ಕಳರಿ ಇಳವರದ್ದಲ್ಲ ತುಳುವರದ್ದು.. ಭಾಗ ೧
ಮೂರು ದಿನಗಳಿಂದ ಮಲಯಾಳಂ ಜನಪದ ಸಾಹಿತ್ಯದ ಬಗ್ಗೆ ಓದುತ್ತಿದ್ದೆ. ತುಳು ಮತ್ತು ಮಳಯಾಳಂ ಸಾಹಿತ್ಯಗಳ ನಡುವೆ ಒಂದು ತೌಲನಿಕ ಅದ್ಯಯನ ನಡೆಸುವುದು ನನ್ನ ಉದ್ದೇಶವಾಗಿತ್ತು. ಬೌಗೋಳಿಕವಾಗಿ,ಜನಾಂಗೀಯ ದೃಷ್ಟಿಯಿಂದ ತುಳುನಾಡಿನ ಪಡಿಯಚ್ಚಿನಂತೆ ಇರುವ ಕೇರಳ ರಾಜ್ಯದ ಮಲಯಾಳಂ ಭಾಷೆಯ ಪ್ರಭಾವ ನಮ್ಮ ತುಳುನಾಡಿನ ಭಾಷೆ ಮತ್ತು ಸಂಸ್ಕೃತಿಯ ಮೇಲೆ ವಿಪರೀತವಾಗಿದೆ ಎಂಬ ಭ್ರಮೆಯನ್ನಿಟ್ಟುಕೊಂಡು ನಾನು ಮಲಯಾಳಿ ಜನಪದ ಸಾಹಿತ್ಯ ಪುಸ್ತಕಗಳನ್ನು ಗುಡ್ಡೆ ಹಾಕಿ ಓದುತ್ತಿದ್ದೆ. ಆದರೆ ನನ್ನ ಭ್ರಮೆ ಗಳೆಲ್ಲಾ ಒಂದೇ ದಿನದಲ್ಲಿ ಜರ್ರನೆ ಇಳಿದುಹೋಯ್ತು. ಅಸಲಿಗೆ ಮಲಯಾಳದ ಪ್ರಭಾವ ನಮ್ಮ ಮೇಲೆ ಆಗಿರುವುದಕ್ಕಿಂತಲೂ ನಮ್ಮ ಹಿರಿಯರ ಪ್ರಭಾವ ಮಲಯಾಳಂ ಮೇಲೆ ಅಪಾರವಾಗಿದೆ.ದುರಂತವೆಂದರೆ ತುಳುವರ ಅರಸೊತ್ತಿಗೆಗಳು ಬ್ರಿಟಿಷ್ ಅವಧಿಯಲ್ಲಿ ಸಂಪೂರ್ಣ ಅಳಿದು ಹೋದ ಕಾರಣ ತುಳುವರ ರಾಜಕೀಯ ಅಸ್ಮಿತೆ ಕಣ್ಮರೆ ಆಗಿ ಹೋಯಿತು. ನೋಡುಗರ ಕಣ್ಣಿಗೆ ಇದೊಂದು ಸ್ವತಂತ್ರ್ಯ ಅಸ್ತಿತ್ವ ಹೊಂದಿದ್ದ ಪ್ರಭುದ್ದ ಸಂಸ್ಕೃತಿಯಂತೆ ಕಾಣಲೇ ಇಲ್ಲ ಅಕ್ಕಪಕ್ಕದ ವಿಭಿನ್ನ ಸಂಸ್ಕೃತಿಗಳ ನಡುವಿನ ಬಫರ್ ಝೋನ್ ಥರಾ ಕಂಡಿತು. ತೌಳವ ಸಂಸ್ಕ್ರತಿ ಕೆಲವರ ಕಣ್ಣಿಗೆ ಕನ್ನಡ,ಮಲಯಾಳ,ಕೊಡವ ಸಂಸ್ಕೃತಿಗಳ ಕಲಸುಮೇಲೊಗರದಂತೆ ಕಂಡು ಬಂತು. ಲಿಖಿತ ಸಾಹಿತ್ಯಗಳ ಕೊರತೆಯೂ ಇದಕ್ಕೆ ಕಾರಣವಾಯ್ತೊ ಏನೋ. ಈ ಎಲ್ಲಾ ನಿರಾಶಗಳ ನಡುವೆಯೂ ನಮ್ಮಲ್ಲಿ ಒಂದಷ್ಟು ಆಶಾಭಾವನೆಯನ್ನು ಹುಟ್ಟು ಹಾಕುವುದು ಮಳಯಾಳಂ ಜನಪದ ಸಾಹಿತ್ಯಗಳು. ಈ ಸಾಹಿತ್ಯಗಳು ತುಳು