಲ್ಲ. ಅವುಗಳೆಲ್ಲವೂ ಕೊಬ್ಬಿದ ಕೋಳಿಗಳು. ಹಾಗೆ ಅವೆಲ್ಲವನ್ನೂ ಒಂದೆ ವರ್ಗದಲ್ಲಿ ಕೂರಿಸುವಂತೆಯೂ ಇಲ್ಲ. ಕೋಳಿಗಳ ದೈಹಿಕ ಆಕಾರದ ಆಧಾರದಲ್ಲಿ ಸಣ್ಣ ಮೈಕಟ್ಟಿನ ಕೋಳಿಯನ್ನು ‘ಜೇಣ’ ಮತ್ತು ಬಲಿಷ್ಟ ದೇಹದ ಕೋಳಿಗಳನ್ನು ‘ಪೈರಿ’ ಎನ್ನುತ್ತಾರೆ. ಮೈಮೇಲಿನ ಪುಕ್ಕಗಳೂ ವರ್ಗೀಕರಣಕ್ಕೆ ಕಾರಣವಾಗುವುದರಿಂದ ಗರಿಗಳ ವಿನ್ಯಾಸಕ್ಕನುಗುಣವಾಗಿ ‘ಪೆರಡಿಂಗ’ ಅಥವ ‘ಜಳ್ಳಿ’ ಎನ್ನುತ್ತಾರೆ. ಕೋಳಿಗಳನ್ನು ವರ್ಗೀಕರಿಸಲು ಇರುವ ಮತ್ತೊಂದು ಮಾನದಂಡವೆಂದರೆ ಬಣ್ಣ. ಕಪ್ಪು, ಬಿಳಿ, ಹಳದಿ, ಕೆಂಪು ಹಾಗು ಪಂಚವರ್ಣಗಳ ಆಧಾರದಲ್ಲಿ ಅವುಗಳನ್ನು ವಿಂಗಡಿಸುತ್ತಾರೆ. ಶುದ್ಧ ಬಿಳಿ ಬಣ್ಣದ ಕೋಳಿ ‘ಬೊಳ್ಳೆ’ ಎನ್ನಿಸಿಕೊಂಡರೆ ಕಪ್ಪು, ಹಳದಿ, ಕೆಂಪು, ಪಂಚವರ್ಣದ ಆಧಾರದಲ್ಲಿ ‘ಕಕ್ಕೆ’, ‘ಮಂಜಲೆ’, ‘ಕುಪುಳೆ’, ‘ಪೆರಡಿಂಗೆ’ ಎನ್ನುತ್ತಾರೆ. ಬಿಳಿಯ ಮೇಲೆ ಬಣ್ಣ ಬಣ್ಣದ ಚುಕ್ಕೆಗಳಿದ್ದರೆ ಚುಕ್ಕಿಗಳ ಬಣ್ಣದ ಅಧಾರದಲ್ಲಿ ‘ಪಂಚಣಿ ಕಡ್ಲೆ’, ‘ಬಂಗಾರ್ ಕಡ್ಲೆ’, ‘ಕಪ್ಪು ಕಡ್ಲೆ’ ಎನ್ನುತ್ತಾರೆ. ಚುಕ್ಕಿಗಳ ಬದಲಾಗಿ ಇತರ ಬಣ್ಣಗಳ ತುಸು ಮಿಶ್ರಣವಿದ್ದಲ್ಲಿ ಅವುಗಳನ್ನು ‘ಮಂಜಲ್ ಬೊಳ್ಳೆ’, ‘ಕೊಂರ್ಗು ಬೊಳ್ಳೆ’, ‘ಕಾವೆ ಬೊಳ್ಳೆ’, ‘ಪೆರಡಿಂಗ ಬೊಳ್ಳೆ’ ಎಂದು ವರ್ಗೀಕರಿಸುತ್ತಾರೆ. ಕೋಳಿಯ ಜುಟ್ಟುಗಳ ಆಕಾರದಲ್ಲಿ ಅವನ್ನು ಸಹಾ ನಾತ್ರಕೊಟ್ಟು, ಸುತ್ಯೆಕೊಟ್ಟು, ಇರೆಕೊಟ್ಟು, ಕುಂಚಲಕೊಟ್ಟು ಮತ್ತು ನಾಗಕೊಟ್ಟು ಎಂದು ವಿಂಗಡಿಸಿದ್ದಾರೆ. ಎಲ್ಲ ಸೇರಿ ಸುಮಾರು ಅರವತ್ತರಷ್ಟು ವೈವಿಧ್ಯಮಯ ಕೋಳಿಗಳಿವೆಯಂತೆ! ಎಲ್ಲವೂ ಅಂಕದ ಕಣದಲ್ಲಿ ಕಾಣಿಸಿಕೊಳ್ಳುತ್ತವಾದರೂ ಅವುಗಳಲ್ಲಿ ಸುಮಾರು ಹದಿನೈದರಷ್ಟು ಜಾತಿಯ ಕೋಳಿಗಳು ಕಾದಾಟಕ್ಕೆ ಅತ್ಯುತ್ತಮವಂತೆ.
