Monday 17 July 2017

ಸದಾಶಿವ ಬ್ರಹ್ಮಾವರ

ಸದಾಶಿವ ಬ್ರಹ್ಮಾವರ
ಉಡುಪಿ ಜಿಲ್ಲೆಯ ಬ್ರಹ್ಮಾವರದ ಬಡ ಮನೆತನದಲ್ಲಿ ಹುಟ್ಟಿದ ಬಾಲಕ ಸದಾಶಿವ ಬ್ರಹ್ಮವಾರ ಅನಿವಾರ್ಯವಾಗಿ ರಂಗಭೂಮಿಯ ವಿಂಗಿನಲ್ಲಿ ಬೆಳೆಯಬೇಕಾಗಿ ಬಂತು. ಅಲ್ಲಿ ಪರದೆ ಹಿಡಿಯುವುದರಿಂದ ಹಿಡಿದು ಪೋಷಕ ಪಾತ್ರಗಳನ್ನು ವಹಿಸುವಲ್ಲಿಯವರೆ
ಗಿನ ಎಲ್ಲ ಕೆಲಸಗಳನ್ನೂ ಕರಗತ ಮಾಡಿಕೊಂಡರು.


”ನನಗೆಲ್ಲ ಗೊತ್ತು,” ಎಂದು ಯಾವತ್ತೂ ಗರ್ವ ತೋರದೇ, ಸರ್ವರೊಳಗೊಂದಾಗಿ ಬೆರೆತರು. ಅನ್ನವಿಕ್ಕಿ, ಆಶ್ರಯವಿತ್ತು, ಆತ್ಮೀಯತೆಯಿಂದ ನೋಡಿಕೊಂಡ ಎಲ್ಲರ ಬಗ್ಗೆಯೂ ಅವರಿಗೆ ಗೌರವ, ವಿನೀತಭಾವ.

ತಮ್ಮ ಹದಿನೈದನೆಯ ವರ್ಷದಿಂದಲೇ ಕಲಾಭೂಷಣ ಏಣಗಿ ಬಾಳಪ್ಪನವರ ‘ಕಲಾವೈಭವ ನಾಟ್ಯ ಸಂಘ’ದಲ್ಲಿ ಕೆಲಸ ಮಾಡತೊಡಗಿದ ಸದಾಶಿವ, ಊರಿನ ಹೆಸರನ್ನೇ ಅಡ್ಡ ಹೆಸರನ್ನಾಗಿ ಇಟ್ಟುಕೊಂಡರು. ಸದಾಶಿವ ಬ್ರಹ್ಮಾವರರನ್ನು ಇವತ್ತಿಗೂ ಶತಾಯುಷಿ ಏಣಗಿ ಬಾಳಪ್ಪನವರು ಪುತ್ರವಾತ್ಸಲ್ಯದಿಂದಲೇ ಕಾಣುತ್ತಾರೆ. ಇವರೂ ಅಷ್ಟೇ ; ಬಾಳಪ್ಪನವರನ್ನು ‘ಮಾಲಿಕರೆಂದೇ’ ಕರೆಯುತ್ತಾರೆ.

ಕಲಾವೈಭವ ನಾಟ್ಯ ಸಂಘ’ ಮುಚ್ಚಿದ ಮೇಲೆ ಬೇರೆ ಬೇರೆ ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿದ ಸದಾಶಿವ ಬ್ರಹ್ಮಾವರ ಅವರು ಗಾಂಧೀ ನಗರದ ನಿರ್ಮಾಪಕರ ಕಣ್ಣಿಗೆ ಬಿದ್ದರು. ಆಗಿನಿಂದ ಈ ತನಕ ಏನಿಲ್ಲೆಂದರೂ ಇನ್ನೂರು ಕನ್ನಡ ಸಿನಿಮಾಗಳಲ್ಲಿ ತಂದೆ, ತಾತ, ಮನೆಯಾಳು, ಶಾಲಾ ಶಿಕ್ಷಕ ಹೀಗೆ ಪೋಷಕ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತ, ಕನ್ನಡ ಚಿತ್ರ ರಸಿಕರ ಮನದಲ್ಲಿ ಆತ್ಮೀಯರಾಗಿ ಕೂತವರು. ಯಾವುದೇ ದುಶ್ಚಟಗಳಿಗೆ ಬಲಿಯಾಗದೇ, ಆರೋಗ್ಯವನ್ನು ಕಾಪಾಡಿಕೊಂಡು ಬಂದಿರುವ ಸದಾಶಿವ ಬ್ರಹ್ಮಾವರ ಅವರೊಂದಿಗೆ ಮಾತಾಡುವುದೇ ಒಂದು ಆನಂದದ ಅನುಭವ ನೀಡುತ್ತದೆ.

ಇಂಥ ಸ್ವಾಭಿಮಾನಿ ಹಿರಿಯರಿಗೆ 2015ರ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ದೊರೆತಿರುವುದು ಆ ಪ್ರಶಸ್ತಿಗೆ ನಿಜಕ್ಕೂ ಬೆಲೆ ಬಂದಂತಾಗಿದೆ.

ರಂಗಭೂಮಿಯ ನಡೆದಾಡುವ ವಿಶ್ವಕೊಶವೇ ಆಗಿರುವ ಸದಾಶಿವ ಬ್ರಹ್ಮಾವರ ಅವರಿಗೆ ಈ ಮೂಲಕ ನನ್ನ ಅಭಿನಂದನೆಗಳು.💐

#copyPaste

No comments:

Post a Comment