Monday, 17 July 2017

ತುಳು ಭಾಷೆಯನ್ನು ಭಾರತ ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸುವ ಕುರಿತು

ತುಳು ಭಾಷೆಯನ್ನು ಭಾರತ ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸುವ ಕುರಿತು

( ಹಿರಿಯ ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮತ್ತು  ಕಳಿಯೂರು ರಾಜೀವಿ ಯವರು ಕೂಡ ತುಳು ಭಾಷೆಯನ್ನು ಭಾರತ ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸುವ ವಿಚಾರವಾಗಿ ಧ್ವನಿ ಗುಡಿಸಬೆಕಾಗಿ ಮೊಗೇರ ಸಮಾಜ ತುಳುನಾಡ್ ಪರವಾಗಿ ಕೇಳಿಕೊಳ್ಳುತಿದ್ದೇವೆ)

ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು ಭಾರತ ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸುವ ಕುರಿತಾಗಿ ದಿ| ಅ. ಬಾಲಕೃಷ್ಣ ಶೆಟ್ಟಿಯವವರ ನೇತೃತ್ವದಲ್ಲಿ ನಿಯೋಗವೊಂದು 2001ರಲ್ಲಿ ಬೆಂಗಳೂರಿಗೆ ತೆರಳಿ ಆಗಿನ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಶ್ರೀ ಎಸ್.ಎಂ.ಕೃಷ್ಣ ಅವರಿಗೆ ದಿನಾಂಕ 25-6-2001ರಂದು ಬೆಂಗಳೂರಿನಲ್ಲಿ ಮನವಿ ಸಲ್ಲಿಸಿ, ತುಳು ಭಾಷೆಯನ್ನು ಭಾರತ ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸುವ ಕುರಿತು ಕೇಂದ್ರ ಸರಕಾರಕ್ಕೆ ಒತ್ತಡ ತರಲು ವಿನಂತಿಸಲಾಯಿತು. ತದನಂತರ ರಾಜ್ಯ ಸರ್ಕಾರ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ, ಕೇಂದ್ರ ಸರಕಾರಕ್ಕೆ  ಶಿಫಾರಸು ಮಾಡಿದೆ. 2003ರಲ್ಲಿ ಸಮಸ್ತ ತುಳುವರ ಸಹಕಾರದೊಂದಿಗೆ, ಕರ್ನಾಟಕತುಳು ಸಾಹಿತ್ಯ ಅಕಾಡೆಮಿ, ಅಖಿಲಭಾರತ ತುಳು ಒಕ್ಕೂಟ ಮಂಗಳೂರು ಹಾಗೂ ತುಳು ಡೆವಲಪ್ಮೆಂಟ್ ಫಾರಂನ ನೇತೃತ್ವದಲ್ಲಿ ದೆಹಲಿಯಲ್ಲಿ ತುಳು ಸಮಾವೇಶ ನಡೆಸಿ, ಕೇಂದ್ರ ಸರ್ಕಾರಕ್ಕೆ ಆಗಿನ ಪ್ರಧಾನ ಮಂತ್ರಿಗಳಾಗಿದ್ದ, ಮಾನ್ಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಆಗಿನ ಸಚಿವರಾದ ಮಾನ್ಯ ಶ್ರೀ ಜಾರ್ಜ್ ಫೆರ್ನಾಂಡಿಸ್  ಮತ್ತು ಶ್ರೀ ಫೆರ್ನಾಂಡಿಸ್ ಹಾಗೂ ಮಾನ್ಯ ಶ್ರೀ ವೀರಪ್ಪ ಮೊಯಿಲಿಯವರ ಸಮ್ಮುಖದಲ್ಲಿ ಮತ್ತೊಂದು ಮನವಿಯನ್ನು ದಿನಾಂಕ 16-2-2003ರಂದು ದೆಹಲಿಯಲ್ಲಿ ಅಕಾಡೆಮಿಯ ಅಧ್ಯಕ್ಷರಾಗಿದ್ದ್ದ ಡಾ. ವಾಮನ ನಂದಾವರ ಹಾಗೂ ತುಳು ವಿದ್ವಾಂಸರು ಸೇರಿ ಸಲ್ಲಿಸಿ, ತುಳು ಭಾಷೆಯನ್ನು ಭಾರತ ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸುವಂತೆ ವಿನಂತಿಸಲಾಯಿತು.  