ಕಾಲಕ್ರಮದಲ್ಲಿ ಧಾರ್ಮಿಕ ಉದ್ದೇಶದ ಜೊತೆಗೆ ಮನರಂಜನೆಯ ಅಂಶಗಳೂ ಸೇರಿರಬಹುದು. ಆದರೆ ಈಗಂತೂ ಅದು ಹೋರಾಟದ ಅಂಗಣವಾಗಿದೆ. ಆ ಅಂಗಣದಲ್ಲಿ ಅಂಕದ ಕೋಳಿಗಳಷ್ಟೆ ಅಲ್ಲದೆ ಅದರ ಯಜಮಾನರೂ ಜೊತೆಯಲ್ಲಿ ಪ್ರೇಕ್ಷಕರೂ ಹೊಡೆದಾಟಕ್ಕಿಳಿಯುತ್ತಾರೆ. ಕೋರಿ ಕಟ್ಟದ ಕಾಲದಲ್ಲಿ ಗುಂಪು ಘರ್ಷಣೆಗಳೂ ನಡೆಯುತ್ತಿರುತ್ತವೆ.ಶರಾಬು ಅಂಗಡಿಗಳ ಆಸುಪಾಸಿನಲ್ಲೆ ಅಂಕ ಜರುಗುವುದರಿಂದ ಘರ್ಷಣೆಗೆ ಅವಕಾಶಗಳು ಹೆಚ್ಚಾಗೇ ಇರುತ್ತವೆ. ಗೆಲ್ಲುವ ಕೋಳಿಗಳ ಮೇಲೆ ಬಾಜಿ ಕಟ್ಟುವುದರಿಂದ ಅದೊಂದು ರೀತಿಯ ಜೂಜಿನಂತೆಯೇ ಪರಿಗಣಿತವಾಗಿದೆ.
ಹೀಗೇನೆ ಹಿಂದಿನ ಕಾಲದಿಂದ ನಡೆದುಕೊಂಡು ಬಂದ ಈ ಕೋಳಿಅಂಕಗಳು ಕಾಲ ಕ್ರಮೇಣ ದುಡ್ಡಿನ ಆಸೆಗಾಗಿ ಜೂಜು ದಂಧೆಯಾಗಿ ಪರಿವರ್ತನೆಯಾಗಿದ್ದು ಒಂದು ವಿಪರಿಯಾಸವೇ ಸರಿ. ಈಗ ಕೋಳಿ ಅಂಕವು ವಿವಿಧ ರೀತಿಯಲ್ಲಿ ನಡೆಯುತ್ತದೆ, ಸವಾಲಿನ ಕಟ್ಟಗಳೂ, ಮೊಬೈಲ್ ಕಟ್ಟಗಳೂ. ಈಗ ಕೋಳಿ ಅಂಕದಲ್ಲಿ ಹಿರಿಯವರಿಗಿಂತ ಕಿರಿಯವರೇ ಜಾಸ್ತಿ ಅವರದೇ ಅಧಿಕಾರ, ಲಕ್ಷ ಗಟ್ಟಲೆ ಜೂಜುಗಳು ನಡೆಯುತ್ತದೆ.ಕೋಳಿ ಅಂಕಕ್ಕೆ ಹೋಗಿ ಜೂಜಾಡಿ ಹಣ ಕಳೆದುಕೊಳ್ಳುವವರು ಇರುವಂತೆ ಕೋಳಿ ಅಂಕದಲ್ಲೆ ಹಲವಾರು ಉಪ ವೃತ್ತಿಗಳನ್ನು ಕಂಡುಕೊಂಡವರೂ ಇದ್ದಾರೆ. ದೈವಸ್ಥಾನದ ಬಳಿಯ ಅಂಕವನ್ನು ಬಿಟ್ಟು ಉಳಿದಂತೆ ಕೋಳಿ ಅಂಕದ ಪಕ್ಕದ ಸಾರಾಯಿ ಅಂಗಡಿಗೆ ಯಾವಾಗಲೂ ಭರ್ಜರಿ ವ್ಯಾಪಾರ ಇದ್ದೇ ಇರುತ್ತದೆ. ಉಳಿದಂತೆ ತಂಪು ಪಾನೀಯ ಹಾಗೂ ಐಸ್ ಕ್ರೀಮ್ ಮಾರಾಟಗಾರರಿಗೆ, ಚುರುಮುರಿಯವರಿಗೂ ಆದಾಯವಿದ್ದೇ ಇರುತ್ತದೆ. ಕೋಳಿಯ ಕಾಲಿಗೆ ಕಟ್ಟುವ ಹರಿತವಾದ ಕತ್ತಿಗಳನ್ನು (ಬಾಳ್) ತಂದು ಅದನ್ನು ಬಾಡಿಗೆಗೆ ಕೊಟ್ಟು ಹಣಗಳಿಸುವವರೂ ಇರುತ್ತಾರೆ. ಅಂಕ ನಡೆಯುವ ಜಾಗದ ಚಪ್ಪರ (ದೊಂಪೆ) ಕಟ್ಟುವವರಿಗೆ, ಅಲ್ಲಿಗೆ ರಾತ್ರೆ ಇಡೀ ವಿದ್ಯುತ್ ಸೌಲಭ್ಯ ಕಲ್ಪಿಸುವವರಿಗೆ ಸಾಕಷ್ಟು ಕೆಲಸವಿರುತ್ತದೆ.ಕೋಳಿಗಳ ಪಂಚಾಗವೂ ಇದೆ. ಯಾವ ರಂಗಿನ ಕೋಳಿಗೆ ಯಾವ ದಿನ ಹುಟ್ಟು, ಬಾಲ್ಯ, ಯೌವನ, ಮುಪ್ಪು, ಮರಣ ಎಂಬುದು ಕೋಳಿ ಶಾಸ್ತ್ರಜ್ನ್ಯರಿಗೆ ಗೊತ್ತಿರುತ್ತದೆ. ಇಲ್ಲಿ ಹುಣ್ಣಿಮೆ ಮತ್ತು ಅಮವಾಸ್ಯೆಗಳೂ ಪ್ರಮುಖ ಪಾತ್ರ ವಹಿಸುತ್ತದೆ. ಅದನ್ನೆಲ್ಲಾ ತಿಳಿದುಕೊಂಡೇ ಆ ಪ್ರಕಾರ ಕೋಳಿ ಅಂಕ ನಡೆಸುವವರಿದ್ದಾರೆ. ಯಾವ ಕೋಳಿ ಗೆಲ್ಲುತ್ತದೆ ಎಂದು ಪಂಥ ಹಾಕಿ ಜೂಜಾಡುವ ಪದ್ಧತಿ ಹಿಂದಿನಿಂದಲೂ ಇತ್ತು.
ಕೋಳಿ ಅಂಕದ ಹಿಂದೆ ಇರುವ ನಮ್ಮ ತುಳುನಾಡಿನ ಪರಂಪರೆಯನ್ನು ಮತ್ತು ಅದರ ಹಿಂದೆ ಇರುವ ಧಾರ್ಮಿಕ ನಂಬಿಕೆಗಳನ್ನು ಅರ್ಥಮಾಡಿಕೊಂಡು ನಡೆಸಬೇಕು. ಕೇವಲ ಜೂಜುಗಾಗಿ ಕೋಳಿ ಅಂಕ ನಡೆಸುತ್ತ ಹೋದರೆ ಕ್ರಮೇಣ ಅದಕ್ಕೂ ನಿರ್ಬಂಧ ಬೀಳುವ ಸಾಧ್ಯತೆ ಇದೆ, ಇದಕ್ಕೆ ಆಸ್ಪದ ಕೊಡದೆ ಕೇವಲ ಮನೋರಂಜನೆಗಾಗಿ ಮತ್ತು ಜಾನಪದ ಆಟವಾಗಿ ನಡೆಸಬೇಕು ಇದರಿಂದ ಈ ಕ್ರೀಡೆಯನ್ನು ಉಳಿಸಬಹುದು.
Facebook cop

No comments:
Post a Comment