ಪ್ರತ್ಯೇಕ ತುಳು ರಾಜ್ಯ
ಸ್ವಾತಂತ್ರ್ಯ ಪೂರ್ವದಲ್ಲೇ ಹೋರಾಟ , ಈಗ ಫೇಸ್ ಬುಕ್ ,ವ್ಯಾಟ್ಅಪ್ ಇತರ ಸಾಮಾಜಿಕ ಜಾಲತಾಣದಲ್ಲಿ ತುಳುನಾಡ ಯುವಕರಿಗೆ ಜನಜಾಗೃತಿ ಮೂಡಿಸಲು ವಿನಂತಿ
ಆಂಧ್ರಪ್ರದೇಶದಿಂದ ಪ್ರತ್ಯೇಕವಾದ ತೆಲಂಗಾಣ ದೇಶದ 29ನೇ ರಾಜ್ಯವಾಗಿ ಹೊರಹೊಮ್ಮಿದರೂ ತುಳು ನಾಡು ಸಹಿತ ಹೊಸ ರಾಜ್ಯಗಳ ರಚನೆಯ ಬೇಡಿಕೆ ಇನ್ನೂ ಬೂದಿ ಮೆಚ್ಚಿದ ಕೆಂಡ...
ದೇಶದಲ್ಲಿರುವ 28+1 ರಾಜ್ಯ, ಏಳು ಕೇಂದ್ರಾಡಳಿತ ಪ್ರದೇಶಕ್ಕೆ ಹೆಚ್ಚುವರಿಯಾಗಿ 15 ರಾಜ್ಯ ರಚಿಸಬೇಕೆನ್ನುವ ಬೇಡಿಕೆ ಕೆಲ ದಶಕಗಳಿಂದಿದೆ. ತುಳು ನಾಡಿಗಾಗಿ ಸ್ವಾತಂತ್ರ್ಯ ಪೂರ್ವದಿಂದಲೇ ಹೋರಾಟ ನಡೆಯುತ್ತಿದೆ.
ಏನಿದು ತುಳು ನಾಡು?: ಕರ್ನಾಟಕ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಕೇರಳದ ಕಾಸರಗೋಡು(ನೀಲೇಶ್ವರ ತನಕ) ಭಾಗವನ್ನು (ಬಾರಕೂರು-ಕಾಸರಗೋಡು) ತುಳು ನಾಡು ರಾಜ್ಯವಾಗಿ ರೂಪಿಸಬೇಕೆನ್ನುವ ಕೂಗು ಭಾಷೆ-ಸಂಸ್ಕೃತಿ ಆಧಾರದಲ್ಲಿ ಹಾಗೂ ತುಳುನಾಡಿನ ಮೇಲೆ ಹೇರುತ್ತಿರುವ ಉದ್ದಿಮೆಗಳ ಹಿನ್ನೆಲೆಯಲ್ಲಿ ಕಳೆದೆರಡು ದಶಕಗಳಿಂದ ಬಲವಾಗಿ ಕೇಳಿಬರುತ್ತಿದೆ.
ಪ್ರತ್ಯೇಕತೆಯ ಕೂಗು ತಗ್ಗಿಸಲು ಕರ್ನಾಟಕ ಮತ್ತು ಕೇರಳ ಸರಕಾರ ತುಳು ಸಾಹಿತ್ಯ ಅಕಾಡೆಮಿ ರೂಪಿಸಿದೆ. ಆದರೆ 1956ರಲ್ಲಿ ಭಾಷಾ ವಾರು ಪ್ರಾಂತ್ಯ ರಚನೆಯಾಗಿ ತುಳುನಾಡ ಭಾಗವಾಗಿದ್ದ ಕಾಸರ ಗೋಡು ಕೇರಳದ ಪಾಲಾದ ಬಳಿಕ ತುಳು ಭಾಷೆಗೆ ಅಧಿಕೃತ ಸ್ಥಾನಮಾನ, ತುಳು ನಾಡು ಸ್ಥಾಪನೆಗೆ ಕೂಗು ಕೇಳುತ್ತಿದೆ.