ಭಾಷಾಭಿಮಾನಿಗಳಿಗೆ ಮರುಭುಮಿಯಲ್ಲಿ ಸಿಕ್ಕ ನೀರಿನ ಬುಗ್ಗೆಯಂತೆ ಸಂತಸ ನೀಡುತ್ತವೆ. ತುಳುನಾಡಿನ ಯುದ್ಧಕಲೆಗಳು ಮತ್ತು ಇಲ್ಲಿನ ಅಭೇದ್ಯ ಕೋಟೆಕೊತ್ತಲಗಳ ಬಗ್ಗೆ ಮಲಯಾಳ ಜನಪದ ಸಾಹಿತ್ಯಗಳಲ್ಲಿ ರಾಶಿಗಟ್ಟಲೆ ಮಾಹಿತಿ ಸಿಗುತ್ತದೆ. ಯುದ್ದ ಕಲೆಗಳನ್ನು ಕಲಿಯಲು ದಕ್ಷಿಣಭಾರತದ ವಿವಿಧ ಪ್ರದೇಶದಿಂದ ತರುಣರು ತುಳುನಾಡಿಗೆ ಆಗಮಿಸುತ್ತಿದ್ದರು ಎಂಬ ರೋಚಕ ಮಾಹಿತಿ ಕೇರಳ ದ ಜನಪದ ಕತೆಗಳಲ್ಲಿದೆ.
ಇದರಲ್ಲಿ ಆಯ್ದ ಒಂದೆರಡು ಉದಾಹರಣೆಗಳನ್ನು ನಿಮ್ಮ ಮುಂದಿಡಬಯಸುತ್ತೇನೆ. ಕೇರಳದಲ್ಲಿ ತಚ್ಚೋಳಿ ಚಂದು ಎಂಬ ಅತ್ಯುಗ್ರ ಪರಾಕ್ರಮಿ ಇದ್ದ. ಆತನ ಮಡದಿ ಮೂರುಲೋಕದಲ್ಲೂ ಸಿಗದಂತ ಅಪೂರ್ವ ಸುಂದರಿ. ಒಂದುದಿನ ತಚ್ಚೋಳಿ ಚಂದುವಿನ ಮಡದಿ ಕೆರೆಯಲ್ಲಿ ಹಂಸಗಳ ಜೊತೆ ವಿಹರಿಸುತ್ತಾ ಸ್ನಾನ ಮಾಡುತ್ತಿರಬೇಕಾದರೆ ತುಳುನಾಡಿನ ಕಂಡರ್ ಮೆನೋನ್ ಎಂಬ ಪಾಳೆಗಾರನೊಬ್ಬ ತನ್ನ ಬೆಂಗಾವಲಿನ ಸೈನಿಕರ ಜೊತೆ ಅದೇ ಮಾರ್ಗವಾಗಿ ಹೋಗುತ್ತದ್ದ. ಈಕೆಯ ರೂಪಕ್ಕೆ ಮನಸೋತ ಮೆನೋನ್ ಆಕೆಯನ್ನು ಬಲವಂತದಿಂದ ಅಪಹರಿಸಿದ. ಈ ವಿಚಾರ ತಿಳಿದ ತಚ್ಚೋಳಿ ಚಂದು ಮಡದಿಯ ರಕ್ಷಣೆಗಾಗಿ ಖಡ್ಗ ಹಿಡಿದು ತುಳುನಾಡಿಗೆ ಹೊರಟು ನಿಂತ. ಆ ಸಮಯದಲ್ಲಿ ಆತನ ತಾಯಿ ಅವನನ್ನು ತಡೆದು ಬುದ್ದಿವಾದ ಹೇಳುತ್ತಾಳೆ. ತುಳುನಾಡಿನ ವೀರರ ಕತೆ ನಿನಗೆ ತಿಳಿದಿಲ್ಲ ಅವರ ಕೋಟೆಗೆ ಕತ್ತಿ ಹಿಡಿದು ಪ್ರವೇಶಿಸಿದವರು ಜೀವಂತವಾಗಿ ಮರಳಿದ ಇತಿಹಾಸವೇ ಇಲ್ಲ. ಅವರ ವಿಚಿತ್ರ ಯುದ್ಧತಂತ್ರದ ಮುಂದೆ ಜೀವ ಉಳಿಸಿಕೊಳ್ಳುವುದು ಅಸಾಧ್ಯ. ಹೆಣ್ಣಿಗಾಗಿ ನೀನು ಜೀವಕಳೆದುಕೊಳ್ಳುವುದು ಥರವಲ್ಲ ಎಂದು ಬುದ್ದಿ ಹೇಳುತ್ತಾಳೆ.