ಈ ನಡುವೆ ಸೀತಾಕಾಂತ ಮಹಾಜನ ವರದಿ ಸಮಿತಿಯು ತುಳು ಭಾಷೆಗೆ ಯಾವ ರೀತಿಯ ಅರ್ಹತೆ ಎಂಬುದರ ಬಗ್ಗೆ ಪ್ರಶ್ನೆ ಎತ್ತಿ ವರದಿಯನ್ನು ಕೋರಿತು. ಈ ಸಂಬಂಧವಾಗಿ ಅಕಾಡೆಮಿಯ ಅಧ್ಯಕ್ಷರಾಗಿದ್ದ, ಶ್ರೀ ಯಮ್.ಕೆ.ಸೀತಾರಾಮ್ ಕುಲಾಲ್ ಅವರು ತುಳು ಭಾಷೆಯ ಕುರಿತಾದ ಒಂದು ವಿವರವನ್ನು ಈ ಸಮಿತಿಯವರಿಗೆ, ಪ್ರಧಾನ ಮಂತ್ರಿಯವರಿಗೆ,  ಕೇಂದ್ರ ಸಚಿವರಿಗೆ, ರಾಜ್ಯಸಭಾ ಸದಸ್ಯರು, ವಿಧಾನ ಸಭಾ ಸದಸ್ಯರು ಹಾಗೂ ಶಾಸಕರುಗಳಿಗೆ ಸಲ್ಲಿಸಿದರು. ಬಳಿಕ 2007ರಲ್ಲಿ ಮತ್ತೊಂದು ಸಮಾವೇಶವನ್ನು ದೆಹಲಿಯಲ್ಲಿ ನಡೆಸಿ, ತುಳು ಭಾಷೆಯನ್ನು ಭಾರತ ಸಂವಿಧಾನದ 8ನೇ ಪರಿಚ್ಚೇದದಲ್ಲಿ ಸೇರಿಸುವ ಕುರಿತಾಗಿ, ಪ್ರಧಾನ ಮಂತ್ರಿಯವರಾದ ಮಾನ್ಯ ಶ್ರೀ ಮನಮೋಹನ ಸಿಂಗ್ ಅವರಿಗೆ ದಿನಾಂಕ 17-11-2007ರಂದು ದೆಹಲಿಯಲ್ಲಿ ಅಕಾಡೆಮಿಯ ಅಧ್ಯಕ್ಷರಾಗಿದ್ದ ಶ್ರೀ ಯಮ್.ಕೆ. ಸೀತಾರಾಮ್ ಕುಲಾಲ್ ಅವರ ನೇತೃತ್ವದಲ್ಲಿ ವಿದ್ವಾಂಸ ಗಣ್ಯರೊಂದಿಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಯಿತು. ಅಲ್ಲದೆ ಪ್ರಸ್ತುತ ಅಕಾಡೆಮಿ ಅಧ್ಯಕ್ಷರಾಗಿರುವ ಡಾ.ಪಾಲ್ತಾಡಿ ರಾಮಕೃಷ್ಙ ಆಚಾರ್ ಅವರು ಕೂಡ ಈ ನಿಟ್ಟಿನಲ್ಲಿ ನಮ್ಮ ನಾಡಿನ ಗಣ್ಯ ವ್ಯಕ್ತಿಗಳನ್ನು ಸಂಪರ್ಕಿಸಿ  ಅನೇಕ ಕೆಲಸ ಕಾರ್ಯಗಳನ್ನು ನಡೆಸಿ ಇದಕ್ಕೆ ಪೂರಕ ಮಾಹಿತಿಗಳನ್ನು ರಾಜಕೀಯ ನಾಯಕರುಗಳಿಗೆ ಒದಿಗಿಸಿ, ಮತ್ತೆ ಮನವಿ ಮಾಡಿಕೊಂಡಿದ್ದರು,ಈ ಬರಿ ಕೇರಳ ರಾಜ್ಯ ತುಳು ಅಕಾಡಮಿಯ ಸದಸ್ಯರಾಗಿ ಆಯ್ಕೆಯಾದ "ಹಿರಿಯ ಕವಿ" ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮತ್ತು  ಕಳಿಯೂರು ರಾಜೀವಿ ಯವರು ಕೂಡ ತುಳು ಭಾಷೆಯನ್ನು ಭಾರತ ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸುವ ವಿಚಾರವಾಗಿ ಧ್ವನಿ ಗುಡಿಸಬೆಕಾಗಿ ಮೊಗೇರ ಸಮಾಜ ತುಳುನಾಡ್ ಪರವಾಗಿ ಕೇಳಿಕೊಳ್ಳುತಿದ್ದೇವೆ.

ಮೊಗೇರ ಸಮಾಜ ತುಳುನಾಡ್

ಜೈ ತುಳುನಾಡ್

No comments:

Post a Comment