Thursday, 6 April 2017

ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಅಥವಾ ಕೇರಳಕ್ಕೆ ಸೇರಬೇಕು ಅನ್ನುವ ಮಾತು ಈಗ ಅಪ್ರಸ್ತುತ


ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಅಥವಾ ಕೇರಳಕ್ಕೆ ಸೇರಬೇಕು ಅನ್ನುವ ಮಾತು ಈಗ ಅಪ್ರಸ್ತುತ. 

ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಅಥವಾ ಕೇರಳಕ್ಕೆ ಸೇರಬೇಕು ಅನ್ನುವ ಮಾತು ಈಗ ಅಪ್ರಸ್ತುತ.

ಭಾಷಾವಾರು ಪ್ರಾಂತ್ಯ ರಚನೆ ಸಂದರ್ಭದಲ್ಲಿ ಕಾಸರಗೋಡು ಸೇರಿ ತುಳು ಮಾತಾಡುವ ಬಾಗಗಳನ್ನು ಸೇರಿಸಿ ತುಳುರಾಜ್ಯ ಮಾಡುವ ಪ್ರಸ್ತವಣೆ ಕೇಂದ್ರ ಸರಕಾರದ ಮುಂದೆ ಇತ್ತು, ಆದರೆ  ವಲಸೆ ಬಂದು ತುಳುನಾಡಿನಲ್ಲಿ ಆಶ್ರಯ ಪಡೆದ ಕೆಲವು ನಾಯಕರು ತುಳು ಭಾಷೆಗೆ ಸ್ವಂತ ಲಿಪಿ ಇದ್ದರೂ ಇಲ್ಲ ಅಂತ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿದರು,
ತುಳುನಾಡು ಎಂಬುದು ಇಲ್ಲ, ಎಲ್ಲವನ್ನು ಕನ್ನಡ ನಾಡು ಎಂದು ಮನವರಿಕೆ ಕೊಟ್ಟರು, ಇದಕ್ಕೆ ಇವರಿಗೆ ಸಹಾಯಕ್ಕೆ ಬಂದದ್ದು ತುಳುನಾಡು ಕನ್ನಡ ಅರಸರ ಆಡಳಿತದಲ್ಲಿದ್ದದ್ದು. ಅಂದು ತುಳುವಿಗೆ ರಾಜಾಶ್ರಯ ಇಲ್ಲದ ಕಾರಣ, ಸಾಹಿತಿಗಳು ಸಹ  ತುಳುವನ್ನು ಮರೆತು ಕನ್ನಡದ ಬೆನ್ನು ಹಿಡಿದರು.. ಇದೆಲ್ಲವು ತುಳುನಾಡು ಇಲ್ಲವೇ ಇಲ್ಲ.. ತುಳು ಕನ್ನಡದ ಉಪಭಾಷೆ, ತುಳು ಸಂಸ್ಕೃತಿ ಕನ್ನಡದೇ ಸಂಸ್ಕೃತಿ ಎಂಬ ವಲಸಿಗರ ಕುತಂತ್ರದಿಂದ ತುಳುರಾಜ್ಯ ನುಚ್ಚು ನೂರಾಯಿತು.

ತುಳು ಕರ್ನಾಟಕ, ಕೇರಳದ ಒಂದು ಭಾಷೆ ಅಷ್ಟೇ ಆದರೆ ಅಡಿಯಾಳು ಅಲ್ಲ! ತುಳು ಭಾಷೆ ಉಳಿಸಲು ಮತ್ತು ಬೆಳಸಲು ಕನ್ನಡಿಗರ, ಕೇರಳದಲ್ಲಿ ಮಲಯಾಳಿಗರ ಸಹಕಾರ ಬೇಕು ಆದರೆ ಅದಕ್ಕೆ 5% ದಷ್ತು ಬೆಂಬಲ ಸಿಗುತ್ತಿಲ್ಲ ಅನ್ನುವುದು ಮಹಾ ಸತ್ಯ.

ದ್ರಾವೀಡ ಭಾಷೆಯಲ್ಲಿ ತುಳು ಮೊದಲನೆಯ ಭಾಷೆ ನೆನಪಿರಲಿ, ತುಳುಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ತುಳುವರು ಕಳೆದ 20 ವರ್ಷದಿಂದ ಹೊರಡುತ್ತಿದ್ದಾರೆ, ಇದಕ್ಕೆ ಯಾವ ಕನ್ನಡಿಗನೂ, ಮಲಯಾಳಿಗನೂ ಬೆಂಬಲ ಕೊಡುತ್ತಿಲ್ಲ, ತುಳುವಿಗೆ 8ನೇ ಪರಿಚ್ಛೇದದ ಮಾನ್ಯತೆ ತುಳುವರ “ಹಕ್ಕು” ಯಾರ ಭಿಕ್ಷೆಯಲ್ಲ..

ಎಲ್ಲ ಕಡೆ ಕನ್ನಡವೇ ಉಳಿಯಬೇಕು, ಮಲಯಾಳಿಯೇ ಬೆಳೆಯಬೇಕು ಎನ್ನುವ ಮಹದಾಸೆಯಿಂದ ಇನ್ನು 30 ವರ್ಷದಲ್ಲಿ ತುಳುವ ಎನ್ನವ ಮನುಷ್ಯ ಇದ್ದ ಎನ್ನುವುದನ್ನು ಹೇಳಲು ಯಾವ ದಾಖಲೆಗಳು ಸಿಗದು.

 ಕನಾಟಕದ ಉಳಿದ ಬಾಗದಲ್ಲಿ ಕನ್ನಡವೇ ಸತ್ಯ, ಕೇರಳದ ಉಳಿದ ಭಾಗದಲ್ಲಿ ಮಲಯಾಲಿಯೇ ನಿತ್ಯ ಇರಲಿ.
ಇದಕ್ಕೆ ತುಳುವರ ಸಂಪೂರ್ಣ ಬೆಂಬಲ ಇದೆ. ಆದರೆ ತುಳುನಾಡಿನಲ್ಲಿ ತುಳು ಭಾಷೆ ಸತ್ತರೆ ಕನ್ನಡ, ಮಲಯಾಳಿ ಇನ್ನು ಬೆಳೆಯುತ್ತದೆ ಅನ್ನುವ ಇವರು ತುಳು ಬಾಷೆಯನ್ನು ಹೇಗೆ ವ್ಯವಸ್ತಿತ ಕೊಲ್ಲುತಿದ್ದರೆ ಅನ್ನುವುದಕ್ಕೆ ಬೇಕಾದಷ್ಟು ಉದಾಹರಣೆ ಸಿಗುತ್ತದೆ.

 ಕುಂದಾಪುರದ ಬಾರ್ಕೂರು ಒಂದು ಕಾಲದಲ್ಲಿ ತುಳುವಿನ ರಾಜದಾನಿ ಯಾಕೇ ಅಲ್ಲಿ ತುಳು ಭಾಷೆ ನಿರ್ನಾಮವಾಗಿ ಕನ್ನಡ ಉದಯಿಸಿತು ಹೇಳಿ? ಈ ಕನ್ನಡೀಕರಣ ಇಲ್ಲಿಗೆ ನಿಲುವುದಿಲ್ಲ ಪುರಾತನ ತುಳುನಾಡಿನ ಹೆಸರು ಬಸ್ ಸ್ಟಾಂಡ್, ಗುಡಿ, ದೇವಸ್ಥಾನ, ದೈವಸ್ಥಾನ ಎಲ್ಲ ಕನ್ನಡೀಕರಣಗೊಳ್ಳುತ್ತಿವೆ,
ಅತ್ತಕಡೆ ಮಲಯಾಳಿಗರು ಮಂಗಳೂರನ್ನೇ ಆಕ್ರಮಿಸಿಕೊಂಡಿದ್ದಾರೆ.. ಯಾಕೇ ಸ್ವಾಮಿ ಇಂತಹ ಕೆಟ್ಟ ಬುದ್ದಿ?
ನಿಮಗೆ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ತುಳು ಮಾತಾಡುವುದು ಶಿಕ್ಷೆಗೆ ಅರ್ಹವಾದ ಅಪರಾದ ಮತ್ತು ಅಲ್ಲಿ ತುಳು ಸಂಪೂರ್ಣ ನಿಷೇದ! ತುಳು ಮಾತಾಡಿದರೆ ಶಿಕ್ಷೆ ಕನ್ನಡ, ಮಲಯಾಳಿ ಮಾತಾಡಿದರೆ ರಕ್ಷೆ !
ತುಳುವಿನ ಈ ಸ್ಥಿತಿಗೆ ತುಳುವರೇ ಹೊರತು ಕನ್ನಡಿಗರು, ಮಲಯಾಳಿಗರು ಅಲ್ಲ ಅನ್ನುವ ವಿತಂಡವಾದವನ್ನು ಕೆಲವರು ಮಂಡಿಸುತ್ತಾರೆ. ಅಲ್ಲದೇ ತುಳು ಭಾಷೆಗೆ ಸಿಗಬೇಕಾಗಿದ್ದ ಪ್ರಾಶಸ್ತ್ಯಗಳು, ಸ್ಥಾನಮಾನಗಳಿಗೆ ತುಳುವರೇ ಹೋರಾಡಬೇಕು ಹೊರತು ಕನ್ನಡಿಗರು, ಮಲಯಾಳಿಗರು ಅಲ್ಲ ಅನ್ನುವ ಜನರೇ ಹೆಚ್ಚು.

 ಶಾಲೆಗಳಲ್ಲಿ ತುಳು ಮಾತಾಡುವುದು ಶಿಕ್ಷೆಗೆ ಅರ್ಹವಾದ ಅಪರಾದವಾದ ಮೇಲೆ ಯಾಕೇ ಸ್ವಾಮಿ ಮನೆಯಲ್ಲಿ ತುಳು ಮಾತಾಡಬೇಕು?

 ಇದು ತುಳು ಬಾಷೆಗೆ ಕರ್ನಾಟಕ, ಕೇರಳ ಸರಕಾರ ಕೊಡುತ್ತಿರುವ ಪ್ರೋತ್ಸಾಹ! ಆತಂಕಕಾರಿ ವಿಷಯ ಅಂದರೆ ಈಗಿನ ಕೆಲವು ವರ್ಷಗಳಲ್ಲಿ ಅನೇಕ ಜನರು ತಮ್ಮ ಮಕ್ಕಳಿಗೆ ಮನೆಯಲ್ಲಿ ತುಳುವಲ್ಲಿ ಮಾತಾಡುವುದನ್ನು ನಿಷೇದ ಮಾಡಿದ್ದಾರೆ ..
ಹಿಂದಿ, ಕನ್ನಡ, ಮಲಯಾಳಿ ಮಾತಾನಾಡಲು ಶುರು ಮಾಡಿದ್ದಾರೆ..
ಇದೇ ಮುಂದುವರಿದರೇ ತುಳುನಾಡು ತುಳುನಾಡಾಗಿ ಉಳಿಯುವುದೇ ಅನುಮಾನ
✍🏻
ಟೀಮ್
*ಜೈತುಳುನಾಡ್

No comments:

Post a Comment