Tuesday, 18 July 2017

ಸ್ವಾಭಿಮಾನಿ ಕನ್ನಡಿಗರು

ಕಾಲ್ಪನಿಕ ಸತ್ಯ 😄

ವರ್ಷ 21/04/2060

ಚಾನೆಲ್ - ಸ್ವಾಭಿಮಾನಿ ಕನ್ನಡಿಗರು

ಕನ್ನಡ ರಾಜ್ಯದ ಪ್ರಸಿದ್ಧ ಟಿವಿ ಚಾನೆಲ್ ಲಾದ "ಸ್ವಾಭಿಮಾನಿ ಕನ್ನಡಿಗರು" ದಲ್ಲಿ ವಿಶೇಷವಾಗಿ ಬಿತ್ತರವಾದ "ಕಟ್ಟ ಕಡೆಯ ತುಳುವ" ಕಾರ್ಯಕ್ರಮದ ಎಂಬುದರ ಒಂದು ಭಾಗ - 1

ಸಂದರ್ಶಕ - ಸರ್, ನಿಮ್ಮನ್ನು ಸಂದರ್ಶನ ಮಾಡುವುದು ನಮಗೆ ಗೌರವ ಹಾಗು ಅಷ್ಟೇ ಸಂತೋಷದ ವಿಷಯ ವಿಷಯ, ಈ ಅಖಂಡ ಕರ್ನಾಟಕದಲ್ಲಿ ಸ್ಪಷ್ಟವಾಗಿ ತುಳು ಮಾತಾಡುವ ಒಬ್ಬ ಇನ್ನೂ ಉಳಿದಿದ್ದಾರೆ ಎಂದರೆ ನಿಮ್ಮ ಬಗೆ ಹಾಗು ಈ ರಾಜ್ಯದ ಬಗೆ ಹೆಮ್ಮೆಯಾಗುತ್ತಿದೆ ಹಾಗು ಅಷ್ಟೇ ಆಶ್ಚರ್ಯವಾಗುತ್ತಿದೆ! ನಮ್ಮದು ಕನ್ನಡ ರಾಜ್ಯವಾದರೂ ಇಲ್ಲಿನ ಇರುವ ಎಲ್ಲಾ ಚಿಕ್ಕ ಚಿಕ್ಕ ಭಾಷೆಗಳಿಗೂ ನಾವು ಬೆಲೆ ಕೊಡುತ್ತವೆ, ಗೌರವಿಸುತ್ತೇವೆ, ಅದರ ಉದ್ಧಾರಕ್ಕಾಗಿ ಶ್ರಮ ಕೊಡುತ್ತವೆ, ಅದರ ಬಗೆ ಕಾಳಜಿ ಇದ್ದೇ ಇದೆ. ಆದರೆ ಸರಕಾರ ಹಾಗು ಕನ್ನಡಿಗರು ತುಳು ಬಾಷೆಯ ಉಳಿವಿಗಾಗಿ ಎಷ್ಟೇ ಪ್ರೋತ್ಸಾಹ ಕೊಟ್ಟರೂ ಈ ರಾಜ್ಯದ ಬಾಷೆ ನಾಶವಾಗಲು ಕಾರಣ ನೀವೇ ಹೊರತು ಕನ್ನಡವಲ್ಲ, ಇದು ಈಗ ಇತಿಹಾಸ,

