ಕರಾವಳಿ ಜಾನಪದೀಯ ಸಂಸ್ಕೃತಿಗೆ ಸೀಮಿತವಾಗಿ ಈ ಲೇಖನ ಬರೆಯುತ್ತಿದ್ದೇನೆ. ಕರಾವಳಿ ಅಂದ ತಕ್ಷಣ ಕೋಮು ಗಲಭೆಯ ಮೂಲ ಸ್ಥಾನ , ಜಾತೀಯ ವಾದಿಗಳ ಉಗಮ ಸ್ಥಾನ ಇದು, ಇತ್ಯಾದಿ ಅನೇಕ ತರಹದ ದ್ವಂದ್ವ ಹಲವರಲ್ಲಿದೆ. ಆ ತರಹ ನಿಮ್ಮ ಅಭಿಪ್ರಾಯ ಇದೆಯೆಂದಾದರೆ ದಯವಿಟ್ಟು ಬದಲಿಸಿಕೊಳ್ಳಿ. ವಾಸ್ತವತೆಗೂ ಅದಕ್ಕೂ ವ್ಯತ್ಯಾಸ ಇದೆ
ನಾನು ಮೊದಲೇ ಹೇಳಿದೆ, ಈ ಲೇಖನವನ್ನು ಮೌಡ್ಯ,ಮೂಢ ನಂಬಿಕೆ,ಇತ್ಯಾದಿಗಳನ್ನು ಬದಿಗಿಟ್ಟು ದಯವಿಟ್ಟು ನೋಡಿ. ಮೊನ್ನೆ ನಮ್ಮೂರಲ್ಲಿ ಒಂದು ಜಾತ್ರೆ, ಅಂದರೆ ಹನ್ನೆರಡು ವರ್ಷಗಳಿಗೊಮ್ಮೆ ನಡೆಯಬೇಕಾದ ಜಾತ್ರೆ ಕಾರಣಾಂತ ಗಳಿಂದ ಹದಿನೈದು ವರ್ಷಗಳ ಬಳಿಕ ಮೊನ್ನೆ ನಡೆಯಿತು .ಪೈಚಿಲ್ ಧರ್ಮ ನೇಮ ಇದರ ಹೆಸರು. ಇಲ್ಲಿ ಹಿಂದೂಗಳ ಜಾತ್ರೆ, ಮುಸ್ಲೀಮರ ಉರೂಸ್, ಕ್ರೈಸ್ತರ ಸಾಂತ್ ಮಾರಿಯೋ ಜಾತ್ರೆಗಳು ನಡೆಯೋದು ವಾಡಿಕೆ. ಎಲ್ಲರೂ ತಿಳಿದುಕೊಂಡ ಹಾಗೇ ಇಲ್ಲಿ ಧರ್ಮಾಂಧತೆಯೇ ಪ್ರದಾನವಾಗಿದ್ದಾರೆ ಈ ಜಾತ್ರಾ ಸಮಯದಲ್ಲಿ ಕೊಲೆಗಳಾಗಬೇಕಿತ್ತು ರಕ್ತದ ಕೊಡಿ ಹರಿಯಬೇಕಿತ್ತು. ಇಲ್ಲ ಹಾಗಾಗುತ್ತಿಲ್ಲ ಯಾಕೆ?ಯಾಕೆಂದರೆ ಧರ್ಮ ಜಾತಿ ಗಳಿಗಿಂತ ಮೊದಲು ಮಾನವೀಯತೆಯ ಸೆಲೆ ಇಲ್ಲಿದೆ. ಹಾಗೆಂದಾಕ್ಷಣ ಇಲ್ಲಿ ನಡೆದ ಗಲಬೆಗಳು, ಕೊಲೆಗಳು ಪಬ್ಬೋ ಮಣ್ಣು ಮಸೀನೊ ಸುಳ್ಳಾ? ಕೇಳಬಹುದು. ಹೌದು, ಈ ಇಂಡಿಯಾದ ಬೇರಾವುದೇ ಪ್ರದೇಶದಲ್ಲಿ ನಡೆಯುವ ಘಟನೆನೇ ಇಲ್ಲಿನಡೆಯೋದು. ಕರ್ನಾಟಕದ ಯಾವ ಪ್ರದೇಶದಲ್ಲಿ ಗಲಭೆಗಳು ಅಹಿತಕಾರೀ ಘಟನೆ ನಡೆಯುವುದಿಲ್ಲ ಹೇಳಿ?. ಹಾಗೆ ಇಲ್ಲೂ. ಕಾರಾವಳಿ ಅಂದ ತಕ್ಷಣ ದೇವಲೋಕದಿಂದ ಇಳಿದು ಬಂದದ್ದೂ ಅಲ್ಲ , ಪಾತಾಳಕ್ಕೆ ಕುಸಿದದ್ದೂ ಅಲ್ಲ .ಎಲ್ಲಾಕಡೆ ಇರೋ ಹಾಗೇ ಇಲ್ಲಿ ,ಕೆಲಸ ಕಾರ್ಯಗಲಿಲ್ಲದ ಉಂಡಾಡಿಗಳು ,ಹಿಂದೂಗಳಾಗಿರಬಹುದು ಮುಸ್ಲೀಮರಾಗಿರಬಹುದು, ಕ್ರೈಸ್ತರಾಗಿರಬಹುದು , ಕಾಂಗ್ರೆಸ್ಸ್ ,ಬೀ ಜೆ ಪಿ, ಕಮ್ಮುನಿಸ್ಟ್ ಅಥವಾ ಕೆಲವು ತಿರುಪೋಕಿ ಸಂಘಟನೆಗಳಾಗಿರಬಹುದು, ಹೀಗೆ ಎಲ್ಲೋಗುರುತಿಸಿ ಕೊಂಡವರು, ಬೆಳಿಗ್ಗೆ ಎದ್ದ ತಕ್ಷಣ ಬಾಟ್ಲಿ ಪುಡಿಮಾಡಿ ಅದರ ಮೇಲೆ ಅಮಲು ಗಳ ದಮ್ಮ್ ಸೇವಿಸುತ್ತಾ, ಏನಾದರೊಂದು ಕಿತಾಪತಿ ಮಾಡಿ,ಇಲ್ಲಿನ ಹೆಸರಿಗೆ ಕಳಂಕ ತರುತ್ತಾರೆಯೇ ಹೊರತು ಬೇರೇನಲ್ಲ. ಇದು ಎಲ್ಲ ಕಡೆ ನಡೆಯೋ ಹಡೆಬೆ ವಿದ್ಯಮಾನಗಳು..ನಂತರ ಇದಕ್ಕೆ ಬಾಲಗಳು , ಮುಖವಾಡಗಳು ಹಾಕಲ್ಪಡುತ್ತವೆ, ಒಂದು ಕಡೆ ಕಾಂಗ್ರೆಸ್ ನಿಂತರೆ ಇನ್ನೊಂದು ಕಡೆ ಕೇಸರಿ ಪಡೆ ಮಧ್ಯೆ ಕಮುನಿಸ್ಟರು, ಇವರೆಲ್ಲ ಸಾಕಾಗೊಲ್ಲ ಅಂತ, ಕೋಮೂ ಸೌಹಾರ್ದ ವೇದಿಕೆಯೆಂಬ ತುತ್ತೂರಿ, ಬುದ್ಧಿಜೀವಿಗಳೆಂದು ತಮ್ಮನ್ನು ತಾವೇ ಕರೆದುಕೊಳ್ಳೋ ಕುಬುಬುದ್ಧಿಜೀವಿಗಳು. ಇಲ್ಲೇ ಊರೊಳಗೆ ಪರಿಹರಿಸಿಕೊಳ್ಳ ಬಹುದಾದ ಸಮಸ್ಯೆಯನ್ನ ಗುಡ್ಡ ಮಾಡೋದು. ರಾಜ್ಯವ್ಯಾಪಿ ರಾಷ್ಟ್ರೀಯ ಸುದ್ದಿ ಮಾಡೋದು ಇವರ ಹವ್ಯಾಸ. ಈ ಕೊ ಸ ವೇ. ಯಾವುದಾದರೂ ಸಮಸ್ಯೆಯನ್ನ ಪರಿಹರಿಸಿದ್ದು ನೋಡಿದೀರಾ? ಕೇಳಿದ್ದೀರಾ?. ಪರಿಹಾರ ಅಥವಾ ಸತ್ಯ ಇವರಿಗೆಬೇಕಾಗಿಲ್ಲ . ಘಟನೆಯನ್ನ ದೊಡ್ಡದುಮಾಡಿ ಪ್ರಚಾರ ಗಿಟ್ಟಿಸಿಕೊಳ್ಳಬಹುದು, ಬುದ್ಧಿಜೀವಿ ಪಟ್ಟ ತಲೆಗೇರಿಸಿಕೊಳ್ಳಬಹುದು. ಅಲ್ಲ ಕನ್ನಡ ಬರೆಯಲು ಬಾರದ ಕನ್ನಡ ಪತ್ರಿಕಾ ಸಂಪಾದಕರು ಮತ್ತೇನು ಮಾಡಿಯಾರು? ಇನ್ನೂ ಕನ್ನಡ ವಾಹಿನಿಗಳಿಗೆ ಪತ್ರಿಕೆ ಗಳಿಗೆ ಸುಗ್ಗಿ ಕಾಲ ಇದು. ಏನಿಲ್ಲ ಅಂದ್ರು ತಿಂಗಳಿಗಾಗುವಷ್ಟು ಕೂಳು ಸಿಗುತ್ತಲ್ಲಾ. ಹೋಗಲಿ ಬಿಡಿ,
ನಮ್ಮೂರ ಜಾತ್ರೆ ನೋಡೋಣ
ನಮ್ಮೂರಲ್ಲಿ ನಡೆದದ್ದು, ದೇವರ ಉತ್ಸವ ಅಲ್ಲ. ಭೂತಾರಾಧನೆಯ ಒಂದು ವಿಧ. ಭೂತಾರದನೆಯನ್ನ,divine spirit or spiritual worship ಅಂತ ಕರೆಯಬಹುದು, ಇದು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ,ಆ ಸ್ಥಳದ ಪರಿಸರದ ನಂಬಿಕೆ ಮತ್ತು ಆಚರಣೆ ಇವುಗಳನ್ನು ಹೊಂದಿ ಕೊಂಡಿರುತ್ತೆ. ಇಲ್ಲಿ ನಾನು ಹೇಳಿದ ಮಾತನ್ನು ಮತ್ತೊಮ್ಮೆ ನೆನಪಿಸಿ ಮುಂದೆ ಹೋಗುತ್ತೇನೆ, ನಿಮ್ಮ ಪ್ರಶ್ತ್ನೆ, ಇದು ಮೌಡ್ಯಾಚರಣೆ ಅಲ್ಲವಾ ಅಂದರೆ ಉತ್ತರ, ನನ್ನ ದೃಷ್ಟಿಯಲ್ಲಿ ನೋಡೋದಕ್ಕಿಂತಲೂ, ಎಲ್ಲ ಆಚರಣೆಗಳ ಹಿಂದೆ, ಇರುವಂತೆ ಇಲ್ಲೂ ಬೌಗೋಳಿಕ ಮತ್ತು ಸಾಂಸ್ಕೃತಿಕ ಹಿನ್ನಲೆಯನ್ನು ನೋಡಿ ಈ ಲೇಖನ ಬರೆಯಲಾಗಿದೆ, ಮತ್ತು ಹಿಂದೂ ಮುಸ್ಲಿಂ ಸಾಮರಸ್ಯದ ಒಂದು ಎಳೆ ಬಿಚ್ಚಿಡುವುದಷ್ಟೇ ನನ್ನ ಉದ್ದೇಶ.( ಕ್ರಿಸ್ತ ಶಕ ೧೮೭೫ ರಷ್ಟು ಹಿಂದೆಯೇ ಯಮ್. ಜೆ. ವಾಲ್ಹೌಸ್ ಎಂಬವರು ಭೂತಾರಾಧನೆ ಬಗ್ಗೆ ಒಂದು ಲೇಖನ ಬರೆದಿದ್ದಾರೆ. journal of the Anthropological Institute of Great Britana and Ireland -vol. V. December 14 1875 London ಎಂಬ ಸಂಚಿಕೆಯಲ್ಲಿ ಪ್ರಕಟವಾಗಿದೆ. ಭೂತಾರಾಧನೆಯ ಎಲ್ಲ ವಿವರಗಳನ್ನ ನನ್ನ Facebook page ನಲ್ಲಿ ಪ್ರಕಟಿಸಲಿದ್ದೇನೆ. ನನ್ನ ಲಿಂಕ್‌ಗೆ ಭೇಟಿ ಕೊಟ್ಟು ಆಸಕ್ತರು ನೋಡ ಬಹುದು)