ವಿಜಯ ನಗರ ಆಡಳಿತದ ಕಾಲದಲ್ಲಿ ಮಂಗಳೂರು ರಾಜ್ಯ, ಬಾರ್ಕೂರು ರಾಜ್ಯ ಸಹಿತ ತುಳು ನಾಡು 17ನೇ ಶತಮಾನದ ತನಕವೂ ಅಸ್ತಿತ್ವದಲ್ಲಿತ್ತು. ಭಾಷಾವಾರು ಪ್ರಾಂತ್ಯ (ರಾಜ್ಯ) ರಚನೆ ಸಂದರ್ಭ (1956) ಮದ್ರಾಸ್ ಪ್ರಾಂತ್ಯ ವ್ಯಾಪ್ತಿಯಲ್ಲಿದ್ದ ಸೌತ್ ಕೆನರಾ(ತುಳು ನಾಡು) ಮೈಸೂರು ರಾಜ್ಯದ ಭಾಗವಾಯಿತು.
ತುಳು ರಾಜ್ಯ ಯಾಕೆ?:
ಎಂಆರ್‌ಪಿಎಲ್, ಬಿಎಸ್‌ಎಫ್, ಎಸ್‌ಇ ಝೆಡ್, ಪಾದೂರು ಕಚ್ಛಾ ತೈಲ ಸಂಗ್ರಹಾಗಾರ, ಯುಪಿಸಿಎಲ್ ಬಳಿಕ ನಿಡ್ಡೋಡಿಯಲ್ಲೂ ಪರಿಸರ ಮಾರಕ ಉದ್ಯಮ ಹೇರುವ ಯತ್ನ ನಡೆಯುತ್ತಿದೆ. ನೆಲ, ಜಲ, ಪರಿಸರ ಕಲುಷಿತವಾಗುತ್ತಿದ್ದು ಜನರಿಗಿದು ಬದುಕಿನ ಅಳಿವು, ಉಳಿವಿನ ಪ್ರಶ್ನೆ ಎನ್ನುತ್ತಾರೆ ತುಳುನಾಡ ಯುವಕರು
ಕರಾವಳಿಯಲ್ಲಿ ಉತ್ಪಾದಿಸಿದ ವಿದ್ಯುತ್ ಬೇರೆಡೆಗೆ ಸಾಗಿಸಿ, ಇಲ್ಲಿಗೆ ಬೂದಿ ಮಾತ್ರ ಸಿಗುತ್ತಿದೆ. ಕರಾವಳಿಗಿಂತ ಚಿಕ್ಕ ಪ್ರದೇಶಕ್ಕೆ ರಾಜ್ಯವಾಗು ವ ಅದರಲ್ಲೂ ಪಂಚ ದ್ರಾವಿಡ ಭಾಷೆಗಳಾದ ತಮಿಳು, ತೆಲುಗು, ಕನ್ನಡ, ಮಲೆಯಾಳಕ್ಕೆ ರಾಜ್ಯ ದೊರೆತಿದ್ದರೂ ತುಳು ಭಾಷೆಗೆ ಮಾನ್ಯತೆಯೂ ಇಲ್ಲ, ರಾಜ್ಯವೂ ಇಲ್ಲ.
ತುಳು ನಾಡು ರಾಜ್ಯವಾದರೆ ಜನತೆ, ಪರಿಸರದ ಮೇಲಾಗುತ್ತಿರುವ ಶೋಷಣೆ ತಪ್ಪಿಸಬಹುದು. ಸಾಹಿತಿಗಳು ಪ್ರತ್ಯೇಕತೆ ಬೇಡವೆಂದರೂ ತುಳು ನಾಡಿನ ಜನರ ಸ್ವಾಭಿಮಾನದ ಬದುಕಿನ ನಿಟ್ಟಿನಲ್ಲಿ ಹೋರಾಟ ಅನಿವಾರ್ಯ. ಭಾಷೆಗೊಂದು ರಾಜ್ಯ ಕೊಡುವಾಗ ನಮಗೂ ಕೊಡಿ ಎನ್ನುವುದು ನಮ್ಮ ಬೇಡಿಕೆ ಎನ್ನುತ್ತಾರೆ ತುಳುನಾಡ ಯುವಕರ ಚಾವಾಡಿ ಕಾರ್ಯಕರ್ತರು
*ಸ್ವಾತಂತ್ರ್ಯ ಪೂರ್ವದಲ್ಲೇ ಪ್ರತ್ಯೇಕ ತುಳು ನಾಡು ರಚನೆಗಾಗಿ ಸಾಹಿತಿ ಎಸ್.ಯು. ಪಣಿಯಾಡಿ ಹೋರಾಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಗೆ ತುಳು ನಾಡು ಹೆಸರಿಡಲು ನಿರ್ಣಯವನ್ನೂ ಮಂಡಿಸಿದ್ದರು. ರಾಜ್ಯ ಸರಕಾರ ಕೃಷಿ ಭೂಮಿಯಲ್ಲಿ ಜನವಿರೋಧಿ ಧೋರಣೆ ತಳೆದು ಪರಿಸರಕ್ಕೆ ಮಾರಕವಾದ ಉದ್ಯಮ ಸ್ಥಾಪನೆ, ನೇತ್ರಾವತಿ ನದಿಯ ಅವೈಜ್ಞಾನಿಕ ತಿರುವು ಪ್ರಸ್ತಾವನೆಯಿಂದಾಗಿ ನಮ್ಮ ಭವಿಷ್ಯ ನಾವೇ ರೂಪಿಸಲು ತೆಲಂಗಾಣ ಮಾದರಿಯಲ್ಲಿ ತುಳು ನಾಡಿಗಾಗಿ ಮುಂದಿನ ದಿನಗಳಲ್ಲಿ ಹೋರಾಟ ನಡೆದರೂ ಅಚ್ಚರಿಯಿಲ್ಲ. -ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ, ವಿಮರ್ಶಕರು, ಉಡುಪಿ.
*ನೆಲ, ಜಲ, ಪರಿಸರಕ್ಕೆ ಮಾರಕವಾದ ಉದ್ಯಮಗಳನ್ನು ಕರಾವಳಿಗೆ ಹೇರಲಾಗುತ್ತಿದ್ದು, ಇದು ಜನರ ಬದುಕಿನ ಅಳಿವು ಉಳಿವಿನ ಪ್ರಶ್ನೆ. ತುಳು ಭಾಷೆಗೆ ರಾಜ್ಯ ಸರಕಾರದಿಂದ ಅಧಿಕೃತ ಭಾಷಾ ಮಾನ್ಯತೆ, ಸಂವಿಧಾನದ ಎಂಟನೇ ಪರಿಚ್ಛೇದದಡಿ ಸೇರ್ಪಡೆ ಹಾಗೂ ಪರಿಸರಕ್ಕೆ ಮಾರಕವಾದ ಉದ್ಯಮ ಸ್ಥಾಪನೆ ವಿರುದ್ಧ ಹೋರಾಟ ನಡೆಯಲಿದೆ.
ತುಳು ರಾಜ್ಯ ಹೋರಾಟಕ್ಕೆ ಚಾಲನೆ ನಿಟ್ಟಿನಲ್ಲಿ ಯುವಕರು ಜಾತಿ ,ಮತ ,ಬೇಧವಿಲ್ಲದೆ ಜನಜಾಗೈತಿ ಮೂಡಿಸಲಿದ್ದಾರೆ ಸ್ಷಷ್ಟ ವಾಗಿ ಗೋಚರಿಸುವ ಲಕ್ಷ ಣಗಳು ಕಂಡು ಬರುತ್ತದೆ
ತುಳುನಾಡ್ ದ ಮಾತಾ ಜವನಿಯೆರ್ಗ್ ಕಡಪಾ

No comments:
Post a Comment