ಮೊದಲನೆಯ ಪ್ರಶ್ನೆ - ಈ ರಾಜ್ಯದಲ್ಲಿ ಆಡಳಿತ ಬಾಷೆ ಹಾಗು ಎಲ್ಲಾ ವ್ಯವಹಾರಗಳು ಕನ್ನಡದಲ್ಲಿ ಇರುವಾಗ ನೀವು ನಿಮ್ಮ ಮನೆಯಲ್ಲಿ  ಮನೆಯವರ ಜೊತೆಗೆ ತುಳುವಿನಲ್ಲಿ ವ್ಯವಹಾರ ಮಾಡುತ್ತೀರಿ ಎಂದು ಕೇಳಿದ್ದೆ! ಇದು ಸತ್ಯನಾ ಸರ್.. ಮಾತಾಡಿ ಆದರೆ ಇದು ಸವಿಂಧಾನದ 645 ಕಾಲಂನ ಪ್ರಕಾರ ಇದು ರಾಜ್ಯ ದ್ರೋಹ ಅನಿಸುವುದಿಲ್ವಾ? ನಿಮ್ಮನು ರಾಜ್ಯ ದ್ರೋಹದ ಬಗೆ ಜೈಲಿಗೆ ಹಾಕಬಾರದು? ಅಲ್ಲದೆ ನಾನು ಕನ್ನಡಿಗ ಅಲ್ಲ ತುಳುವ ಎಂದು ಹೇಳಿಕೆ ಕೊಟ್ಟ ವಿಷಯ ಬಹಿರಂಗವಾಗಿದೆ.

ಅಷ್ಟೊತ್ತು ನಾನು ಈ ಪ್ರಪಂಚದಲ್ಲಿ ಇರುವ ಒಬ್ಬನೇ ಒಬ್ಬ ತುಳುವ ಎಂದು ಜಂಭ ಕೊಚ್ಚುತ್ತಿದ್ದ ಆ ಕಟ್ಟ ಕಡೆಯ ತುಳುವ ಭಯದಿಂದ ಕರ್ಚೀಫಿನಿಂದ ಬೆವರು ಒರಸಿ..

"ಸಾರ್.. ಸಾರ್.. ನಾನು ತುಳುವನಾದರೂ ನಾನೀಗ ಹೆಮ್ಮೆಯ ಕನ್ನಡಿಗನೇ.. ಈ ಕರ್ನಾಟಕ ದೇಶದಲ್ಲಿ ಕನ್ನಡಿಗನೇ ಸರ್ವಾಧಿಕಾರಿ, ಇದರಲ್ಲಿ ಎರಡು ಮಾತಿಲ್ಲ. ದಯವಿಟ್ಟು ಯಾರಿಗೂ ಬೇಡದ ಬಾಷೆಯಾದ ತುಳುವನೆಂದು ಕರೆದು ನಿಮ್ಮಿಂದ ದೂರ ಮಾಡಬೇಡಿ.. ಹಾಗೆ ಕರೆದು ಅವಮಾನ ಮಾಡಬೇಡಿ ಹಾಗು ಇದರಿಂದ ಸರಕಾರದ ಯಾವುದೇ ಸೌಲಭ್ಯಗಳು ಸಿಗದು.. ಪ್ಲೀಸ್.. ಸರ್..

ಸಂದರ್ಶಕ - ಚೆ, ಚೇ.. ನೀವು ಏನು ಭಯ ಪಡಬೇಡಿ, ನಿಮ್ಮ ಹೆಸರು ಹಾಗು ವಿಳಾಸವನ್ನು ನಾವು ಬಹಿರಂಗ ಪಡಿಸುವುದಿಲ್ಲ.. ನೀವು ತುಳುವನಾದರೂ ಕನ್ನಡಿಗನೇ.. ಅದರಲ್ಲಿ ಎರಡು ಮಾತಿಲ್ಲ! ರಾಜ್ಯಾವಾರು ರಚನೆಯಾದ ಮರು ದಿನವೇ ನಿಮ್ಮ ಭಾಷೆ ನಾಶ ಎನ್ನುವ ಕಲ್ಪನೆ ಇಲ್ಲದ ನೀವು ಹೇಗೆ ಬುದ್ಧಿವಂತರ ಜಿಲ್ಲೆಯರು ಸ್ವಾಮಿ.. 😄 😄 😄  ಸುಮಾರು 40 ವರ್ಷದ ಹಿಂದೆ ತುಳುನಾಡಿನಲ್ಲಿ ಸುಮಾರು 80% ಜನರಿಗೆ ತುಳು ಬರುತ್ತಿತ್ತು ಅಂತೆ.. ಅದು ನಾಶವಾಗಿ ನಿಮ್ಮ ಒಂದೇ ಕುಟುಂಬ ಉಳಿದಿದೆ ಎಂದು ಸರಕಾರದ ರಿಪೋರ್ಟ್ ಹೇಳುತ್ತದೆ. ಹಾಗು ಆ ಬಾಷೆಯ ನಾಶಕ್ಕೆ ತುಳುವರು ಕಾರಣ ಹೊರತು ಆಡಳಿತ ಮಾಡುವ ಯಾವುದೇ ಸರಕಾರವಲ್ಲ ಎಂದು ಹೇಳಿದೆ! ಆದರೂ....