ತುಳುನಾಡನ್ ಕೋಟ್ಟೊಡು ಮಲ್ಲಡಿಪ್ಪಾನ್
ಉಲಗತ್ತಿಲಾರುಮೆ ಇಲ್ಲ ವೇರೇ
ಎನ್ನುಡೆ ಅಮ್ಮಾವನ್ ಕುಂಞಮ್ಮಾವನ್
ತುಳುನಾಡ್ ಕೋಟ್ಟೋಡು ತೋಟ್ಟುಪ್ಪೋಯಿ
ಕಳಚ್ಚದಿಯಾಲೆ ಪೋಗವೇಣಂ
ನೇರಿಟ್ಟು ಚೆನ್ನಾಲ್ ಕಡನ್ನು ಕೂಡಾ
ಮುಂದುವರಿದು ಚಂದುನ ತಾಯಿ ಹೇಳುತ್ತಾಳೆ
ಪೆಣ್ಣೆನ್ನುಂ ಚೊಲ್ಲಿ ಮರಿಪ್ಪಾನ್ ಪೋಂಡಾ
ತುಳುನಾಡನ್ ಕೋಟ್ಟೋಡು ಜಯೀಚ್ಚೋರಾರುಂ
ಈ ಲೋಕತ್ತೆಂಙುಮೆಯಿಲ್ಲ ಪುತ್ರ..
ಹೀಗೆ ತಾಯಿಯ ಬುದ್ದಿವಾದ ಸಾಗುತ್ತದೆ. ಆದರೆ ಇದಾವುದನ್ನೂ ಕಿವಿಗೆ ಹಾಕಿಕೊಳ್ಳದೆ ತಚ್ಚೋಳಿ ಚಂದು ಸನ್ಯಾಸಿ ವೇಷ ಧರಿಸಿ ಕುಟಿಲೋಪಾಯದಿಂದ ತುಳುನಾಡಕೋಟೆಯನ್ನು ಪ್ರವೇಶಿಸಿ ಮಡದಿಯನ್ನು ಸುರಕ್ಷಿತವಾಗಿ ಬಿಡಿಸಿಕೊಂಡು ಬರುತ್ತಾನೆ. ದುರ್ಭೇಧ್ಯವಾದ ತುಳುನಾಡಕೋಟೆಯನ್ನು ಹೊಕ್ಕಿ ಜೀವಂತವಾಗಿ ಹೊರಬಂದ ಸಾಧನೆಗಾಗಿ ಮಳಯಾಳ ಜನಪದ ಸಾಹಿತ್ಯ ಇಂದಿಗೂ ತಚ್ಚೋಳಿ ಚಂದು ಎಂಬ ವೀರನನ್ನು ನೆನೆಯುತ್ತದೆ. ಆತನ ವೀರಕತೆಯನ್ನು ಸಾರುವ ಪಾಟ್ಟ್ ಗಳು ಇಂದಿಗೂ ಜನಜನಿತವಾಗಿದೆ. ಆದರೆ ಅಭೇಧ್ಯ ಕೋಟೆ ಕಟ್ಟಿ ಸುತ್ತಮುತ್ತಲಿನ ಹಲವುರಾಜ್ಯಗಳ ಶತ್ರುಗಳು ತನ್ನತ್ತ ಕಣ್ಣೆತ್ತಿ ನೋಡದಂತೆ ಪರಾಕ್ರಮ ಮೆರೆದ ತೌಳವ ವೀರಪರಂಪರೆಯ ಬಗ್ಗೆ ಮಾತ್ರ ಅದರ ವಾರಸುದಾರರಾದ ನಮಗೆ ಎಳ್ಳಷ್ಟೂ ಮಾಹಿತಿ ಇಲ್ಲ. ತಚ್ಚೋಳಿ ಚಂದು ಬಂದು ಹೋದ ಆ ತುಳುನಾಡ ಕೋಟೆ ಎಲ್ಲಿದೆ..? ಅದು ಯಾವ ರಾಜವಂಶಕ್ಕೆ ಸೇರಿತ್ತು..? ಅದು ಈಗ ಇದೆಯೋ ಇಲ್ಲವೋ ಈ ಮಾಹಿತಿಗಳು ಇಂದಿಗೂ ನಿಗೂಢವಾಗಿವೆ. ಇಂದಿರಾ ಹೆಗ್ಡೆ ಅವರ ಕೃತಿಗಳಲ್ಲಿ ಈ ಕೋಟೆಯ ಪ್ರಸಂಗ ಒಂದೆರಡು ಬಾರಿ ಪ್ರಸ್ತಾಪವಾಗಿದ್ದಿದೆ. ಆದರೆ ಸ್ಪಷ್ಟ ಮಾಹಿತಿ ಸಂಗ್ರಹದಲ್ಲಿ ನಿರೀಕ್ಷಿತ ಯಶ ದೊರಕಿಲ್ಲ. ಇಡೀ ವಿಶ್ವದಲ್ಲೇ ಮೊದಲಬಾರಿಗೆ ಯುದ್ಧಕಲೆಗಳನ್ನು ಕಲಿಸಿಬೆಳೆಸಿದ ಕೀರ್ತಿ ತುಳುನಾಡಿಗೆ ಸಲ್ಲುತ್ತದೆ. ಆ ಕಾಲದ ವ್ಯಾಯಾಮಶಾಲೆಗಳೆಲ್ಲಾ ಈಗ ಗರೋಡಿಗಳಾಗಿವೆ. ಇಂದಿಗೂ ತುಳುನಾಡಿನಲ್ಲಿ ೨೬೦ಕ್ಕೂ ಅಧಿಕ ಗರೋಡಿಗಳಿವೆ. ಜೀರ್ಣಾವಸ್ಥೆಗೆ ತಲುಪಿರುವ ಗರೋಡಿಗಳನ್ನು ಲೆಕ್ಕಹಾಕಿದರೆ ನಾಲ್ಕು ನೂರು ದಾಟಬಹುದೇನೋ.. ಈ ಗರೋಡಿಗಳಲ್ಲಿ ಈಗ ಕೇವಲ ತುಳುನಾಡ ವೀರರಾದ ಕೋಟಿ ಚೆನ್ನಯ್ಯರ ಆರಾಧನೆ ನಡೆಯುತ್ತಿದೆ. ಆದರೆ ಒಂದು ಕಾಲದಲ್ಲಿ ಈ ಗರೋಡಿಗಳು ಅಕ್ಷರಶಃ ಸಮರಕಲೆಗಳನ್ನು ಕಲಿಸಲಾಗುವ ತರಬೇತು ಕೇಂದ್ರಗಳಾಗಿದ್ದವು. ೧೬ನೇ ಶತಮಾನದಲ್ಲಿ ಈ ಗರೋಡಿಗಳಿಂದ ಹೊರಹೊಮ್ಮಿದ ಇಬ್ಬರು ಅವಳಿವೀರರು ತಮ್ಮ ಅದ್ಭುತ ಸಾಹಸಗಳಿಂದ ಸತ್ಯಸಂಧತೆಯಿಂದ, ವ್ಯವಸ್ಥೆಯ ವಿರುದ್ಧ ಸೆಟೆದುನಿಲ್ಲುವ ಪ್ರಚಂಡ ಪರಾಕ್ರಮದಿಂದ ತುಳುನಾಡಿನಾದ್ಯಂತ ಜನಜನಿತರಾದರು. ಅರಸೊತ್ತಿಗೆಯ ವಿರುದ್ಧ ಕ್ರಾಂತಿಯ ಕಿಡಿ ಹೊತ್ತಿಸಿದ ಈ ಅವಳಿ ವೀರರೇ ಕೋಟಿ ಚೆನ್ನಯ್ಯರು. ಈ ವೀರರಿಗೆ ತುಳುನಾಡಿನ ಉದ್ದಗಲದಲ್ಲೂ ಅಪಾರ ಜನಮಣ್ಣನೆ ದೊರೆಯಿತು. ಆಂದೋಲನದ ರೂಪದಲ್ಲಿ ಈ ವೀರರನ್ನು ಗರೋಡಿಗಳಲ್ಲಿ ಜನರು ಆರಾಧಿಸಲು ಆರಂಭಿಸಿದರು. ಈಗ ವ್ಯಾಯಾಮಶಾಲೆಯಲ್ಲಿ ಉತ್ತಮ ದೇಹದಾರ್ಡ್ಯ ಪಟುಗಳ ಚಿತ್ರ ಅಂಟಿಸುವಂತೆ ಆ ಕಾಲದಲ್ಲಿ ಈ ಅವಳಿ ವೀರರನ್ನು ಆದರ್ಶವಾಗಿ ಪರಿಗಣಿಸಿ ಆರಾಧಿಸಲು ಆರಂಭಿಸಿದರು. ಆದರೆ ಇವರು ಹುಟ್ಟವ ಪೂರ್ವದಲ್ಲೇ ತುಳುನಾಡಿನಲ್ಲಿ ಅದ್ಭುತವಾದ ಸಮರಕಲೆಗಳನ್ನು ಕಲಿಸಿಕೊಡುವ ಗರೋಡಿ ಕೇಂದ್ರಗಳಿದ್ದವು. ನಮ್ಮ ಗರಡಿ ಪದ ಮಳಯಾಳಿಗಳ ಬಾಯಲ್ಲಿ ಕಳರಿ ಎಂದು ಬದಲಾಯಿತು. ಸಾವಿರಾರು ಮಳಯಾಳಿ ವೀರರು ಶಸ್ತ್ರಾಭ್ಯಾಸಕ್ಕಾಗಿ ತುಳುನಾಡಿಗೆ ಬಂದು ಇಲ್ಲಿನ ಭೀಷ್ಮಪ್ರತಾಪಿ ಗುರುಗಳ ಮಾರ್ಗದರ್ಶನದಲ್ಲಿ ಅಸಮಾನ್ಯ ಯೋದರಾಗಿ ತಯಾರಾಗುತ್ತಿದ್ದರು. ಕಳರಿ ಪಯಟ್ಟು ಎಂಬ ಮಾರ್ಷಲ್ ಆರ್ಟ್ ಗಳ ತಾಯಿಯ ತವರು ಮನೆ ನಮ್ಮ ಈ ತುಳುನಾಡು.. ಇದನ್ನು ವಿದೇಶಿ ಸಂಶೋಧಕರೇ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಹಲವಾರು ಅಧ್ಯಯನಗಳೇ ನಡೆದಿದೆ. ಉತ್ತರ ಕೇರಳದಿಂದ ಈ ಸಮರ ಕಲೆ ೨೩೦೦ ವರ್ಷಗಳ ಹಿಂದೆ ದಕ್ಷಿಣ ತಮಿಳು ನಾಡಿಗೂ ವ್ಯಾಪಿಸಿತು. ಅಲ್ಲಿನ ಸಂಗಮ ಸಾಹಿತ್ಯಗಳಲ್ಲಿ ಕಳರಿ ವಿದ್ಯೆಗಳ ಉಲ್ಲೇಖವಿದೆ.ಸದ್ಯಕ್ಕೆ ನಿರ್ವೀರ್ಯವಾಗಿ ಮೂಲೆಗುಂಪಾಗಿರುವ ಈ ತುಳುಮಣ್ಣಿನ ಪೂರ್ವಜರ ಪರಾಕ್ರಮಗಳ ಗಾಥೆಯನ್ನು ತಿಳಿಯಬೇಕಿದ್ದರೆ ಮತ್ತೆ ಮಳಯಾಳಿ ಸಾಹಿತ್ಯಗಳನ್ನು ಗಮನಿಸಬೇಕು.
