Friday, 7 April 2017

ಪ್ರಾಕೃತಿಕ ವಿಸ್ಮಯದ ಪ್ರಕೃತಿ-ಪುರುಷರ ಸಮಾಗಮನದಂತಿರುವ ಅಪರೂಪದ #ಶ್ರೀ_ತುಳುವೇಶ್ವರ" ಸಾನಿಧ್ಯ- #ಬಸ್ರೂರು

ಪ್ರಾಕೃತಿಕ ವಿಸ್ಮಯದ ಪ್ರಕೃತಿ-ಪುರುಷರ ಸಮಾಗಮನದಂತಿರುವ ಅಪರೂಪದ #ಶ್ರೀ_ತುಳುವೇಶ್ವರ" ಸಾನಿಧ್ಯ- #ಬಸ್ರೂರು
 

ಇಡೀ ತುಳುನಾಡಿನಾದ್ಯಾಂತ ಎಲ್ಲಿಯೂ ಇಲ್ಲದ " #ಶ್ರೀ_ತುಳುವೇಶ್ವರ"# ಏಕೈಕ_ಸನ್ನಿಧಿ_ಬಸ್ರೂರಿನ_ರಾವುತಕೇರಿ _ರಸ್ತೆಯಲ್ಲಿದೆ. ಸುಮಾರು 1500 ವರ್ಷಕ್ಕೂ ಹಿಂದಿನ ಪ್ರಾಚೀನ ದೇವಾಲಯ ಇದಾಗಿರಬಹುದೆಂದು ಊಹಿಸಬಹುದು. ಅಚ್ಚರಿಯ ವಿಷಯವೆಂದರೆ ಹಿಂದೆ ಕಾರಣಾಂತರದಿಂದ ದೇವಾಲಯವೆಲ್ಲಾ ಬಿದ್ದು ಹೋಗಿ ಕೇವಲ ಗರ್ಭಗುಡಿಯ ಭಾಗ , ಗರ್ಭಗುಡಿಯ ದ್ವಾರದ ಅವಶೇಶಗಳ ನಡುವೆ ಇರುವ ಈ  ಪಾಣೀಪೀಠದ ಸುತ್ತಲೂ ಅರ್ಧಉಳಿದ ಕೆಂಪು ಮುರಕಲ್ಲಿನ ಗೋಡೆಯ ಮೇಲೇಯೇ ಬೃಹತ್ ಆಲದ ಮರವು ಬೆಳೆದು ನಾಲ್ಕೂ ಸುತ್ತಲೂ ಅಗಾಧವಾಗಿ ಪ್ರಕೃತಿಯೇ ಪರಮೇಶ್ವರನಿಗೆ ಆಲಯವಾಗಿ ರಕ್ಷಣೆಮಾಡಿರುವುದು ಪ್ರಕೃತಿ-ಪುರುಷ ರ ಸಮಾಗಮನದಂತಿರುವ ಈ  ಶ್ರೀತುಳುವೇಶ್ವರ ನ ಅವರ್ಣನೀಯ, ಅನಿರ್ವಚನೀಯ ಸಾನಿಧ್ಯವು ಮೊಗೆದಷ್ಟೂ ಕುತೂಹಲ, ವಿಸ್ಮಯವನ್ನು ತನ್ನೊಡಲೊಳಗೆ ಹುದುಗಿಸಿಟ್ಟಿರುವಂತ ಈ ಪ್ರಾಕೃತಿಕ ದೇವಾಲಯವು  ಆಶ್ಚರ್ಯಗಳ ಆಗರವಾಗಿದೆ.
ಮಾಹಿತಿ Mahesh Kini  : 7760007747

No comments:

Post a Comment