ಪ್ರಶ್ನೆ -2 ಓಕೆ, ನೀವು ನಿಮ್ಮ ಮನೆಯಲ್ಲಿ ಅಲ್ಲದೇ ಕುಟುಂಬದ ಬೇರೆಯವರಲ್ಲಿ ತುಳುವಿನಲ್ಲಿ ವ್ಯವಹಾರ ಮಾಡಿದ ನೆನಪಿದೆಯಾ? ಕರ್ನಾಟಕ ಸರಕಾರ ಕನ್ನಡದ ಉಳಿವಿಗಾಗಿ ಹಾಗು ಅದರ ಬೆಳವಣಿಗೆಗಾಗಿ ಎಷ್ಟೇ ಕಾನೂನು ತಂದರೂ ಅದರ ಪರಿಣಾಮ ನಿಮ್ಮ ಕುಟುಂಬದ ಮೇಲೆ ಯಾಕೆ ಬೀರಲಿಲ್ಲ ಎನ್ನುವುದು ಆಶ್ಚರ್ಯವೆ? ಅದವಾ ನಿಮಗೆ ಕಾನೂನಿನ ಅರವಿಲ್ಲವಾ?

ಕಟ್ಟ ಕಡೆಯ ತುಳುವ -  ಸರ್ ನನ್ನ ಮನೆ ಇರುವುದು ಪುತ್ತೂರು ಹಾಗು ಸುಳ್ಯದ ದಟ್ಟ ಕಾಡಿನ ಒಳಗೆ ನಾವೇ ನಾಡಿಗೆ ಬರಲು ಕಷ್ಟ ಪಡುತ್ತೇವೆ, ಇನ್ನೂ ಸರಕಾರದ ಜನರು ಈ ಬಡ ತುಳುವನಿಗೋಸ್ಕರ ಯಾಕೆ ಬರಬೇಕು?
ಇನ್ನು ನಾವು ಪೇಟೆಗೆ ಹೋದರೆ ಯಾರಲ್ಲಿ ತುಳು ಮಾತಾಡಲಿ  ಹೇಳಿ? ಇನ್ನು ನಾನು ತುಳು ಮಾತಾಡಿದರೆ ಕನ್ನಡ ಸಂಘ ಸಂಸ್ಥೆಗಳ ಸಹಾಯದಿಂದ ಈ ಸರಕಾರ ಯಾವುದಾದರೂ ಕೇಸ್ ಜಡಿದು ಜೈಲಿಗೆ ಕಳಿಸುತ್ತಾರೆ ಎನ್ನುವ ಸತ್ಯ ಗೊತ್ತಿದೆ ಸರ್.. 😳

ಸಂದರ್ಶಕ - ಆಯಿತು ನಿಮ್ಮ ಮಾತು ಇಲ್ಲಿ ಯಾರು ಕೇಳುವುದಿಲ್ಲ ಹಃ ಹಃ.. ನಮ್ಮ ಮಾತನ್ನು ಆಮೇಲೆ ಆಲಿಸುತ್ತೇವೆ. ನಮ್ಮ ಜೊತೆಯಲ್ಲಿ ಕನ್ನಡ ಸರಕಾರದ ಎಮ್ಮೆಯ ಮುಖ್ಯಮಂತ್ರಿ ಹಾಗು ರಕ್ಷಣಾವೇದಿಕೆಯ ಅಧ್ಯಕ್ಷರಾದ ಮಾನ್ಯ ಚೀ. ರೆ.ಬ್ಯಾ ಗೌಡರು ಇದ್ದಾರೆ.