ಆರೊಮಲ್ ಚೇಗವರು ಎಂಬ ಜನಪದ ಹಾಡಿನಲ್ಲೂ ಮಲಯಾಳ ಚೇಗವ ವೀರರು ಸಮರ ಕಲೆ ಅಭ್ಯಸಿಸಲು ತುಳುನಾಡಿಗೆ ಬಂದರೆಂದು ವರ್ಣಿಸಲಾಗಿದೆ. ಚೆರಿಯ ಆರೊಮುಣ್ಣಿ ಎಂಬ ಸಾಹಿತ್ಯದಲ್ಲಿ ತನ್ನ ಮಗನಿಗೆ ಉಣ್ಣಿಯಾರ್ಚ ಎಂಬಾಕೆ ಮಲ್ಲವಿದ್ಯೆ ಕಲೆಸಲು ತುಳುನಾಡಿನಿಂದ ಗುರುಗಳನ್ನು ಕರೆಸುತ್ತಾಳೆ ಅದರ ವರ್ಣನೆ ಹೀಗಿದೆ
ತುಳುನಾಟ್ಟಿಲ್ ನಲ್ಲ ತುಳುಕ್ಕುರುಕ್ಕಳ್
ಕುರುಕ್ಕಳೇತ್ತನ್ನೆ ವರುತ್ತಿ ಞಜಾನು
ಮುವ್ವಾಂಡಿರುತ್ತಿ ಞಜಾನಭ್ಯಸಿಚ್ಚು
ತುಳುನಾಡನ್ ವಿದ್ಯ ಗ್ರಹಿಚ್ಚು ತಾನುಂ
ಮಲ್ಲವಿದ್ಯೆಯನ್ನು ಕಲಿಸುವ ಗರಡಿಗಳು ತುಳುನಾಡಿನಲ್ಲಿ ನೂರಾರಿದ್ದವು. ಇಲ್ಲಿ ಮೂರು ವರ್ಷದ ಮಲ್ಲ ವಿದ್ಯೆಯ ತರಬೇತು ನಡೆಯುತ್ತಿತ್ತಂತೆ. ಮಲ್ಲ ವಿದ್ಯೆಗೆ ಕೇರಳದಲ್ಲಿ ತುಳುನಾಡನ್ ವಿದ್ಯೆ ಎಂದೇ ಕರೆಯುತ್ತಿದ್ದರು. ಈ ಮಲ್ಲವಿದ್ಯೆಗಳಿಗಾಗಿ ಮಲ್ಲಕಂಭಗಳನ್ನು ಬಳಸಲಾಗುತ್ತಿತ್ತು. ಇಂದಿಗೂ ಹಲವಾರು ಗರೋಡಿಗಳಲ್ಲಿ ಗುರುಕಂಭ ಎಂಬ ಸುಂದರವಾದ ಕೆತ್ತನೆಗಳಿರುವ ಕಂಭಗಳಿವೆ. ಈಗ ಅದು ದೀಪ ಇಡಲು ಮಾತ್ರ ಸೀಮಿತಗೊಂಡಿದೆ. ಹಿಂದೆ ಈ ಕಂಭಗಳನ್ನು ಬಳಸಿ ಕಸರತ್ತು ನಡೆಸಲಾಗುತ್ತಿತ್ತು. ಎರಡನೇ ಬಾಜಿರಾಯನ ಕಾಲದಲ್ಲಿ ಈ ಮಲ್ಲಕಂಭದ ಕಸರತ್ತು ಮಹಾರಾಷ್ಟ್ರಕ್ಕೆ ಹೋಗಿ ಅಲ್ಲಿ ಅದು ಹುಲುಸಾಗಿ ಬೆಳೆಯಿತು ಎನ್ನುತ್ತಾರೆ ಹಿರಿಯ ಜನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರು. ಈ ಮಲ್ಲಕಂಭದ ಜೊತೆಗೆ ಶಸ್ತ್ರಧಾರಿ ಎದುರಾಳಿಯನ್ನು ಬರಿಗೈಯಲ್ಲೇ ಗೋಣು ಮುರಿದು ಕೊಲ್ಲಬಲ್ಲ ಹಲವಾರು ಪಟ್ಟುಗಳನ್ನು ತುಳುವರು ತಿಳಿದಿದ್ದರು. ಈ ಪಟ್ಟುಗಳನ್ನು ತುಳುವರ ಹೊರತಾಗಿ ಬೇರೆಯಾರೂ ಕಲಿಸುತ್ತಿರಲಿಲ್ಲ. ಇಲ್ಲಿನ ಗರೋಡಿಗಳೆಲ್ಲಾ ಧಾರ್ಮಿಕ ಕೇಂದ್ರಗಳಾಗಿ ಬದಲಾದ ಮೇಲೆ ಕೇರಳಿಗರು ಈ ಎಲ್ಲಾ ಸಮರಕಲೆಗಳು ತಮ್ಮದ್ದೇ ಎಂಬಂತೆ ಪೋಸು ಕೊಡತೊಡಗಿದರು. ಆದರೆ ಮಳಯಾಳಿ ಪ್ರಾಚೀನ ಸಾಹಿತ್ಯಗಳಲ್ಲಿ ಈ ಯುದ್ಧಕಲೆಗಳು ತುಳುನಾಡು ಮೂಲದವು ಎನ್ನುವುದು ಸ್ಪಷ್ಟವಾಗಿ ದಾಖಲಾಗಿದೆ. ತುಳುನಾಡಿನಿಂದ ಮಳಯಾಳ ದೇಶಕ್ಕೆ ವಲಸೆ ಹೋದ ಸುಮಾರು ಹದಿನೆಂಟು ಪಟ್ಟುಗಳನ್ನು ಇಂದಿಗೂ ಅಲ್ಲಿನ ಕಳರಿ ತರಬೇತಿನಲ್ಲಿ ಕಾಣಬಹುದು.ಇದರಲ್ಲಿ ಪೊಯಿಕಟಕಂ ಎನ್ನುವ ಅಡವನ್ನು ಕಲಿಯಲು ವರ್ಷಗಟ್ಟಲೆ ಕಾಲ ಯುದ್ಧಕಲಿಗಳು ತುಳುನಾಡಿಗೆ ಬಂದು ಬೆವರು ಸುರಿಸುತ್ತಿದ್ದರಂತೆ. ಈ ಪಟ್ಟನ್ನು ಅಭ್ಯಸಿಸಿದವನು ಹಸಿದ ಹೆಬ್ಬುಲಿಯನ್ನೂ ಸಣ್ಣ ಕಿರುವಾಲಿನಿಂದ(ಚೂರಿ) ಬಗೆದುಹಾಕಬಲ್ಲ ಎನ್ನುತ್ತವೆ ಮಳಯಾಳ ಸಾಹಿತ್ಯಗಳು.
ಪತ್ತೂರು ಕಣ್ಣಪ್ಪನ್ ಚೇಗವರ್ ಎಂಬ ಜನಪದ ಕಥನದ ಒಂದು ಸಾಲು ಹೀಗಿದೆ ತುಳುನಾಟ್ಟಲ್ ಞೂನಂಙಪೋಯಿವರೆಟ್ಟೆ ಮೂತ್ತ ಕುರುಕ್ಕಳೆ ವರುತ್ತ ವೇಣಂ...ಅಂದ್ರೆ ತುಳುನಾಡಿಗೆ ಹೋಗಿ ಸಮರಕಲೆಗಳಲ್ಲಿ ಪರಿಣಿತರಾದ ದೊಡ್ಡ ಗುರುಗಳನ್ನು ಕರೆತರುತ್ತೇನೆ ಎಂದಾಗಿದೆ
ಈ ಹಾಡಿನಲ್ಲಿ ಮುಂದೆ ಚೇಗವರ ಮಗ ತುಳುನಾಡಿನ ಗುರುಗಳ ಬಳಿ ಕಲಿತ ಅಸಾಮಾನ್ಯ ವಿದ್ಯೆಗಳ ಬಗ್ಗೆ ಮಾಹಿತಿ ಸಿಗುತ್ತದೆ. ನಾಳೆಗೆ ಮುಂದುವರೆಯುತ್ತದೆ... ಜೈ ಮಹಾಕಾಲ್

No comments:
Post a Comment