ಕೆಳಗೆ ಕೆಲವು ಫೋಟೋಗಳನ್ನು ನೀಡಿದ್ದೇನೆ, ಮುಸ್ಲಿಂ ಸಮುದಾಯದ ನನ್ನ ಸಹೋದರರು, ಯಾವ ರೀತಿ ಊರ ಹಬ್ಬದಲ್ಲಿ ಭಾಗಿಗಳಾಗಿದ್ದರು ಎಂಬುದನ್ನು ಕೆಲವು ಪೋಸ್ಟರ್‌ಗಳೇ ಹೇಳುತ್ತವೆ. ಇಲ್ಲಿನ ಪರಿಸರದ ಎಲ್ಲ ಜಾತಿ ಬಂಧುಗಳೂ ಎರಡು ದಿನದ ಜಾತ್ರೆಯಲ್ಲಿ ಕಸ ಗುಡಿಸುವುದರಿಂದ ಹಿಡಿದು, ಊಟೋಪಚಾರ, ನೈರ್ಮಲ್ಯ, ವಾಹನ ನಿಲುಗಡೆ,(ಧನ ಸಹಾಯ, ಒಳ್ಳೆಯ ಬಾಂಧವ್ಯದ ಮುಂದೆ ಇದು ಲೆಕ್ಖಕ್ಕೆ ಬರೋದಿಲ್ಲ) ಎಲ್ಲವನ್ನೂ ನಮ್ಮದು ಎಂಬ ಭಾವದಿಂದ ನಿರ್ವಹಿಸಿದ ಮುಸ್ಲಿಂ ಕ್ರೈಸ್ತ ಸಹೋದರರಿಗೆ ನನ್ನದೊಂದು ಮನಃಪೂರ್ವಕ ಸಲಾಮ್. 10 ಸಾವಿರದಿಂದ 15 ಸಾವಿರ ಜನ ಸೇರಿದ ಕಡೆ ಕೆಲವು ಸಾವಿರ ಜನ ಇತರ ಧರ್ಮೀಯರು ಅಂದರೆ ನಿಮಗೆ ನಂಬೋದು ಕಷ್ಟವಾಗಬಹುದು. ಒಂದೇ ಒಂದು ಸಣ್ಣ ಕಿರಿ ಕಿರಿ , ಅಥವಾ ಊಟ ಉಪಚಾರ , ಅತಿಥಿಗಳಿಗೆ ನೀಡೋ ಆತಿಥ್ಯ ಯಾವುದರಲ್ಲೂ ಕುಂದು ಬಾರದಂತೆ ನೋಡಿಕೊಂಡ ಸ್ವಯಂಸೇವಕರು ತಿಂಗಳು ಗಟ್ಟಲೆ ದುಡಿದ ನಿಮ್ಮ ದುಡಿಮೆ ನಿಜಕ್ಕೂ ಮೆಚ್ಚುವಂತಹದ್ದೇ .ಮುಂದೆ ನಮ್ಮ ಸಹೋದರರ ಉರುಸ್ ಅಥವಾ ಕ್ರೈಸ್ತ ಹಬ್ಬ ಜಾತ್ರೆಗಳಲ್ಲಿ. ಹಿಂದಿಗಿಂತಲೂ ಹೆಚ್ಚು ಹಿಂದೂ ಧರ್ಮೀಯರು ಪಾಲ್ಗೊಳ್ಳುತ್ತಾರೆ ನಿಮ್ಮವರಾಗುತ್ತಾರೆ ಅನ್ನುವ ಭರವಸೆ ಮತ್ತು ಆಶಾವಾದ ನನ್ನದಾಗಿರುತ್ತೆ.
via #whatsapp

No comments:
Post a Comment