ಸರ್...  ನೀವು ನಿಮ್ಮ ಜೀವಿತವನ್ನು ಕನ್ನಡಕೊಸ್ಕರ ಮುಡಿಪಾಗಿಟ್ಟಿದ್ದೀರ? ಕನ್ನಡಕೊಸ್ಕರ ಹವಾಯಿ ಚಪ್ಪಲಿ ಹಾಕಿ ಬೆಂಗಳೂರಿಗೆ ಕೆಂಪು ಬಸ್ ಹತ್ತಿ ಬಂದು ಅನ್ಯ ಬಾಷೆಯ ಧ್ವನಿಯನ್ನು ಅಡಿಗಿಸಿದ್ದೀರಿ, ನಿಮ್ಮ ಸಂಘಟನೆಯಿಂದಲೆ ತುಳುನಾಡಿನಲ್ಲಿ ತುಳು ಹಾವಳಿಯನ್ನು ಕಡಿಮೆ ಮಾಡಿದ ಇಂತಹ ಅದ್ಭುತ, ಕ್ರಾಂತಿಕಾರಿ ಕೆಲಸವನ್ನು ನಿಮ್ಮ ಸಂಘಟನೆಗೆ ಸಲ್ಲುತ್ತದೆ, ಅದಕ್ಕೆ ಅಭಿನಂದನೆಗಳು ಹಾಗು ನಿಮ್ಮ ಪಕ್ಷವು ಇಂತಹ ಒಳ್ಳೆಯ ಕೆಲಸವನ್ನು ಹೇಗೆ ಮಾಡಿದ್ದೀರಿ? ಆದರೆ ಇನ್ನೂ ನಮ್ಮ ರಾಜ್ಯದಲ್ಲಿ ಇಂತಹ ಕನ್ನಡ ವಿರೋಧಿಗಳು ನಿಮ್ಮ ಕಣ್ಣಿಗೆ ಬೀಳದೆ ತುಳು ಪರವಾಗಿ ಕೆಲಸ ಮಾಡುವವರು ಉಳುಕೊಂಡಿದ್ದಾರೆ ಅಂದರೆ ಇದು ನಿಮ್ಮ ವೈಫಲ್ಯ ಅನಿಸುದಿಲ್ಲವಾ?

ಮುಖ್ಯಮಂತಿ- ಚೀ.ರ.ಬ್ಯಾ - ನಾನು ರಾಜ್ಯಕೀಯಕ್ಕೆ ಬರುವ ಮೊದಲು ಮಾಡದ ಕೆಲಸವೆಂದರೆ ಹಿಂದಿ ನಿಷೇಧ ಹಾಗು  ಅಲ್ಲಿನ ಪ್ರಬಲವಾದ ರಕ್ಷಣಾವೇದಿಕೆಯನ್ನು ನಮ್ಮ ಸಂಘಟನೆಯ ಜೊತೆ ಸೇರಿಸಿ ಅಲ್ಲಿನ ಜನರನ್ನು ಕನ್ನಡಿಕರಣ ಮಾಡಿದ್ದು, ಈಗ ಅವರು ನಮ್ಮ ಸಂಪುಟದ ಮಂತ್ರಿಯಾಗಿದ್ದಾರೆ..
ಇನ್ನು ನಾವು ಅಧಿಕಾರ ಬಂದ ಮೇಲೆ ಅಲ್ಲಿನ ಇನ್ನೊಂದು ಸಂಘಟನೆಯ ಜನರನ್ನು ರಾಜ್ಯ ದ್ರೋಹದ ಅಡಿಯಲ್ಲಿ ಅನೇಕ ಕೇಸ್ ಹಾಕಿ ಜೈಲಲ್ಲಿ ಕಂಬಿ ಎಣಿಸುತ್ತಿದ್ದಾರೆ..ಈಗ ಎಲ್ಲಿದೆ ತುಳುನಾಡು? ನಮ್ಮ ಅಜೆಂಡ ಒಂದೇ ಒಂದು ರಾಜ್ಯ ಒಂದು ಬಾಷೆ! ಅದರಲ್ಲಿ ನಾವು ಯಶಸ್ವಿಯಾಗಿದ್ದೇವೆ ಅನಿಸುತ್ತದೆ.. ಕನ್ನಡ ಬಾಷೆಯ ಬಗೆ ಅನ್ಯಾಯ ಅದಾಗ ಪ್ರತ್ಯೇಕ ದೇಶಕ್ಕಾಗಿ ಹೋರಾಟವನ್ನು ಮಾಡಿದ್ದೇವೆ, ಇದು ತಪ್ಪಲ್ಲ,

ಸಂದರ್ಶಕ - ಅದಕ್ಕಿಂತ ನೀವು ತುಳುನಾಡಿನ ಸಂಸ್ಕೃತಿ ಎಂದು ಜನರಲ್ಲಿ ಮೂಡನಂಬಿಕೆಯಾದ ಭೂತರಾದನೆ, ನೇಮ, ಅಗೆಲು, ಕೊಲ ಮುಂತಾದವುಗಳನ್ನು ಅನೇಕ ಕಾನೂನು ತಂದು ನಿಷೇಧ ಮಾಡಿದ್ದು, ಇದರ ಬಗೆ ಹೆಮ್ಮೆ ಎನಿಸುತ್ತದೆ, ಸರಿಯಾಗಿ ನೋಡಿದರೆ ತುಳುವರದ್ದು ಎನ್ನುವುದು ಯಾವುದು ಇಲ್ಲ,

ಕಟ್ಟ ಕಡೆಯ ತುಳುವ - ಮಾನ್ಯ ಮುಖ್ಯಮಂತ್ರಿಗಳೆ ನನ್ನದು ಒಂದು ಕೋರಿಕೆ ಇದೆ. ನಿಮ್ಮ ಕಾಲು ಇಡಿದು ಬೇಡಿ ಕೊಳ್ಳುತ್ತೇನೆ.. ದಯವಿಟ್ಟು ಅದರ ಬಗೆ ಒಮ್ಮೆ ಗಮನ ಕೊಡಿ.

ಮುಖ್ಯಮಂತಿ- ಚೀ.ರ.ಬ್ಯಾ - ಏನೋ ನಿನ್ನ ಗೋಳು? ನೋಡೋಣ ಕನ್ನಡಿಗರು ಒಪ್ಪಿದರೆ ಚಿಂತಿಸೊಣ.

ಕಟ್ಟ ಕಡೆಯ ತುಳುವ - ಮಾನ್ಯ ಮುಖ್ಯಮಂತ್ರಿಗಳೆ ನಾವು ತುಳು ಭಾಷೆಯನ್ನು ಸವೀಂಧಾನ 8 ನೇ ಪರಿಚ್ಛೇದಕ್ಕೆ ಸೇರಿಸುವ ಬಗೆ ಸುಮಾರು 80 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ, ಫಲಿತಾಂಶ ಸೊನ್ನೆ. ಬಗೆ ಕೇಂದ್ರ ಸರಕಾರಕ್ಕೆ ಮನವಿ ಸಲಿಸಿ ನಮ್ಮ ಭಾಷೆಯನ್ನು ಉಳಿಸಬೇಕು, ಹಾಗು ಇನ್ನೊಂದು ಮನವಿ ತುಳು ಭಾಷೆಯನ್ನು ಕರ್ನಾಟಕದ ಅಧಿಕೃತ ಹಾಗು ಎರಡನೆಯ ಭಾಷೆಯಾಗಿ....

ಅವನ ಮಾತನ್ನು ತುಂಡರಿಸಿ ಕೆಂಡಮಂಡಲವಾದ ಮುಖ್ಯಮಂತ್ರಿಯು ಕಟ್ಟ ಕಡೆಯ ತುಳುವನಿಗೆ ನಿನಗೆ ಇಲ್ಲಿ ಸಂದರ್ಶನ ಮಾಡಲು ಬಿಟ್ಟಿದ್ದೇ ತಪ್ಪು.. ಇನ್ನೂ ಬೆರಳೆಣಿಕೆಯ ಜನ ಇರುವ ನಿನ್ನ ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಮಾಡಬೇಕಾ? ಇದು ಅತಿಯಾದ ಬೇಡಿಕೆ ಅನಿಸುವುದಿಲ್ಲವಾ?
ಇನ್ನೂ ಸವಿಂಧಾನದ 8ನೇ ಪರಿಚ್ಛೇದದ ಬಗೆ ಕೇಂದ್ರ ಸರಕಾರಕ್ಕೆ ನೀನು ಮನವಿ ಸಲಿಸಬೇಕಾಗಿರುವುದು ನೀವು ಕನ್ನಡಿಗರು ಅಲ್ಲ, ಏನಾದರು ಕೇಂದ್ರದಲ್ಲಿ ನಮ್ಮ ಕನ್ನಡ ಸರಕಾರ ಅಧಿಕಾರಕ್ಕೆ ಬಂದರೆ ನಿನ್ನ ಬೇಡಿಕೆಯನ್ನು ಪೂರೈಸುತ್ತೇವೆ, ಈಗ ಉಳಿದಿರುವ ಬೆಳಣಿಕೆಯ ತುಳುವರನ್ನು ಕರೆದುಕೊಂಡು ದೆಹಲಿಗೆ ಬೇಡಿಕೆ ಸಲೀಸು, ನಾವು ಬಾಹ್ಯ ಬೆಂಬಲವಾಗಿ ನಿಲ್ಲುತ್ತವೆ..

ಸಂದರ್ಶಕ - ನಿಮಗೆ ಇಷ್ಟು ಭರವಸೆ ಯಾರು ಕೊಡುವುದಿಲ್ಲ,   ಸಂತೋಷದಿಂದ ನೀವು ಊರಿಗೆ ಮರಳಬಹುದು.. ಕೊನೆಯದಾಗಿ ನಿಮಗೆ ಗೊತ್ತಿರುವ ಒಂದು ತುಳು ವಾಕ್ಯ ಹೇಳಿ?

ಕಟ್ಟ ಕಡೆಯ ತುಳುವ - ಕೈ ಮುಗಿದು  "ಅಣ್ಣಾ ಎನ್ನನ್ ಬುಡ್ಲೆ ಊರುಡ್ ನಾಲ್ ನುಪ್ಪು ತಿನ್ತ್ ಬದುಕೊನುವೆ"...

ಸಂದರ್ಶಕ - ಕೋಪದಿಂದ, ಇವರು ಮಾತಿನ ಅರ್ಥ ಆ ದೇವರಿಗೆ ಗೊತ್ತು.. ಕನ್ನಡದ ಬಗೆ ಬೈದ ರೀತಿಯಲ್ಲಿ ಇದೆ, ಇದರ ಬಗೆ ಇನ್ನಷ್ಟು ಕೇಳುವ ಮೊದಲು ಒಂದು ಕಮರ್ಷಿಯಲ್ ಬ್ರೇಕ್....

(ಭಾಗ ಒಂದು ಮುಂದುವರಿಯುತ್ತದೆ)

ರಿಪೋರ್ಟರ್ - ಮಾಜಿ ತುಳುವೇ ..
Copy post

No comments:

Post a Comment